ಕಾರ್ಕಳ: ಚಾಲಕ ವೃತ್ತಿಯಲ್ಲಿದ್ದ ಮಿಯ್ಯಾರು ಕುಂಟಿಬೈಲು ನಿವಾಸಿ, ಹರೀಶ್ ಶೆಟ್ಟಿ( 50) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ.
ಮನೆಯಲ್ಲಿ ಪತಿ-ಪತ್ನಿ ನಡುವೆ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದ್ದು ಇದೇ ಕಾರಣಕ್ಕೆ ಬೇಸತ್ತು ಅವರು ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಪತ್ನಿ ತವರು ಮನೆಗೆ ಹೋಗಿದ್ದ ವೇಳೆ ಘಟನೆ ನಡೆದಿದೆ.
ಬಸ್ ಚಾಲಕ, ಅಟೋ ಚಾಲಕರಾಗಿಯೂ ಕೆಲಸ ಮಾಡುತಿದ್ದ ಅವರು .ಸ್ನೇಹಜೀವಿಯಾಗಿದ್ದರು.
ಆತ್ಮಹತ್ಯೆ ಮಾಡಿಕೊಳ್ಳುವ ದಿನ ಬೆಳಗ್ಗೆ ಬಜಗೋಳಿ ರಿಕ್ಷಾ ನಿಲ್ದಾಣಕ್ಕೆ ಬಂದಿದ್ದರು. ಇದೇ ವೇಳೆ ಸ್ನೇಹಿತರಲ್ಲಿ “ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಬರುವಾಗ ಖಾಲಿ ಕೈ ಬೀಸಿಕೊಂಡು ಬರಬೇಡಿ.ಹೂವು ಬಟ್ಟೆ ತನ್ನಿ ಎಂದಿದ್ದರು ಎಂದು ಸ್ಥಳಿಯರು ತಿಳಿಸಿದ್ದು, ಈ ಹಿಂದೆಯೂ ಈ ರೀತಿ ಹೇಳುತಿದ್ದ ಕಾರಣ ಅವರ ಮಾತನ್ನು ಅಷ್ಟಾಗಿ ತಲೆಗೆ ಹಾಕಿಕೊಳ್ಳದೆ ಅವರ ಮಾತನ್ನು ಸ್ನೇಹಿತರು ನಿರ್ಲಕ್ಷಿಸಿದ್ದರು.ಮಧ್ಯಾಹ್ನ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾರ್ಕಳ ಪೊಲೀಸರು ಸ್ಥಳಕ್ಕಾಗಮಿಸಿ ಪರೀಶೀಲನೆ ನಡೆಸಿದರು.