Advertisement
ಕೆರ್ವಾಶೆ ಭಾಗದಲ್ಲಿ 2022ರ ಜೂನ್‌ನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಕೆರ್ವಾಶೆ ಗ್ರಾ.ಪಂ. ವ್ಯಾಪ್ತಿಯ 75ರ ವಯಸ್ಸಿನ ಶೆಟ್ಟಿಬೆಟ್ಟು ಸರಸ್ವತಿ ಗುಡಿಗಾರ್ ಅವರ ಮನೆಗೆ ಹಾನಿಯಾಗಿತ್ತು. ಮನೆಯ ಗೋಡೆ ಕುಸಿದು ಬಿದ್ದು, ಹೆಂಚುಗಳು ಧರಾಶಾಹಿಯಾಗಿ ಮನೆ ಕಳೆದುಕೊಂಡಿದ್ದರು.
Related Articles
Advertisement
ಅಡಿಪಾಯದಿಂದ ಮನೆ ಮೇಲೆ ಏರಿಲ್ಲ!
ಮೊದಲ ಕಂತಿನ ಹಣ 95 ಸಾವಿರ ರೂ. ಫಲಾನುಭಾವಿ ಖಾತೆಗೆ ಬಿದ್ದಿದೆ. ಅದರಲ್ಲಿ ಮನೆಯ ಅಡಿಪಾಯ ಕಾಮಗಾರಿ ನಡೆಸಿದ್ದು. ಬಳಿಕದ ಪರಿಹಾರ ಹಣ ಖಾತೆಗೆ ಬರಲೇ ಇಲ್ಲ. ಬಾಕಿ ಉಳಿದ ಮೊತ್ತಕ್ಕಾಗಿ ಅಜ್ಜಿ, ಸಂಬಂಧಿಕರು ಕಚೇರಿಗಳಿಗೆ ಅಲೆದಾಡುತ್ತಲೇ ಇದ್ದಾರೆ. ಮನೆಯಿಲ್ಲದೆ ಇದೀಗ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಬಾಡಿಗೆ ನೀಡುವುದಕ್ಕೂ ಅಜ್ಜಿ ಬಳಿ ಹಣವಿಲ್ಲ.
ಐದು ಹಂತಗಳಲ್ಲಿ ಪರಿಹಾರ
ಅರ್ಹ ಫಲಾನುಭವಿಗಳಿಗೆ ಜಿಪಿಎಸ್ ಛಾಯಾಚಿತ್ರಗಳ ಆಧಾರದಲ್ಲಿ 5 ಕಂತುಗಳಲ್ಲಿ ಪರಿಹಾರ ಹಣ ಖಾತೆಗೆ ಜಮೆಗೊಳ್ಳುತ್ತದೆ. ಆರಂಭಿಕ ಹಂತ 95 ಸಾವಿರ ರೂ., ಎರಡನೇ ಹಂತದಲ್ಲಿ ತಳಪಾಯಕ್ಕೆ 1 ಲಕ್ಷ ರೂ., 3ನೇ ಹಂತದಲ್ಲಿ ಗೋಡೆ 1 ಲಕ್ಷ ರೂ., 4ನೇ ಹಂತದಲ್ಲಿ ಛಾವಣಿಗೆ 1 ಲಕ್ಷ ರೂ., ಪೂರ್ಣವಾಗುವ ವೇಳೆಗೆ ಒಟ್ಟು 5 ಲಕ್ಷ ರೂ. ಫಲಾನುಭವಿಗೆ ಸಂದಾಯವಾಗುತ್ತದೆ.
ಪರಿಹಾರ ಹಿಂಪಡೆಯುವ ಭೀತಿ
ಪರಿಹಾರ ಮಂಜೂರಾತಿ ಬಳಿಕ 1 ತಿಂಗಳೊಳಗೆ ಮನೆ ತಳಪಾಯ ಪ್ರಾರಂಭಿಸಿ ಗರಿಷ್ಠ 10 ತಿಂಗಳೊಳಗೆ ಪೂರ್ಣಗೊಳಿಸಬೇಕಿದೆ. ಒಂದು ವೇಳೆ ನಿಗದಿಪಡಿಸಿದ ಅವಧಿಯೊಳಗೆ ನಿರ್ಮಾಣ ಮಾಡಿಕೊಳ್ಳದಿದ್ದಲ್ಲಿ ನೀಡಲಾದ ಅನುದಾನವನ್ನು ಹಿಂಪಡೆಯಲಾಗುತ್ತದೆ ಎಂದು ಆದೇಶದಲ್ಲಿದೆ. ಆದರೆ ಮನೆ ನಿರ್ಮಾಣ ಅವಧಿ ವಿಳಂಬವಾಗಿದ್ದು ಪರಿಹಾರ ಧನ ಕೈಗೆ ಸಿಗದೆ ಮರಳಿ ಹೋಗುವ ಭೀತಿ ತಲೆದೋರಿದೆ.
ಡಿಸಿಗೆ ದೂರಿತ್ತರೂ ಪ್ರಯೋಜವಿಲ್ಲ!
ಫಲಾನುಭವಿ ವಿಳಾಸವನ್ನು ಸಂಬಂಧ ಪಟ್ಟ ಇಲಾಖೆಯವರು ತಾಂತ್ರಿಕ ದೋಷದಿಂದ ಕೆರ್ವಾಶೆ ಗ್ರಾ.ಪಂ.ಗೆ ಕಳುಹಿಸುವ ಬದಲು ಶಿರ್ಲಾಲು ಗ್ರಾ.ಪಂ.ಗೆ ಕಳುಹಿಸಿರುತ್ತಾರೆ. ಇದರಿಂದ 2ನೇ ಹಂತದಲ್ಲಿ ಪರಿಹಾರ ಫಲಾನುಭವಿಗೆ ದೊರಕುವಲ್ಲಿ ಅಡ್ಡಿಯಾಗಿದೆ. 3ನೇ ಹಂತದ ಹಣ ನಿಗಮದಿಂದ ಬರಬೇಕಿದ್ದು ಫಲಾನುಭವಿಯ ವಿಳಾಸದಲ್ಲಿನ ಗೊಂದಲದಿಂದ ಸಮಸ್ಯೆಗಳಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿಯಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಗೆ ಹಲವು ಬಾರಿ ಲಿಖೀತ ದೂರು ಸಲ್ಲಿಸಿದ್ದರೂ ಈವರೆಗೆ ಸ್ಪಂದನೆಯಿಲ್ಲ ಎಂದು ವೃದ್ಧೆಯ ಅಳಿಯ ಸುರೇಂದ್ರ ಗುಡಿಗಾರ್ ದೂರಿದ್ದು ತಹಶೀಲ್ದಾರ್, ಡಿಸಿ ತನಕ ದೂರು ನೀಡಿದ್ದರೂ ಪ್ರಯೋಜವಾಗಿಲ್ಲ ಎಂದಿದ್ದಾರೆ.
ಸದ್ಯದಲ್ಲೆ ಸಮಸ್ಯೆ ಇತ್ಯರ್ಥ: ವೃದ್ಧೆಯ ಪ್ರಕರಣ ನನ್ನ ಗಮನಕ್ಕೆ ತಂದಿದ್ದರು. ಇದರ ಕುರಿತು ಜಿಲ್ಲಾಧಿಕಾರಿಗೆ ಲಿಖೀತವಾಗಿ ಬರೆದಿದ್ದೇವೆ. ಅದರ ಪ್ರತಿಯನ್ನು ರಾಜೀವ್ ಗಾಂಧಿ ವಸತಿ ನಿಗಮದ ನಿರ್ದೇಶಕರಿಗೂ ಕಳುಹಿಸಿಕೊಡಲಾಗಿದೆ. ಸದ್ಯದಲ್ಲೆ ಸಮಸ್ಯೆ ಬಗೆಹರಿಯಲಿದೆ. –ಪುರಂದರ, ತಹಶೀಲ್ದಾರ್ (ಪ್ರಭಾರ), ಕಾರ್ಕಳ ತಾ| ಕಚೇರಿ
–ಬಾಲಕೃಷ್ಣ ಭೀಮಗುಳಿ