Advertisement
ಸುಂದರ ಬೃಹತ್ ಕಟ್ಟಡ2017ರ ಫೆಬ್ರವರಿಯಲ್ಲಿ ನೂತನ ಆಸ್ಪತ್ರೆ ಕಟ್ಟಡಕ್ಕೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಶಿಲಾನ್ಯಾಸ ನೆರವೇರಿಸಿದ್ದರು. ಎರಡು ವರ್ಷಗಳಲ್ಲೆ ಆಸ್ಪತ್ರೆ ಗುತ್ತಿಗೆ ಪಡೆದ ಸ್ಟಾರ್ ಬಿಲ್ಡರ್ ಆ್ಯಂಡ್ ಡೆವಲಪರ್ ಬೆಂಗಳೂರು ಕಂಪೆನಿಯು ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಿದೆ.
ಸಿ.ಆರ್.ಎಂ., ಡಯಾಲಿಸಿಸ್ ಘಟಕ, ಆಧುನಿಕ ರೀತಿಯ ಐಸಿಯು, ಎಕ್ಸ್‌ರೇ, ಮೇಜರ್ ಒಟಿ, ಐಒಟಿ, ಎಸ್‌ಎನ್‌ಸಿಯು ಘಟಕ, ಆಯುಷ್ ವಿಂಗ್, ಹೊಸ ಆಸ್ಪತ್ರೆ ಕಟ್ಟಡದೊಂದಿಗೆ ಎಲುಬು ಮತ್ತು ಕೀಲು ಚಿಕಿತ್ಸೆ ಸಂದರ್ಭ ಬಳಸುವ ಸಿಆರ್‌ಎಂ ಯಂತ್ರ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರಿಗಾಗಿ ಡಯಾಲಿಸಿಸ್ ಘಟಕ, ಆಧುನಿಕ ರೀತಿಯ ಐಸಿಯು ಘಟಕ, ಮೇಜರ್ ಆಪರೇಷನ್ ಥಿಯೇಟರ್, ಕಣ್ಣು ಆಪರೇಷನ್ ಥಿಯೇಟರ್ (ಐಒಟಿ), ನವಜಾತ ಶಿಶುಗಳ ತುರ್ತು ಚಿಕಿತ್ಸೆಗಾಗಿ ಎಸ್‌ಎನ್‌ಸಿಯು ಪಾಲನಾ ಕೇಂದ್ರ ಸ್ಥಾಪನೆಯಾಗುತ್ತಿದೆ. ಆಯುರ್ವೇದೀಯ ಔಷಧಿ ನೀಡುವ ನಿಟ್ಟಿನಲ್ಲಿ ಆಯುಷ್ ವಿಂಗ್ ತೆರೆಯಲಾಗುತ್ತಿದೆ.
Related Articles
Advertisement
ಕೊರತೆಬಹುತೇಕ ಎಲ್ಲ ವಿಭಾಗದ ತಜ್ಞ ವೈದ್ಯರುಗಳು ಆಸ್ಪತ್ರೆಯಲ್ಲಿದ್ದಾಗ್ಯೂ ಫಿಸಿಶಿಯನ್ (ವೈದ್ಯಕೀಯ ತಜ್ಞ), ರೇಡಿಯಾಲಜಿಸ್ಟ್ ಪರಿಣತ ವೈದ್ಯರು ಇಲ್ಲಿಲ್ಲ. ಹೊಸ ಆಸ್ಪತ್ರೆ ಉದ್ಘಾಟನೆ ವೇಳೆ ಈ ಹುದ್ದೆಯನ್ನು ಸರಕಾರ ಭರ್ತಿ ಮಾಡಬೇಕಾಗಿದೆ. ಸದ್ಬಳಕೆಯಾಗಲಿ
ಬಡ ಹಾಗೂ ಮಧ್ಯಮ ವರ್ಗದ ಜನತೆಯ ಆರೋಗ್ಯ ಸೇವೆಯನ್ನೇ ಪ್ರಮುಖ ಧ್ಯೇಯವಾಗಿ ಟ್ಟುಕೊಂಡು ನಿರ್ಮಾಣವಾಗುತ್ತಿರುವ ಈ ಆಸ್ಪತ್ರೆಯಲ್ಲಿ ವೈದ್ಯರ ಸೇವೆ ನಿರಂತರವಾಗಿ ದೊರೆಯಲಿ, ಸಾರ್ವಜನಿಕರು ಆಸ್ಪತ್ರೆಯನ್ನು ಸದ್ಬಳಕೆ ಮಾಡಿಕೊಳ್ಳುವಂತಾಗಲಿ. ಸ್ಪೆಷಲ್ ರೂಮ್ಸ್
ಖಾಸಗಿ ಆಸ್ಪತ್ರೆಯ ಮಾದರಿಯಲ್ಲಿಯೇ 4 ಸಿಂಗಲ್ ಸ್ಪೆಷಲ್ ರೂಂ, 3 ಡಬ್ಬಲ್ ಸ್ಪೆಷಲ್ ರೂಂ, 6 ಬೆಡ್‌ನ 9 ಮಹಿಳಾ ಹಾಗೂ ಪುರುಷರ ವಾರ್ಡ್ ಸೇರಿದಂತೆ 10 ಬೆಡ್ ಸಾಮರ್ಥ್ಯ ಹೊಂದಿರುವ ವಿಶಾಲವಾದ ವಾರ್ಡ್ ಒಳಗೊಂಡಿದೆ. ಹಳೆಯ ಆ್ಯಂಬುಲೆನ್ಸ್
ಆಸ್ಪತ್ರೆಗೆ ಅಗತ್ಯವಾಗಿ ಬೇಕಾಗಿರುವ ಆ್ಯಂಬುಲೆನ್ಸ್ ಸೇವೆ ಸದ್ಯ ಸಮರ್ಪಕವಾಗಿ ದೊರೆಯುತ್ತಿಲ್ಲ. ಇರುವ ಆ್ಯಂಬುಲನ್ಸ್ ವಾಹನ 11 ವರ್ಷಗಳ ಹಳೆಯದಾದ ಕಾರಣ ಪದೇ ಪದೇ ಕೆಡುತ್ತಿದೆ ಎನ್ನಲಾಗುತ್ತಿದೆ. ಕನಸಿನ ಕೂಸು
ನೂತನ ಸಾರ್ವಜನಿಕ ಆಸ್ಪತ್ರೆ ನನ್ನ ಕನಸಿನ ಕೂಸು. ಹೀಗಾಗಿ ಪ್ರತಿ ತಿಂಗಳು ಒಂದೆರಡು ಬಾರಿ ಆಸ್ಪತ್ರೆಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸುತ್ತಿದ್ದೇನೆ. ಆಸ್ಪತ್ರೆಗೆ ಬೇಕಾದ ಎಲ್ಲ ಯಂತ್ರೋಪಕರಣ ಅಳವಡಿಸಿದ ಬಳಿಕ, ಸಕಲ ಸೌಕರ್ಯದೊಂದಿಗೆ ಲೋಕಾರ್ಪಣೆ ಮಾಡಲಾಗುವುದು. ಅನಂತರ ಆಸ್ಪತ್ರೆಗೆ ಬಂದ ರೋಗಿಗಳಿಗೆ ಯಾವುದೇ ರೀತಿಯ ಕೊರತೆ ಎದುರಾಗಬಾರದು.
- ವಿ. ಸುನಿಲ್ ಕುಮಾರ್, ಶಾಸಕರು, ಕಾರ್ಕಳ – ರಾಮಚಂದ್ರ ಬರೆಪ್ಪಾಡಿ