ಕಾರ್ಕಳ: ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಂಡ್ಯಡ್ಕ ಬಳಿ ಪ್ರತೀಕ್ಷಾ ಪ್ಲಾಸ್ಟಿಕ್ ಇಂಡಸ್ಟ್ರಿ ಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಗ್ನಿ ಅನಾಹುತ ಸಂಭವಿಸಿದ್ದು, ಹಲವಾರು ವಸ್ತುಗಳು ಬೆಂಕಿಗೆ ಆಹುತಿಯಾಗಿದೆ
ಬೆಂಕಿಯು ಇಡೀ ಫ್ಯಾಕ್ಟರಿಗೆ ಆವರಿಸಿದ್ದು,ಕೂಡಲೇ ಸ್ಥಳೀಯರು ಕಾರ್ಕಳ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ಆರಿಸುವಲ್ಲಿ ಯಶಸ್ಇಯಾಗಿದೆ.
ರಾಜೇಶ್ ಭಟ್ ಎನ್ನುವರಿಗೆ ಸೇರಿದ್ದು ಇಂಡಸ್ಟ್ರಿ ಇದಾಗಿದ್ದು, 03 ಪ್ರಿಂಟಿಂಗ್ ಮೆಷಿನ್,13-ಹೊಲಿಗೆ ಯಂತ್ರ,ಮತ್ತು ರಾ ಮೆಟ್ರಿಯಲ್ಸ್ ಭಸ್ಮವಾಗಿದೆ.
ಇದನ್ನೂ ಓದಿ: ಸಕ್ಕರೆ ಕಾಯಿಲೆ ಸಮಸ್ಯೆ: ಸಿ.ಡಿ ಲೇಡಿ ತಾಯಿ ಆಸ್ಪತ್ರೆಗೆ ದಾಖಲು
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಬಿ ಎಮ್ ಸಂಜೀವ, ದಫೇದಾರ್ ಅಚ್ಚುತ್, ಉದಯಕುಮಾರ್ , ಸಿಬ್ಬಂದಿಗಳಾದ ಚಂದ್ರಶೇಖರ್, ಕಲ್ಲಪ್ಪ, ಸುರೇಶ್ ಕುಮಾರ್, ಸುಜಯ , ಹಸ್ಸನ್ ಸಾಬ್ ಮುಲ್ತಾನಿ, ಸಚಿನ್, ಶಿವಯ್ಯ ಭಾಗವಹಿಸಿದ್ದರು.
ಇದನ್ನೂ ಓದಿ: ಪರಂ ಅರ್ಜಿ ವಿಚಾರಣೆ: ಗೃಹ ಸಚಿವ ದೇಶಮುಖ್ ವಿರುದ್ಧ ಸಿಬಿಐ ತನಿಖೆ ನಡೆಸಲಿ ಬಾಂಬೆ ಹೈಕೋರ್ಟ್