Advertisement

ಕಾರ್ಕಳ: ಮಾಟ, ಮಂತ್ರ, ದೋಷ ಎಂದೇಳಿ ವ್ಯಕ್ತಿಗೆ 30 ಲಕ್ಷ ವಂಚಿಸಿದ ಮಹಿಳೆ !

08:01 PM Feb 19, 2021 | Team Udayavani |

ಕಾರ್ಕಳ: ಮಾಟ, ಮಂತ್ರ, ದೋಷ ಎಂದೆಲ್ಲ ಹೇಳಿ, ಮರುಳು ಮಾತುಗಳಿಂದ ನಂಬಿಸಿ  ಮಹಿಳೆಯೋರ್ವರು  ವ್ಯಕ್ತಿಯೋರ್ವರಿಂದ  ಹಂತಹಂತವಾಗಿ  30 ಲಕ್ಷ  ರೂ. ಪಡೆದು ವಂಚಿಸಿದ  ಘಟನೆ ನಡೆದಿದೆ.

Advertisement

ಸುನೀತಾ ಮೆಂಡೋನ್ಸ  ಎಂಬವರೇ ವಂಚಿಸಿದ ಮಹಿಳೆ ಎಂದು ವರದಿಯಾಗಿದೆ. ಇವರ  ವಿರುದ್ಧ  ಕಾರ್ಕಳ ನಗರ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ಮಹಿಳೆಯ  ಮಾತು ನಂಬಿದ್ದ  ವ್ಯಕ್ತಿ,  ತನ್ನ  ಪತ್ನಿಯ   ಮಾಂಗಲ್ಯ  ಸರ ಸೇರಿ ಎಲ್ಲವನ್ನೂ  ಮಾರಿ ಹತ್ತು ಲಕ್ಷ,  80 ಸಾವಿರ, 1 ಲಕ್ಷ 5 ಸಾವಿರ,  50 ಸಾವಿರ,  1 ಲಕ್ಷ   ಹೀಗೆ  ಹೆಂಡತಿ ತಂದೆಯಿಂದ, ಸಹೋದರನಿಂದ,  ಸ್ನೇಹಿತರಿಂದ, ಹೀಗೆ  ಪಡೆದು   ಒಟ್ಟು  30 ಲಕ್ಷ  ರೂ. ಹಣವನ್ನು ಆಪಾದಿತೆ ಮಹಿಳೆ ಸುನೀತಾ ಮೆಂಡೋನ್ಸಾ  ಎಂಬವರಿಗೆ ನೀಡಿದ್ದಾರೆ. ಆಕೆಯ ಹಣ ಪಡೆದು  ವಂಚಿಸಿರುವುದಾಗಿ  ದೂರುದಾರರು  ನೀಡಿದ   ದೂರಿನಲ್ಲಿ  ತಿಳಿಸಿದ್ದಾರೆ.

ಇದನ್ನೂ ಓದಿ:  ಕೋಟ ಶ್ರೀನಿವಾಸ ಪೂಜಾರಿ ಕಾರಿಗೆ KSRTC ಬಸ್ ಢಿಕ್ಕಿ: ಅಪಾಯದಿಂದ ಪಾರಾದ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next