Advertisement
ಹಿಂದೂ ಯುವತಿ ಮೇಲಿನ ಅತ್ಯಾಚಾರವನ್ನು ಖಂಡಿಸಿ ಹಿಂದೂ ಸಂಘಟನೆಗಳಿಂದ ನಗರದಲ್ಲಿ ನಡೆದ ಖಂಡನಾ ಮೆರವಣಿಗೆ ಬಳಿಕ ಮಂಜುನಾಥ ಪೈ ಸಭಾಂಗಣದಲ್ಲಿ ಜರಗಿದ ಖಂಡನಾ ಸಭೆಯಲ್ಲಿ ಮಾತನಾಡಿದರು. ಡ್ರಗ್ಸ್ ವಿಚಾರದಲ್ಲೂ ರಾಜ್ಯ ಕುಖ್ಯಾತಿ ಪಡೆದಿದ್ದು, ಅದನ್ನು ಹತ್ತಿಕ್ಕುವ ಕೆಲಸವಾಗಬೇಕು. ಕೆಲವು ಮತೀಯ ಕಸಗಳು ದೇಶದ ಸಂಸ್ಕೃತಿಯನ್ನು ಹಾಳುಗೆಡವುತ್ತಿವೆ. ಇಂತಹ ಕಸವನ್ನು ಕಿತ್ತೆಸೆಯಲು ಹಿಂದೂ ಸಮಾಜ ಒಗ್ಗೂಡಬೇಕಿದೆ ಎಂದ ಅವರು, ಅತ್ಯಾಚಾರ ಸಂತ್ರಸ್ತೆಯನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾಗಿ ತಿಳಿಸಿದರು.
ಶಾಸಕ ವಿ.ಸುನಿಲ್‌ಕುಮಾರ್ ಮಾತನಾಡಿ, ಡ್ರಗ್ಸ್, ಲವ್ ಜಿಹಾದ್ ಕುರಿತು ಸರಕಾರ ಮೃದು ಧೋರಣೆ ಜೆಹಾದಿ ಗಳಿಗೆ ಅನುಕೂಲವಾಗಿದೆ. ಲವ್ ಜೆಹಾದ್ ಅನ್ನು ಸರಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಇಂತಹ ಘಟನೆಗಳು ಸಮಾಜದಲ್ಲಿ ಮರುಕಳಿಸುತ್ತಲೇ ಇರುತ್ತದೆ ಎಂದರು. ಹಿಂದೂ ಸಂಘಟನೆ ಮುಖಂಡ ಉದ್ಯಮಿ ಮಹೇಶ್ ಶೆಟ್ಟಿ ಕುಡುಪುಲಾಜೆ, ಸಾಮಾಜಿಕ ಕಾರ್ಯಕರ್ತೆ ಮಿತ್ರಪ್ರಭಾ ಹೆಗ್ಡೆ, ಎಸ್‌ಸಿ, ಎಸ್‌ಟಿ ಸಮುದಾಯದ ಮುಖಂಡ ಮುನಿಯಪ್ಪ ದೊಡ್ಡಮನಿ, ಶಂಕರ ಕೋಟ ಮೊದಲಾದವರು ವೇದಿಕೆಯಲ್ಲಿದ್ದರು.
ಹಿಂದೂ ಮುಖಂಡ ಸುನಿಲ್.ಕೆ.ಆರ್ ಪ್ರಸ್ತಾವಿಸಿದರು. ಬಜರಂಗದಳ ತಾಲೂಕು ಸಂಚಾಲಕ ಮನೀಶ್ ನಿಟ್ಟೆ ಸ್ವಾಗತಿಸಿ, ಶೈಲೇಶ್ ಸಾಣೂರು ನಿರ್ವಹಿಸಿದರು.
Related Articles
Advertisement
ಮುಸ್ಲಿಂ ಸಂಘಟನೆಗಳ ನಿಲುವು ಸ್ವಾಗತಾರ್ಹಕಾರ್ಕಳದ ಹಿಂದೂ ಯುವತಿ ಮೇಲಿನ ಅತ್ಯಾಚಾರವನ್ನು ಮುಸ್ಲಿಂ ಸಂಘಟನೆಗಳು ಖಂಡಿಸಿರುವುದನ್ನು ಸ್ವಾಗತಿಸುತ್ತೇನೆ. ನೀವು ಯಾವತ್ತೂ ಇದೇ ನಿಲುವನ್ನು ಹೊಂದಿರಬೇಕು. ಆದರೆ ಅತ್ಯಾಚಾರ ಆರೋಪಿ ಮುಸ್ಲಿಂ ಒಕ್ಕೂಟದಲ್ಲಿಲ್ಲ ಎನ್ನುವ ನೀವು, ಆತನಿಗೆ ಏನು ಶಿಕ್ಷೆ ಕೊಡುತ್ತೀರಿ? ಮುಸ್ಲಿಂ ಸಮುದಾಯದಲ್ಲಿ ಜಾಗೃತಿ ಅಗತ್ಯವಾಗಿದೆ. ನೀವು ಸೌಹಾರ್ದಕ್ಕೆ ಸ್ಪಂದಿಸದಿದ್ದರೆ ಹಿಂದೂ ಸಮಾಜ ಆಕ್ರೋಶಿತರಾಗುವ ದಿನ ದೂರವಿಲ್ಲ ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.