Advertisement
ಬೈಪಾಸ್ ರಸ್ತೆಯ ಸರ್ವಜ್ಞ ವೃತ್ತ, ಜೋಡು ರಸ್ತೆಯ ರಾಘವೇಂದ್ರ ವೃತ್ತದ ಬಳಿ, ಅಂಬೇಡ್ಕರ್ ವೃತ್ತ (ಗಣಪತಿ ದೇವಸ್ಥಾನದ ಬಳಿ,) ಅನಂತಶಯನ, ಬಸ್‌ಸ್ಟಾಂಡ್, ಆನೆಕೆರೆ, ಬಾಹುಬಲಿ ಬೆಟ್ಟ, ಕೋಟಿಚೆನ್ನಯ ಥೀಮ್ ಪಾರ್ಕ್ ಮೊದಲಾದ ಪ್ರಮುಖ ಕೇಂದ್ರಗಳಲ್ಲಿ ಕಣ್ಗಾವಲಿನ ಅವಶ್ಯವಿದೆ.
100ರಿಂದ 500 ಜನ ಸೇರುವ ಸಾರ್ವಜನಿಕ ಪ್ರದೇಶಗಳಲ್ಲಿ ಸಿಸಿ ಕೆಮರಾ ಕಡ್ಡಾಯವಾಗಿ ಅಳವಡಿಸಬೇಕು ಎನ್ನುವ ಕಾನೂನನ್ನು
ಈ ಹಿಂದೆ ರಾಜ್ಯ ಸರಕಾರ ಜಾರಿಗೆ ತಂದಿತ್ತು. ವಾಣಿಜ್ಯ ಸಂಸ್ಥೆಗಳು, ಅಂಗಡಿಗಳು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳು, ಧಾರ್ಮಿಕ ಸಂಕೀರ್ಣಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಇತರ ತಾಣಗಳಲ್ಲಿ ಸಿಸಿಟಿವಿ ಅಳವಡಿಸಬೇಕೆಂಬ ನಿಯಮವಿದೆ. ಸಿಸಿಟಿವಿ ಅಳವಡಿಕೆಯು ಕಳ್ಳತನ ಸೇರಿದಂತೆ ಅಪರಾಧ ಪತ್ತೆ ಹಚ್ಚಲು ಮತ್ತು ವ್ಯಕ್ತಿಗಳ ದಾಖಲೆಗಳನ್ನು ಪಡೆಯಲು ಕಣ್ಗಾವಲು ವ್ಯವಸ್ಥೆ ಅಗತ್ಯವಿದೆ.
Related Articles
ಸಿಸಿ ಕೆಮರಾಕ್ಕೆ ಪೊಲೀಸ್ ಇಲಾಖೆಯಿಂದ ಬೇಡಿಕೆ ಪತ್ರ ಬಂದಿದೆ. ಪುರಸಭೆ ವತಿಯಿಂದ ಪೇಟೆಯಲ್ಲಿ ಸಿಸಿ ಕೆಮರಾ ಅಳವಡಿಸಲು
ಗಮನ ಹರಿಸಲಾಗುವುದು. ಈ ಬಗ್ಗೆ ಪುರಸಭೆಯಲ್ಲಿ ಚರ್ಚೆ ನಡೆದಿವೆ.
-ರೇಖಾ ಜೆ. ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ
Advertisement
32 ಸಿಸಿ ಕೆಮರಾ ಅಗತ್ಯ ಇಲಾಖೆ ವತಿಯಿಂದ ಹೆಚ್ಚಿನ ಸಿಸಿ ಕೆಮರಾಕ್ಕೆ ಬೇಡಿಕೆ ಇರಿಸಲಾಗಿದೆ. ಸಾರ್ವಜನಿಕರ ಸಹಕಾರ ಕೂಡ ಕೇಳಿದ್ದೇವೆ. ಪುರಸಭೆಗೂ ಮನವಿ ಮಾಡಿದ್ದೇವೆ.ಸುಮಾರು 32 ಸಿಸಿ ಕೆಮರಾಗಳ ಅಗತ್ಯವಿದೆ.
-ಭರತ್ ರೆಡ್ಡಿ , ಡಿವೈಎಸ್ಪಿ, ಕಾರ್ಕಳ ಪೊಲೀಸರಿಗೂ ಕಿರಿಕಿರಿ!
ರಸ್ತೆ ಸುರಕ್ಷತೆ, ಸಂಚಾರ ದಟ್ಟಣೆ ನಿಯಂತ್ರಣ, ಅಪರಾಧ ಪ್ರಕರಣಗಳ ಪತ್ತೆಗೆ ಸಹಕಾರಿಯಾಗಬೇಕಿದ್ದ ಸಿಸಿ ಕೆಮರಾ ಇಲ್ಲದಿರುವುದು ಪೊಲೀಸರನ್ನು ಚಿಂತೆಗೀಡು ಮಾಡಿದೆ. ಅಪರಾಧ ಪ್ರಕರಣಗಳು ಒಂದೆಡೆ ಹೆಚ್ಚುತ್ತಿದೆ. ಅಂತಾರಾಜ್ಯ ಕಳ್ಳತನ, ಗೋ ಕಳ್ಳತನ, ಮನೆಗಳ್ಳತನ, ಸರಗಳ್ಳತನ ವಾಹನ ಕಳ್ಳತನ ಇದೆಲ್ಲ ಪ್ರಕರಣಗಳನ್ನು ಅತೀ ಶೀಘ್ರ ಭೇದಿಸಲು ಪೊಲೀಸರಿಗೆ ಹೆಚ್ಚು ಸಹಾಯವಾಗುವುದು ಸಿಸಿ ಕೆಮರಾಗಳು. ಇಷ್ಟು ದೊಡ್ಡ ನಗರದಲ್ಲಿ ಬೆರಳೆಣಿಕೆಯ ಸಿಸಿ ಕೆಮರಾಗಳಿರುವುದು ಪೊಲೀಸರ ತನಿಖೆಗೂ ಹಿನ್ನಡೆಯಾಗಿದೆ. ಅಪರಾಧ ನಡೆದಾಗ ಖಾಸಗಿ ಕೆಮರಾ ಮಾಲಕರ ಮೊರೆ ಹೋಗುವುದು ಪೊಲೀಸರಿಗೂ ಮುಜುಗರ ತರುತ್ತಿದೆ. ಜತೆಗೆ ಕಾನೂನು ಉಲ್ಲಂಘನೆ, ಅಪರಾಧ ಕೃತ್ಯಗಳ ಬಗ್ಗೆ ತನಿಖೆ ಸಿಸಿ ಕೆಮರಾ ಇಲ್ಲದ್ದರಿಂದ ಸವಾಲಾಗಿದೆ.