Advertisement

Missing Case ಕಾರ್ಕಳ ನಗರ ಠಾಣಾ ಎಚ್‌ಸಿ ಶೃತಿನ್‌ ಶೆಟ್ಟಿ ನಾಪತ್ತೆ

08:43 PM Oct 21, 2023 | Team Udayavani |

ಪಡುಬಿದ್ರಿ: ಕಾರ್ಕಳ ನಗರ ಪೊಲೀಸ್‌ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌, ಕಾಪು ಜನಾರ್ದನ ದೇವಸ್ಥಾನ ಬಳಿಯ ಅಂಗಡಿಮನೆ ನಿವಾಸಿ ಶೃತಿನ್‌ ಶೆಟ್ಟಿ (35) ತಮ್ಮ ಬೈಕ್‌ ಜತೆ ನಾಪತ್ತೆಯಾಗಿರುವುದಾಗಿ ಪಡುಬಿದ್ರಿ ಠಾಣೆಯಲ್ಲಿ ಅವರ ಪತ್ನಿ ಪೂಜಾ ಶೆಟ್ಟಿ ಶುಕ್ರವಾರ ದೂರು ದಾಖಲಿಸಿದ್ದಾರೆ.

Advertisement

ಕಾರ್ಕಳ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶೃತಿನ್‌ ಶೆಟ್ಟಿ ಅ. 19ರಂದು ರಜೆ ಹಾಕಿದ್ದಾರೆ. ತಾನು ಮನೆಗೆ ಬರುತ್ತಿರುವುದಾಗಿ ಪತ್ನಿಗೆ ಮೊಬೈಲ್‌ ಮೂಲಕ ತಿಳಿಸಿದ್ದರು. ಆದರೆ ಮನೆಗೂ ಬಾರದೇ, ಕಾರ್ಕಳ ನಗರ ಠಾಣೆಗೂ ಹೋಗದೆ ಅವರು ನಾಪತ್ತೆಯಾಗಿದ್ದಾರೆ. ಶೃತಿನ್‌ ಶೆಟ್ಟಿ ಎರಡು ತಿಂಗಳ ಹಿಂದೆಯಷ್ಟೇ ಭಡ್ತಿಗೊಂಡು ಹೆಡ್‌ಕಾನ್‌ಸ್ಟೆಬಲ್‌ ಆಗಿ ಕಾರ್ಕಳ ನಗರ ಪೊಲೀಸ್‌ ಠಾಣೆಗೆ ಬಂದಿದ್ದರು.

ಸದ್ಯ ಅವರ ಮೊಬೈಲ್‌ ಕೂಡ ಸ್ವಿಚ್‌ ಆಫ್‌ ಆಗಿದೆ. ಪೂಜಾ ಶೆಟ್ಟಿ ದೂರಿನ ಬಳಿಕ ಸಿಸಿಟಿವಿ ಫೂಟೇಜ್‌ಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ.

178ಸೆ.ಮೀ. ಎತ್ತರ, ದೃಢಕಾಯದ ಶೃತಿನ್‌ ಶೆಟ್ಟಿ ತುಳು, ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ ಭಾಷೆ ಮಾತನಾಡುತ್ತಾರೆ. ಇವರ ಗುರುತು, ಪರಿಚಯ ಯಾರಿಗಾದರೂ ಇದ್ದಲ್ಲಿ ಪಡುಬಿದ್ರಿ ಠಾಣೆ (0820 2555452)ಯನ್ನು ಸಂಪರ್ಕಿಸಲು ಪಡುಬಿದ್ರಿ ಪೊಲೀಸರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next