Advertisement

ಕಾರ್ಕಳ: ರಕ್ತದಾನ-ಪ್ರಥಮ ಚಿಕಿತ್ಸಾ ಮಾಹಿತಿ ಶಿಬಿರ

02:09 PM Jul 05, 2018 | Team Udayavani |

ಕಾರ್ಕಳ: ಇಂಡಿಯನ್‌ ರೆಡ್‌ಕ್ರಾಸ್‌ ಸೊಸೈಟಿಯ ಕಾರ್ಕಳ ತಾಲೂಕು ಘಟಕ ಹಾಗೂ ಎಸ್‌ವಿಟಿ ವನಿತಾ ಪ.ಪೂ. ಕಾಲೇಜಿನ ಇಕೋ ಕ್ಲಬ್‌ನ ಜಂಟಿ ಆಶ್ರಯದಲ್ಲಿ ಜೀವನ ಶೈಲಿಯ ರೋಗಗಳ ತಪಾಸಣೆ ಶಿಬಿರ, ರಕ್ತದಾನ ಹಾಗೂ ಪ್ರಥಮ ಚಿಕಿತ್ಸೆಯ ಬಗ್ಗೆ ಕಾರ್ಯಾಗಾರವು ಜೂ. 29ರಂದು ಎಸ್‌ವಿಟಿ ಶಾಲಾ ಸಭಾಂಗಣದಲ್ಲಿ ನಡೆಯಿತು.

Advertisement

ಇಂಡಿಯನ್‌ ರೆಡ್‌ಕ್ರಾಸ್‌ ಸೊಸೈಟಿಯ ಅಧ್ಯಕ್ಷ ಡಾ| ಕೆ. ಆರ್‌. ಜೋಶಿ ಅವರು ಕಾರ್ಯಕ್ರಮ ಉದ್ಘಾಟಿಸಿ, ಸಂಸ್ಥೆಯ ಉದ್ದೇಶ ಹಾಗೂ ಪ್ರಥಮ ಚಿಕಿತ್ಸೆಯ ಕುರಿತಾದ ಮಾಹಿತಿ ನೀಡಿದರು. ಕಾರ್ಯದರ್ಶಿ ಡಾ| ಜ್ಞಾನೇಶ್‌ ಕಾಮತ್‌ ಅವರು ರಕ್ತದಾನದ ಬಗ್ಗೆ ಮಾಹಿತಿ ನೀಡಿದರು.

ಎಸ್‌.ವಿ.ಟಿ. ಎಜುಕೇಶನ್‌ ಟ್ರಸ್ಟ್‌ ನ ಕಾರ್ಯದರ್ಶಿ ಕೆ.ಪಿ. ಶೆಣೈ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ರಾಮದಾಸ ಪ್ರಭು, ಇಕೋ ಕ್ಲಬ್‌ ಮಾರ್ಗದರ್ಶಕಿ ಪೃಥ್ವಿ ಎಂ. ಉಪಸ್ಥಿತರಿದ್ದರು.

ಹಿರಿಯ ಸಹಶಿಕ್ಷಕ ಯೋಗೇಂದ್ರ ನಾಯಕ್‌ ವರು ಸ್ವಾಗತಿಸಿ, ಉಪನ್ಯಾಸಕಿ ಸುಮಂಗಲಾ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಸೊಸೈಟಿಯ ಉಪಾಧ್ಯಕ್ಷ ಶೇಖರ್‌ ಎಚ್‌. ವಂದಿಸಿದರು. ಶೈಲೇಂದ್ರ ರಾವ್‌, ಇಕ್ಬಾಲ್‌ ಅಹಮ್ಮದ್‌, ಪದ್ಮಪ್ರಸಾದ್‌, ವೃಷಭರಾಜ್‌ ಕಡಂಬ, ಡಾ| ಮುರಳೀಧರ್‌ ಭಟ್‌ ಮತ್ತು ಸಂತೋಷ್‌ ಕುಮಾರ್‌ ಸಂಯೋಜಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next