ಕುಂದಾಪುರ:ಕುಂದಾಪುರದ ಹಟ್ಟಿಯಂಗಡಿ ಗ್ರಾ.ಪಂ.ವ್ಯಾಪ್ತಿಯ ಕರ್ಕಿಗುಡ್ಡೆಯಲ್ಲಿ ದಲಿತ ಸಂಘರ್ಷ ಸಮಿತಿ ಕರ್ಕಿ (ಅಂಬೇಡ್ಕರ್ ವಾದ) ಇದರ ಗ್ರಾಮ ಶಾಖೆ ಪುನಶ್ಚೇತನ ಕಾರ್ಯಕ್ರಮ ಹಾಗೂ ಕುಂದಾಪುರ ಪೊಲೀಸ್ ಉಪವಿಭಾಗ, ಕುಂದಾಪುರ ವೃತ್ತ ಹಾಗೂ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ಪೊಲೀಸ್ ಜನಸಂಪರ್ಕ ಸಭೆ ಜರಗಿತು.
ಕಾವ್ರಾಡಿ ಜಿ.ಪಂ ಸದಸ್ಯೆ ಜ್ಯೋತಿ ಅವರು ಮಾತನಾಡಿ, ಸರಕಾರ ನೀಡುತ್ತಿರುವ ವಿವಿಧ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಸ್ವಾವಲಂಬಿ ಜೀವನ ನಡೆಸುವತ್ತ ಗಮನ ಕೊಡುವ ಜೊತೆಗೆ ಶೈಕ್ಷಣಿಕವಾಗಿ ಮುಂದುವರಿದು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಬೇಕು ಎಂದರು.
ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ ಮಾತನಾಡಿ, ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಕಲ್ಪನೆಯಲ್ಲಿ ಡಾ| ಬಿ.ಆರ್. ಅಂಬೇಡ್ಕರ್ ಅಂತಹ ಅಪ್ರತಿಮ ನಾಯಕರಿಂದ ಸಂವಿಧಾನ ರಚನೆಯಾಗಿದೆ. ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ವ್ಯವಸ್ಥೆಗೆ ಹೆಚ್ಚು ಒತ್ತು ನೀಡಬೇಕಿದೆ. ಯುವಕರಿಂದ ಸ್ವಸ್ಥ ಸಮಾಜ ನಿರ್ಮಾಣ ಕಾರ್ಯ ಆಗಬೇಕಿದ್ದು ಯುವ ಜನಾಂಗವು ಸಾಧನೆಯತ್ತ ಗಮನಹರಿಸಬೇಕಿದೆ. ಶಿಕ್ಷಣ ಹಾಗೂ ದುಡಿಮೆಯೇ ಬಡತನಕ್ಕೆ ಮದ್ದು. ಗುರಿಯನ್ನಿಟ್ಟುಕೊಂಡು ಕಠಿನ ಪರಿಶ್ರಮದ ಮೂಲಕ ಉನ್ನತ ಸ್ಥಾನಕ್ಕೆ ತಲುಪಬಹುದು ಎಂದರು.
ಕುಂದಾಪುರ ಗ್ರಾಮಾಂತರ ಠಾಣೆ (ಕಂಡೂÉರು) ಇಲ್ಲಿನ ಮಹಿಳಾ ಸಿಬಂದಿ ವಿಮಲಾ ಅವರು ಮಹಿಳಾ ಮತ್ತು ಮಕ್ಕಳ ವಿಚಾರದ ಪ್ರಕರಣ, ಪೋಕೊÕà ಕಾಯ್ದೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಹಟ್ಟಿಯಂಗಡಿ ಗ್ರಾ.ಪಂ ಅಧ್ಯಕ್ಷ ರಾಜೀವ್ ಶೆಟ್ಟಿ, ಸದಸ್ಯರಾದ ಸಾಧು ಕರ್ಕಿ, ಶಶಿಕುಮಾರ್, ಪ್ರಭಾಕರ್ ಶೆಟ್ಟಿ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಗೋಪಾಲಕೃಷ್ಣ, ಜಿಲ್ಲಾ ಸಮಿತಿ ಸದಸ್ಯ ಯು. ನಾರಾಯಣ, ದ.ಸಂ.ಸ. ತಾಲೂಕು ಸಂಚಾಲಕ ನಾಗರಾಜ, ಬೈಂದೂರು ವಲಯ ಸಂಚಾಲಕ ನಾಗರಾಜ್ ಕೆಂಚನೂರು, ಕರ್ಕಿ ವಲಯಾಧ್ಯಕ್ಷ ಗಣೇಶ್ ಕರ್ಕಿ, ಮಾಜಿ ಅಧ್ಯಕ್ಷ ಜಯಕರ, ಕುಂದಾಪುರ ಗ್ರಾಮಾಂತರ ಠಾಣೆ (ಕಂಡೂÉರು) ಇಲ್ಲಿನ ಉಪನಿರೀಕ್ಷಕ ಗಜೇಂದ್ರ ಪಿ.ಕೆ., ಸಹಾಯಕ ಉಪನಿರೀಕ್ಷಕ ರತ್ನಾಕರ ಹಾಗೂ ಸಿಬಂದಿ ಉಪಸ್ಥಿತರಿದ್ದರು.
ಶಿಕ್ಷಕ ದಿನೇಶ್ ವಿ. ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.