Advertisement

Karkala; ಆನ್‌ಲೈನ್‌ ಅಮಿಷಕ್ಕೆ ಲಕ್ಷ ರೂ. ಕಳೆದುಕೊಂಡ ಯುವತಿ

09:39 PM Sep 12, 2023 | Team Udayavani |

ಕಾರ್ಕಳ: ಆನ್‌ಲೈನ್‌ ಹಣದ ಅಮಿಷಕ್ಕೆ ಕಾರ್ಕಳದ ಮಹಿಳೆಯೊಬ್ಬರು 1.26 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದೆ.

Advertisement

ಸೋಹಿನಿ ಮಿಶ್ರಾ (21) ಅವರ ಇನ್ಸ್ಟಾಗ್ರಾಂ ಖಾತೆಗೆ ಗ್ರೂಪ್‌ ಆನ್‌ ಎಂಬ ಸಂಸ್ಥೆಯ ಹೆಸರು ಹೇಳಿಕೊಂಡು 500 ರೂ. ವೆಬ್‌ಸೈಟ್‌ಗೆ ಹಾಕಿದರೆ 2000 ರೂ. ವಾಪಸು ಕೊಡುವುದಾಗಿ ನಂಬಿಸಿತ್ತು. ಇದನ್ನು ನಂಬಿ ಸೋಹಿನಿ ಮಿಶ್ರ 500 ಹಾಕಿದ್ದರು. 2 ಸಾವಿರ ರೂ. ಖಾತೆಗೆ ವಾಪಸ್‌ ಜಮೆಯಾಗಿತ್ತು. ವಿಶ್ವಾಸದಿಂದ ಮಹಿಳೆ ಇನ್ನಷ್ಟು ಹಣ ಹಾಕಿದ್ದು, ಒಟ್ಟು 1.26 ಲಕ್ಷ ರೂ.ಕಳೆದುಕೊಂಡಿದ್ದಾರೆ.

ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next