Advertisement

ಕಾರ ಹುಣ್ಣಿಮೆ ನಿಮಿತ್ತ ಸಂಭ್ರಮದ `ಕರಿ’ ಹರಿಯುವ ಕಾರ್ಯಕ್ರಮ

07:31 PM Jun 04, 2023 | Team Udayavani |
ರಬಕವಿ-ಬನಹಟ್ಟಿ : ಕಾರ ಹುಣ್ಣಿಮೆಯ ಪ್ರಯುಕ್ತ ನಗರದಲ್ಲಿ ಭಾನುವಾರ ಸಂಜೆ ಕರಿ ಹರಿಯುವ ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಜನ ಈ ಗ್ರಾಮೀಣ ಆಚರಣೆಯನ್ನು ನೋಡಲು ಆಗಮಿಸಿದ್ದರು.
ಗಾಂಧಿ ವೃತ್ತದ ಹತ್ತಿರ ಊರಿನ ಗೌಡರಾದ ಸಿದ್ದನಗೌಡ ಪಾಟೀಲ ಎತ್ತುಗಳಿಗೆ ಪೂಜೆ ಸಲ್ಲಿಸಿ ಎತ್ತುಗಳ ಓಟಕ್ಕೆ ಚಾಲನೆ ನೀಡಿದರು. ಒಟ್ಟು ನಾಲ್ಕು ಎತ್ತುಗಳು ಓಟದಲ್ಲಿ ಪಾಲ್ಗೊಂಡಿದ್ದವು. ಅದರಲ್ಲಿ ಸಿದ್ದನಗೌಡ ಪಾಟೀಲ ಎತ್ತು ಮೊದಲ ಸ್ಥಾನ ಪಡೆಯಿತು. ಎರಡನೇ ಸ್ಥಾನವನ್ನು ರಾಜುಗೌಡ ಪಾಟೀಲ ಹಾಗೂ ಮೂರನೇಯ ಸ್ಥಾನವನ್ನು ಬಸಪ್ಪ ದೇಸಾರ ಎತ್ತು, ನಾಲ್ಕನೇ ಸ್ಥಾನವನ್ನು ಗುರು ತೇಲಿ ಎತ್ತು ಪಡೆದುಕೊಂಡವು.
ಎತ್ತುಗಳು ವೇಗದಲ್ಲಿ ಕೊನೆಯವರೆಗೂ ಭಾರಿ ಪೈಪೋಟಿ ನಡೆಸುವ ಮೂಲಕ ನೋಡುಗರಿಗೆ ಅತ್ಯಂತ ಕುತೂಹಲ ಮೂಡಿಸಿದವು. ಕರಿ ಹರಿಯುವ ಕಾರ್ಯಕ್ರಮದ ನಂತರ ಹನುಮಾನ ದೇವಸ್ಥಾನದಲ್ಲಿ ಮಾಳಿಂಗರಾಯ ಪೂಜಾರಿಯಿಂದ ಬಿತ್ತನೆಗಾಗಿ ರೈತರಿಗೆ ಬೀಜ ಕೊಡುವ ಕಾರ್ಯಕ್ರಮ ನಡೆಯಿತು. ಇಲ್ಲಿ ಕೊಡುವ ಬೀಜಗಳನ್ನು ರೈತರು ತಮ್ಮ ಹೊಲದಲ್ಲಿ ಬಿತ್ತನೆ ಮಾಡುವ ಕಾಳುಗಳಲ್ಲಿ ಕೂಡಿಸಿ ಬಿತ್ತನೆ ಮಾಡುವುದರಿಂದ ಬೆಳೆ ಸಮೃದ್ಧಿಯಾಗಿ ಬರುತ್ತದೆ ಎಂಬ ನಂಬಿಕೆ ಇದೆ.
ಇದೇ ಸಂದರ್ಭದಲ್ಲಿ ಊರಿನ ಗೌಡರಾದ ಸಿದ್ದನಗೌಡ ಪಾಟೀಲ, ರಾಜುಗೌಡ ಪಾಟೀಲ, ಶ್ರೀಶೈಲ ಉಳ್ಳಾಗಡ್ಡಿ, ಮಲ್ಲಪ್ಪ ಜನವಾಡ, ಮಲ್ಲಪ್ಪ ತುಂಗಳ, ಪ್ರಶಾಂತ ಕೊಳಕಿ, ಪಂಡಿತಪ್ಪ ಪಟ್ಟಣ, ಮಹಾಶಾಂತ ಶೆಟ್ಟಿ, ಶ್ರೀಶೈಲ ಧಬಾಡಿ, ದಾನಪ್ಪ ಹುಲಜತ್ತಿ, ಭೀಮಶಿ ಪಾಟೀಲ, ರಮೇಶ ಮಹಿಷವಾಡಗಿ, ಬಸವರಾಜ ಜಾಡಗೌಡ, ಚೆನ್ನಪ್ಪ ಗುಣಕಿ, ಶಿವು ಬಾಗೇವಾಡಿ, ಗಿರಮಲ್ಲಪ್ಪ ಹೂಗಾರ, ಡಾ. ಸದಾನಂದ ಬಿಳ್ಳೂರ, ರೇವಣಪ್ಪ ಶಿವಸಿಂಪಿ, ಭೀಮಸಿ ಆದಗೊಂಡ, ಈಶ್ವರ ಪಾಟೀಲ, ಮಲಕಪ್ಪ ಪಾಟೀಲ ರೈತರು ಮತ್ತು ಗೌಡರ ದೈವ ಮಂಡಳ, ಮಂಗಳವಾರ ಪೇಟೆ ದೈವ ಮಂಡಳ ಹಾಗೂ ಸೋಮವಾರ ಪೇಟೆ ಸಮಸ್ತ ದೈವ ಮಂಡಳದ ಹಿರಿಯರು, ಸುತ್ತಲಿನ ಗ್ರಾಮದ ರೈತರು ಉಪಸ್ಥಿತರಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next