Advertisement
ವಿವೇಕಾನಂದ ಶೆಣೈ,ಸುನಿಲ್ ನಾಯಕ್, ವಿನೋದ್ ಕಿಣಿ, ವಿಘ್ನೇಶ್ ಶೆಣೈ, ವಿವೇಕ್ ನಾಯಕ್ ಅವರು ಸೆ. 18ರ ರಾತ್ರಿ ರಸ್ತೆಯ ಹೊಂಡದಲ್ಲಿ ಸಂಗ್ರಹವಾದ ನೀರು ತೆಗೆದು ಇಂಟರ್‌ಲಾಕ್ ಅಳವಡಿಸುವ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದರು.
ಕಾರ್ಕಳ ನಗರದ ರಸ್ತೆ ಹೊಂಡಗಳಿಂದಲೇ ತುಂಬಿ ಹೋಗಿದೆ. ಬಸ್ ಸಾಗುವ ವೇಳೆ ಫುಟ್‌ಪಾತ್‌ನಲ್ಲಿ ನಡೆಯುವ ಪಾದಚಾರಿಗಳ ಮೇಲೆ ಹೊಂಡದ ನೀರು ಎರಚುವುದು ಇಲ್ಲಿ ಸಾಮಾನ್ಯ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಗೆ ರಸ್ತೆಯೇ ತೋಡಿನಂತೆ ಗೋಚರಿಸುತ್ತಿದೆ. ಹೀಗಾಗಿ ವಾಹನ ಸವಾರರಿಗೆ ಹೊಂಡ ಗುರುತಿಸುವುದು ಕಷ್ಟವಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಪುರಸಭೆಯೇ ನಿರ್ಲಕ್ಷ್ಯ ವಹಿಸಿದೆ ಎಂಬುದು ಸ್ಥಳೀಯರ ದೂರು. ಅನಾಹುತವನ್ನು ಆಹ್ವಾನಿಸುತ್ತಿವೆ ಬೃಹತ್ ಹೊಂಡಗಳು ಅನಾಹುತವನ್ನು ಆಹ್ವಾನಿಸುವಂತಿತ್ತು. ಸಂಬಂಧಪಟ್ಟವರು ಈ ಕುರಿತು ಮೌನವಾಗಿರುವುದರಿಂದ ಸ್ಥಳೀಯ ಯುವಕರು ಒಟ್ಟು ಸೇರಿ ಇಂಟರ್‌ಲಾಕ್ ಅಳವಡಿಸುವ ಕಾರ್ಯ ಮಾಡುತ್ತಿದ್ದೇವೆ.
-ವಿವೇಕಾನಂದ ಶೆಣೈ,
ಪುರಸಭಾ ಮಾಜಿ ಸದಸ್ಯರು