Advertisement
ಬೆೇಳಂಜೆ ಸಂಜೀವ ಹೆಗಡೆ ಟ್ರಸ್ಟಿ ಹಾಗೂ ಮಣಿಪಾಲ ಹೆಲ್ತ್ ಎಂಟರ್‌ಪ್ರೈಸೆಸ್ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥ ಡಾ| ಎಚ್. ಸುದರ್ಶನ್ ಬಲ್ಲಾಳ್ ಡಯಾಲಿಸಿಸ್ ಯಂತ್ರ ಹಸ್ತಾಂತರಿಸಿ ಮಾತನಾಡಿ, ಪ್ರಪಂಚದಾದ್ಯಂತ ಸುಮಾರು 850 ಮಿಲಿಯನ್ ವ್ಯಕ್ತಿಗಳು ಮೂತ್ರಪಿಂಡ ಕಾಯಿಲೆ ಬಾಧಿತರಾಗಿರು ವುದರಿಂದ, ವರ್ಧಿತ ಜಾಗೃತಿ ಮತ್ತು ಸಂಬಂಧಿತ ಚಿಕಿತ್ಸಾ ತಂತ್ರಗಳ ಅಗತ್ಯವು ಅತ್ಯಗತ್ಯವಾಗಿದೆ ಎಂದರು.
Related Articles
Advertisement
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮೂತ್ರಪಿಂಡ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ| ದರ್ಶನ್ ರಂಗಸ್ವಾಮಿ ಸ್ವಾಗತಿಸಿದರು.
ಕಾರ್ಕಳದ ಡಾ|ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಕೀರ್ತಿನಾಥ ಬಲ್ಲಾಳ ವಂದಿಸಿದರು.
ಮಾಹೆ ಮಣಿಪಾಲದ ಸಹ ಕುಲಪತಿ (ಆರೋಗ್ಯವಿಜ್ಞಾನ) ಡಾ| ಶರತ್ ಕುಮಾರ್ ರಾವ್, ಕೆಎಂಸಿ ಡೀನ್ ಡಾ| ಪದ್ಮರಾಜ್ ಹೆಗ್ಡೆ, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಸಿಒಒ ಡಾ| ಆನಂದ್ ವೇಣುಗೋಪಾಲ್ ಮತ್ತು ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.