Advertisement
ಪಶ್ಚಿಮ ಘಟ್ಟ ತಪ್ಪಲಿನ ಪ್ರದೇಶವಾದ ಈ ಎರಡು ತಾಲೂಕುಗಳಲ್ಲಿ ಕೆಲವು ಸಮಯಗಳ ಹಿಂದೆ ಮಂಗನ ಕಾಯಿಲೆ ಲಕ್ಷಣಗಳು ಕಂಡುಬಂದಿತ್ತು. ಅನಂತರದ ದಿನಗಳಲ್ಲಿ ಮಳೆ ಹಾಗೂ ಬಿಸಿಲಿನ ವಾತಾವರಣಕ್ಕೆ ಜ್ವರ ಲಗ್ಗೆಯಿಟ್ಟಿತ್ತು. ಈ ಪೈಕಿ ಹೆಚ್ಚು ಡೆಂಗ್ಯೂ ಪ್ರಕರಣ ಕಂಡು ಬಂದಿರುವುದು ಕಾರ್ಕಳ ಪುರಸಭೆ ವ್ಯಾಪ್ತಿ ಹಾಗೂ ಗ್ರಾಮೀಣ ಭಾಗಗಳಾದ ಮಾಳ, ಕೆರ್ವಾಶೆ, ಕುಕ್ಕುಂದೂರು ಪಂಚಾಯತ್ ವ್ಯಾಪ್ತಿಯಲ್ಲಿ. ಡೆಂಗ್ಯೂ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಫಾಗಿಂಗ್ ಇತ್ಯಾದಿ ಸುರಕ್ಷಾ ಕ್ರಮಗಳನ್ನು ಕೈಗೊಂಡಿದೆ.
Related Articles
Advertisement
ತಾಲೂಕು ಆಸ್ಪತ್ರೆ ಸಹಿತ ತಾಲೂಕಿನ ಪ್ರಾಥಮಿಕ ಕೇಂದ್ರಗಳಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಡೆಂಗ್ಯೂ ಬಾಧಿತರಿಗೆ ಚಿಕಿತ್ಸೆ ನೀಡಲು ಬೇಕಾದ ಎಲ್ಲ ಸೌಕರ್ಯಗಳಿವೆ. ಪ್ಲೇಟ್‌ಲೆಟ್ ಕಡಿಮೆಯಾಗದಂತೆ ನೋಡಿಕೊಳ್ಳುವುದು, ಕಡಿಮೆಯಾದ ಸಂದರ್ಭ ಪ್ಲೇಟ್‌ಲೆàಟ್ ನೀಡುವುದು ಹಾಗೂ ಡೆಂಗ್ಯೂ ಜ್ವರಕ್ಕೆ ಆರಂಭದಲ್ಲಿ ಔಷಧ ಪಡೆಯುವುದು ಅತಿ ಮುಖ್ಯ. ಶುದ್ಧವಾದ ಬಿಸಿ ನೀರನ್ನೇ ಸೇವಿಸುವುದು ಅಗತ್ಯ.
ಜ್ವರ ಬಂದ ಕೂಡಲೇ ರಕ್ತ ತಪಾಸಣೆ ಅಗತ್ಯಸಣ್ಣ ಮಟ್ಟಿನ ಜ್ವರ, ಗಂಟು ನೋವು, ಇತ್ಯಾದಿ ಲಕ್ಷಣಗಳು ಕಂಡು ಬಂದ ಕೂಡಲೇ ಆಸ್ಪತ್ರೆಗೆ ತೆರಳಿ ರಕ್ತ ತಪಾಸಣೆ ನಡೆಸುವುದು ಅಗತ್ಯ. ಮನೆ ಸುತ್ತಮುತ್ತಲಿನಲ್ಲಿ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು, ಸೊಳ್ಳೆ ಪರದೆ ಬಳಸುವುದು ಸೂಕ್ತ. ಕೊಳಚೆ ನೀರು ನಿಲ್ಲದಂತೆ ಎಚ್ಚರ ವಹಿಸುವುದೂ ಅಗತ್ಯ. ಡೆಂಗ್ಯೂ ಜ್ವರ ಸದ್ಯ ನಿಯಂತ್ರಣದಲ್ಲಿದೆ. ಎಲ್ಲ ಪ್ರಾಥಮಿಕ ವೈದ್ಯಕೀಯ ಕೇಂದ್ರಗಳಲ್ಲಿ ಜ್ವರ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲರ ಸಹಕಾರದಲ್ಲಿ ಜ್ವರ ನಿಯಂತ್ರಣಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ತಾಲೂಕು ಆಡಳಿತ ಕೈಗೊಂಡಿದೆ. ಜತೆಗೆ ಸಾರ್ವಜನಿಕರು ಕೂಡ ಸಹಕರಿಸಬೇಕು.
-ಡಾ| ಸಂದೀಪ್ ಕುಡ್ವ
ತಾಲೂಕು ಆರೋಗ್ಯಾಧಿಕಾರಿ ಕಾರ್ಕಳ