Advertisement

ಶ್ರಮದಾನ ಮೂಲಕ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದ ತಡೆಗೋಡೆ ನಿರ್ಮಾಣ

08:31 PM Mar 10, 2021 | Team Udayavani |

ಪುಂಜಾಲಕಟ್ಟೆ: ಕಳೆದ ಮಳೆಗಾಲದಲ್ಲಿ ಕುಸಿದು ಬಿದ್ದಿದ್ದ ಭೂ ಕೈಲಾಸ ಪ್ರತೀತಿಯ ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ತಡೆಗೋಡೆಯನ್ನು ಗ್ರಾಮಸ್ಥರೇ ಸೇರಿ ಶ್ರಮದಾನದ ಮೂಲಕ ದುರಸ್ತಿ ಮಾಡಿದ್ದಾರೆ.

Advertisement

ಎತ್ತರದ ಶಿಲಾಬಂಡೆಯ ಮೇಲಿರುವ ದೇವಾಲಯದ ಒಂದು ಪಾರ್ಶ್ವದ ತಡೆಗೋಡೆಯನ್ನು ಪುನರ್‌ ನಿರ್ಮಿಸಲು ಕೆಳಭಾಗದಲ್ಲಿರುವ ಶ್ರೀ ಪಾರ್ವತಿ ಸನ್ನಿಧಿ ಬಳಿಯಿಂದ ಜನರು ಕಲ್ಲು, ಸಿಮೆಂಟು,ಮರಳುಗಳನ್ನು ತಲೆ ಹೊರೆಯ ಮೂಲಕ ಹೊತ್ತು ತಂದು ಕಾಮಗಾರಿ ನಡೆಸಿದ್ದಾರೆ. ಕಾಮಗಾರಿಗೆ ಬೇಕಾದ ಕಲ್ಲು, ಸಿಮೆಂಟು, ಮರಳು,ಕಬ್ಬಿಣ ಸರಳು, ಊಟೋಪಚಾರಗಳನ್ನು ದಾನಿಗಳು ನೀಡಿದ್ದು, ಒಂದು ವಾರದಲ್ಲಿ ಕೆಲಸವನ್ನು ಪೂರ್ಣಗೊಳಿಸಿ ಭಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕಳೆದ ಅಕ್ಟೋಬರ್‌ 14ರಂದು ಕಾರಿಂಜೇಶ್ವರ ದೇವಸ್ಥಾನದ ಒಂದು ಭಾಗದ ತಡೆಗೋಡೆ ಕುಸಿದು ಬಿದಿದ್ದು ಆಗ ಕೆಲವು ಆರೋಪ ಕೇಳಿ ಬಂದಿತ್ತು. ಘಟನೆಯ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ. ರಮಾನಾಥ ರೈ, ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳ ತಂಡ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ತಡೆಗೋಡೆ ಪುನರ್‌ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಶೀಘ್ರ ಕಾಮಗಾರಿ ಕೈಗೆತ್ತಿಕೊಳ್ಳುವ ಬಗ್ಗೆ ಜನಪ್ರತಿನಿಧಿಗಳು ಭರವಸೆ ನೀಡಿದ್ದರು. ಈ ನಡುವೆ ಭಕ್ತರು ಶ್ರಮದಾನದ ಮೂಲಕ ತಡೆಗೋಡೆ ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next