Advertisement

Karkala: ಬೋಳ ಶ್ರೀ ವರ್ಧಮಾನಸ್ವಾಮಿ ಬಸದಿ ಹೆಸರಿನಲ್ಲಿ ಹಣ ಸಂಗ್ರಹಕ್ಕೆ ನಿರ್ಬಂಧ

07:13 PM Sep 17, 2024 | Team Udayavani |

ಕಾರ್ಕಳ: ಬೋಳ ಶ್ರೀ ವರ್ಧಮಾನ ಸ್ವಾಮಿಯ ಬಸದಿಯ ಹೆಸರಿನಲ್ಲಿ ಹಣ ಸಂಗ್ರಹಿಸುವುದಕ್ಕೆ ನಿರ್ಬಂಧಿಸಿ ಕಾರ್ಕಳ ಹಿರಿಯ ನ್ಯಾಯಾಲಯ ಆದೇಶಿಸಿದೆ.

Advertisement

ಪುರಾತನ ಬೋಳ ಶ್ರೀ ವರ್ಧಮಾನಸ್ವಾಮಿ ಬಸದಿಯ ಆಡಳಿತಗಾರರಾದ ಪ್ರವೀಣ್‌ ಕುಮಾರ್‌ ಅಗರಿ, ಸತೀಶ್‌ ಅಗರಿ ಮತ್ತು ನಿಧಿ ಮಿಥುನ್‌ ಅವರು ತಮ್ಮ ಕುಟುಂಬದ ಆಡಳಿತದಲ್ಲಿರುವ ಈ ಬಸದಿಯ ಜೀರ್ಣೋದ್ಧಾರ ಕೆಲಸಕ್ಕೆ ಅಡಿ ಮಾಡುತ್ತಿದ್ದಾರೆ. ಅಲ್ಲದೆ ಬಸದಿಯ ಜೀರ್ಣೋದ್ಧಾರದ ಹೆಸರು ಹೇಳಿಕೊಂಡು ಅನಧಿಕೃತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್‌ಗಳನ್ನು ಅಳವಡಿಸಿಕೊಂಡು ಹಣ ಕೇಳುತ್ತಿ‌ದ್ದಾರೆ ಎಂದು ಬಸದಿಯ ಅರ್ಚಕ ವರ್ಧಮಾನ ಇಂದ್ರ ಮತ್ತು ಅವರ ಮಗ ಮಹಾವೀರ ಇಂದ್ರ ಅವರ ವಿರುದ್ಧ ಕಾರ್ಕಳದ ಹಿರಿಯ ಸಿವಿಲ್‌ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ಈ ದೂರಿಗೆ ಸಂಬಂಧಿಸಿದಂತೆ ಕಾರ್ಕಳದ ಹಿರಿಯ ನ್ಯಾಯಾಲಯವು ಸೆ. 12ರಂದು ನೀಡಿದ ಆದೇಶದಲ್ಲಿ ವರ್ಧಮಾನ ಇಂದ್ರ ಮತ್ತು ಮಹಾವೀರ ಇಂದ್ರ ಅವರು ಬಸದಿಯ ನಿರ್ವಹಣೆ, ಆಡಳಿತ ಮತ್ತು ಜೀರ್ಣೋದ್ಧಾರ ಕಾರ್ಯಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಪಡಿಸುವುದನ್ನು ಅಥವಾ ಮಧ್ಯ ಪ್ರವೇಶಿಸುವುದನ್ನು ನಿರ್ಬಂಧಿಸಿ ತಡೆಯಾಜ್ಞೆ ನೀಡಿದೆ. ಮಾತ್ರವಲ್ಲದೆ ಅವರ ಮೂಲಕ ಕ್ರೈಮ್‌ ಮಾಡುವ ಎಲ್ಲ ವ್ಯಕ್ತಿಗಳು ಹಾಗೂ ಬ್ಯಾನರ್‌ಗಳ ಮೂಲಕ ಅಥವಾ ಇತರ ಮಾಧ್ಯಮಗಳಲ್ಲಿ ಬೋಳ ಶ್ರೀ ವರ್ಧಮಾನಸ್ವಾಮಿಯ ಬಸದಿಯ ಹೆಸರಿನಲ್ಲಿ ಹಣ ಸಂಗ್ರಹಿಸುವುದನ್ನು ನಿರ್ಬಂಧಿಸಿ ಆದೇಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next