Advertisement

Karkala: ಅಡಿಕೆಯಲ್ಲಿ ಚೆಂಡೆಕೊಳೆ ರೋಗ ಪತ್ತೆ; ರೈತರಿಗೆ ದೊಡ್ಡ ಪ್ರಮಾಣದ ನಷ್ಟ

02:08 AM Oct 16, 2024 | Team Udayavani |

ಕಾರ್ಕಳ: ಕಾರ್ಕಳ ತಾಲೂಕಿನ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ಚೆಂಡೆಕೊಳೆ ರೋಗ (ಕ್ರೋನ್‌ ರೂಟ್‌) ಕಾಣಿಸಿಕೊಂಡಿದೆ. ಬಾಧಿತ ಮರಗಳು ಕ್ರಮೇಣ ಸತ್ತು ಹೋಗುವುದರಿಂದ ರೈತರಿಗೆ ದೊಡ್ಡ ಪ್ರಮಾಣದ ನಷ್ಟವಾಗುತ್ತಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ತೋಟಗಳಲ್ಲಿ ಈ ರೋಗ ಲಕ್ಷಣವನ್ನು ದೃಢಪಡಿಸಿದ್ದಾರೆ.

Advertisement

ಅಡಿಕೆ ಕೊಳೆ ರೋಗಕ್ಕೆ ಪೈಟೋಪ್‌ಥೋರ ಮೀಡಿಯೈ (ಕಜyಠಿಟಟಜಠಿಜಟ್ಟಚ ಞಛಿಚಛಜಿಜಿ) ಶಿಲೀಂಧ್ರವೇ ಕಾರಣವಾಗಿದ್ದು, ಹೆಚ್ಚು ಕಾಯಿ ಇರುವ ಮತ್ತು ಹಳೆ ಅಡಿಕೆ ಮರದಲ್ಲಿ ಈ ರೋಗ ಕಂಡು ಬರುತ್ತದೆ. ಈ ರೋಗವು ಆಗಸ್ಟ್‌-ಸೆಪ್ಟಂಬರ್‌ನಲ್ಲಿ ಪ್ರಾರಂಭವಾಗಿ ಡಿಸೆಂಬರ್‌-ಜನವರಿ ವರೆಗೂ ಇರುತ್ತದೆ. ಬಿಸಿಲು-ಮಳೆ, ರಾತ್ರಿಯ ಕಡಿಮೆ ಉಷ್ಣಾಂಶ ಹಾಗೂ ಮಂಜು ಬೀಳುವಿಕೆ ಶಿಲೀಂಧ್ರದ ಬೆಳೆವಣಿಗೆಗೆ ಸಹಕಾರಿ.

ರೋಗ ಲಕ್ಷಣ
ಪ್ರಾರಂಭದ ಲಕ್ಷಣವಾಗಿ ಹಸುರು ಗರಿಗಳು ಜೋತು ಬೀಳುತ್ತವೆ. ಕ್ರಮೇಣ ಹಳದಿ ಬಣ್ಣಕ್ಕೆ ತಿರುಗುತ್ತವೆ. ಸುಳಿ ಗರಿ ತುಂಬಾ ಸಮಯ ಹಸುರಾಗಿ ಉಳಿದು ತದನಂತರ ಒಣಗಿ ಚೆಂಡೆ ಭಾಗ ಕಳಚಿ ಬೀಳುತ್ತದೆ. ಅಡಿಕೆ ಹಾಳೆಯ ಒಳ ಬುಡ ಭಾಗದಲ್ಲಿ ಕಂದು ಬಣ್ಣ ಕಾಣಬಹುದು. ಅಡಿಕೆ ಹಾಳೆಯು ಕಾಂಡಕ್ಕೆ ಅಂಟಿಕೊಳ್ಳುವ ಭಾಗದಲ್ಲಿ ಶಿಲೀಂಧ್ರ ಪ್ರವೇಶಿಸಿ ಕಾಂಡದ ಒಳಭಾಗವನ್ನು ಪೂರ್ಣ ಕೊಳೆಯುವಂತೆ ಮಾಡುತ್ತದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.


ಈ ರೋಗವನ್ನು ಸಮಗ್ರ ನಿಯಂತ್ರಣ ಕ್ರಮಗಳಿಂದ ನಿರ್ವಹಣೆ ಮಾಡಬಹುದಾಗಿದೆ. ಈ ರೋಗ ಹರಡಲು ಅಸಮರ್ಪಕ ಬೋರ್ಡೊ ಸಿಂಪರಣೆ ಕೂಡ ಒಂದು ಕಾರಣವಾಗಿರಬಹುದು. ಅಡಿಕೆ ಕೊಳೆ ರೋಗ ನಿಯಂತ್ರಣ ಕ್ರಮಗಳನ್ನು ಪೂರ್ಣವಾಗಿ ಅನುಸರಿಸುವ ರೈತರ ತೋಟಗಳಲ್ಲಿ ಈ ರೋಗದ ಬಾಧೆ ಕಡಿಮೆ. ಪ್ರಾರಂಭಿಕ ಹಂತದಲ್ಲಿ ರೋಗ ಬಾಧಿತ ಮರಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಅನುಸರಿಸಿದರೆ ಮರಗಳನ್ನು ಉಳಿಸಿಕೊಳ್ಳಬಹುದಾಗಿದೆ.

ನಿಯಂತ್ರಣಕ್ಕೆ ಸಲಹೆ
* ಮಣ್ಣು ಪರೀಕ್ಷೆ ಆಧಾರದಲ್ಲಿ ಶಿಫಾರಸು ಮಾಡಿದ ಪೋಷಕಾಂಶ ಗಳನ್ನು ನಿಯಮಿತವಾಗಿ ನೀಡುವುದು.

Advertisement

*  ಬೇವಿನ ಹಿಂಡಿ ಹಾಗೂ ಟ್ರೈಕೋಡರ್ಮ್ ಮಿಶ್ರಣವನ್ನು ಮಳೆಗಾಲದ ಪೂರ್ವದಲ್ಲಿ ಅಡಿಕೆ ಮರಗಳಿಗೆ ನೀಡುವುದು.

* ಕೊಳೆರೋಗ ಬಾಧಿತ ಹಿಂಗಾರ ಗಳನ್ನು ಸಂಗ್ರಹಿಸಿ ಸುಡುವುದು.

*  ಚೆಂಡೆ ಕೊಳೆ ಬಾಧೆಯಿಂದ ಸತ್ತ ಮರಗಳನ್ನು ಕತ್ತರಿಸಿ ಸುಡುವುದು.

* ಪ್ರಾರಂಭಿಕ ಹಂತದ ರೋಗ ಲಕ್ಷಣ ಹೊಂದಿರುವ (ಹಸುರು ಗರಿ ಗಳು ಜೋತು ಬೀಳುವುದು) ಮರ ಗಳ ಕುಬೆ ಭಾಗಕ್ಕೆ ಶೇ. 10ರ ಬೋರ್ಡೊ ಪೇಸ್ಟ್‌ ಹಚ್ಚುವುದು ಹಾಗೂ ಸುತ್ತಲಿನ ಮರಗಳ ಕುಬೆ ಭಾಗಕ್ಕೆ ಶೇ. 1ರ ಬೋರ್ಡೊ ಸಿಂಪಡಿಸುವುದು.

* ಪ್ರಾರಂಭಿಕ ಹಂತದ ರೋಗ ಲಕ್ಷಣ ಹೊಂದಿರುವ ಮರಗಳ ಎಲೆಗಳಿಗೆ ಮೆಟಾಲಾಕ್ಸಿಲ್‌ ಶೇ. 35 – 1.50 ಗ್ರಾಂ 1 ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸುವುದು. ಸಿಂಪರಣೆ ಮಾಡಿದ ತರುವಾಯು ಕನಿಷ್ಠ 3-4 ಗಂಟೆಗಳ ಬಿಸಿಲು ಅವಶ್ಯ.

* ರೈತರು ನಿಯಮಿತವಾಗಿ ಅಡಿಕೆ ಕೊಳೆ ನಿಯಂತ್ರಣಕ್ಕೆ ಸಿಂಪಡಿಸುವ ಬೋರ್ಡೊ ದ್ರಾವಣವನ್ನು ಮಳೆ ಪ್ರಾರಂಭವಾದ ಬಳಿಕ ಮಾತ್ರ ನೀಡು ವುದಲ್ಲದೆ, ಮಳೆಗಾಲ ಪ್ರಾರಂಭದ ಪೂರ್ವದಲ್ಲಿಯೂ ನೀಡಬೇಕು ಹಾಗೂ 2-3ನೇ ಬಾರಿ ಬೋರ್ಡೊ ಸಿಂಪರಣೆ ಸಮಯದಲ್ಲಿ ಕುಬೆ ಭಾಗಕ್ಕೂ ಸಿಂಪರಣೆ ಮಾಡುವುದು ಸಹಕಾರಿ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next