Advertisement
ನೀರಿನ ಸಮಸ್ಯೆ : ನೀರು ಬಿಡುವವರ ರಜೆ
ನೀರಿನ ಸಮಸ್ಯೆಯಿಂದ ವಿವಿಧ ವಾರ್ಡ್‌ಗಳು ಕಂಗೆಟ್ಟಿವೆ. ನೀರು ಬಿಡುವವರು ರಜೆ ಹಾಕಿ ಮನೆಯಲ್ಲಿ ಕೂತಿದ್ದಾರೆ. ನೀರು ಬಿಡುವವರಿಂದಲೇ ದಿನನಿತ್ಯ ಸಮಸ್ಯೆಗಳು ಉದ್ಭವಿಸುತ್ತಿವೆ. ತಮ್ಮ ವಾರ್ಡ್‌ಗಳಿಗೆ 8 ದಿನಗಳಿಂದ ಈ ರೀತಿಯ ಸಮಸ್ಯೆಯಾಗುತ್ತಿದೆ ಎಂದು ಸದಸ್ಯರಾದ ಯೋಗೀಶ್, ಶಾಂತಿ, ರೆಹಮತ್, ನಳಿನಿ, ಪಾರ್ಶ್ವನಾಥ್, ಪ್ರಕಾಶ್ ರಾವ್ ಮೊದಲಾದವರು ದೂರಿದರು.
Related Articles
Advertisement
ಸದಸ್ಯ ಅಶ#ಕ್ ಅಹಮ್ಮದ್ ಮಾತನಾಡಿ,ಜರಿಗುಡ್ಡೆ ಪ್ರದೇಶವನ್ನು ಕಡೆಗಣಿಸಲಾಗುತ್ತಿದೆ. ನಗರೋತ್ಥಾನ ಯೋಜನೆಯಡಿ ಅನುದಾನ ಬಂದ ಬಳಿಕ ಪೈಪ್‌ಲೈನುಗಳನ್ನು ಮಾಡಿದ್ದಲ್ಲಿ ಸಮಸ್ಯೆ ಮರುಕಳಿಸುತ್ತಿರಲಿಲ್ಲ ಎಂದರು.
ಟೆಂಡರ್ ಬಿಡುವ ಮೊದಲೇ ಕಾಮಗಾರಿ ಖತಂ!ಟೆಂಡರ್ ಬಿಡುವ ಮೊದಲೇ ಪುರಸಭಾ ವ್ಯಾಪ್ತಿಯಲ್ಲಿ ಕಾಮಗಾರಿಗಳು ನಡೆದೂ ಆಗಿವೆ ಎನ್ನುವ ಸುದ್ದಿ ಇದೆ. ಆದರೆ ನನ್ನ ವಾರ್ಡ್‌ನಲ್ಲಿ ಈ ವರೆಗೆ ಯಾವ ಕೆಲಸಗಳೂ ನಡೆದಿಲ್ಲ, ಕಾಮಗಾರಿ ಆಗಿದೆ ಎಂದಾದರೆ ಅದು ಎಲ್ಲಿ ಆಗಿದೆ ಎನ್ನುವ ಮಾಹಿತಿ ಸಿಗಲಿ ಎಂದು ಅಶ#ಕ್ ಅಹಮ್ಮದ್ ಮುಖ್ಯಾಧಿಕಾರಿಗಳಿಗೆ ಸವಾಲು ಎಸೆದರು. ಸಭೆಯಲ್ಲಿ ಅಧ್ಯಕ್ಷೆ ಅನಿತಾ ಅಂಚನ್, ಉಪಾಧ್ಯಕ್ಷ ಗಿರಿಧರ್ ನಾಯಕ್, ಸ್ಥಾಯೀ ಸಮಿತಿ ಅಧ್ಯಕ್ಷ ಅಕ್ಷಯ್ ರಾವ್, ಮುಖ್ಯಾಧಿಕಾರಿ ಮೇಬಲ್ ಡಿ’ಸೋಜಾ ಉಪಸ್ಥಿತರಿದ್ದರು. ವಸತಿ ಅಸಿಂಧು ಮಾಡಿ
ಸದಸ್ಯ ಶುಭದ್ ರಾವ್ ಮಾತನಾಡಿ, ವಸತಿ ಯೋಜನೆಯಡಿ 78 ಫಲಾನುಭವಿಗಳು ಆಯ್ಕೆಯಾಗಿದ್ದಾರೆ.ಆದರೆ ಅವರನ್ನು ಆಯ್ಕೆ ಮಾಡಿದ್ದು ಯಾರು? ಫಲಾನುಭವಿಗಳನ್ನು ಆ ಯೋಜನೆಯ ಸಮಿತಿಯಲ್ಲಿರುವವರು ಆಯ್ಕೆ ಮಾಡಬೇಕು. ಸಮಿತಿ ಅದರದ್ದೇ ಮಾನದಂಡದ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ವಿನಃ ಮನಬಂದತೆ ಆಯ್ಕೆ ಮಾಡುವುದಲ್ಲ. ಈ ಫಲಾನುಭವಿಗಳನ್ನು ಯಾವುದೇ ಆಶ್ರಯ ಯೋಜನೆ ಸಮಿತಿಯವರು ಆಯ್ಕೆ ಮಾಡಿಲ್ಲ, ಹಾಗಾಗಿ ಈ ಪ್ರಕ್ರಿಯೆಯನ್ನು ಶೀಘ್ರವೇ ಅಸಿಂಧು ಮಾಡಬೇಕು ಎಂದು ಆಗ್ರಹಿಸಿದರು.