Advertisement

ಕಾರ್ಗಿಲ್‌ ವಿಜಯ ದಿವಸ್‌,ಯೋಧ ನಮನ

07:32 PM Jul 26, 2019 | Sriram |

ಉಡುಪಿ: ಸ್ವಚ್ಛಭಾರತ್‌ ಫ್ರೆಂಡ್ಸ್‌ ಮತ್ತು ಜೆಸಿಐ ಉಡುಪಿ ಸಿಟಿ ವತಿಯಿಂದ ಶುಕ್ರವಾರ ಅಜ್ಜರಕಾಡು ಹುತಾತ್ಮ ಸ್ಮಾರಕದಲ್ಲಿ ಕಾರ್ಗಿಲ್‌ ವಿಜಯೋತ್ಸವ ಹಾಗೂ ಯೋಧ ನಮನ ಕಾರ್ಯಕ್ರಮ ಜರಗಿತು.

Advertisement

ಸಮ್ಮಾನ ಸ್ವೀಕರಿಸಿದ ನಿವೃತ್ತ ಯೋಧ ಜಗದೀಶ್‌ ಪ್ರಭು ಹಿರಿಯಡ್ಕ, ಕಾರ್ಗಿಲ್‌ ಯುದ್ಧದ ಸಮಯದಲ್ಲಿ ನಡೆದ ಘಟನಾವಳಿ ಮರೆಯಲು ಸಾಧ್ಯವಿಲ್ಲ. ಯುದ್ಧದ ಸಮಯದಲ್ಲಿ ಗಡಿಯಲ್ಲಿ ಶತ್ರು ರಾಷ್ಟ್ರದವರು ನಡೆಸಿದ ಶೆಲ್‌ ದಾಳಿಗೆ ನಾವು ತಕ್ಕ ಪ್ರತ್ಯುತ್ತರ ನೀಡಿದೆವು. ಸತತವಾಗಿ 21 ದಿನಗಳ ಕಾಲ ಸರಿಯಾಗಿ ಆಹಾರವನ್ನು ಸೇವಿಸದೆ ದೇಶದ ಹಿತಾಸಕ್ತಿಗಾಗಿ ಹೋರಾಟ ಮಾಡಿದ ಅನುಭವ ವಿಶೇಷ ಎಂದರು.

ಮಾಜಿ ಸೈನಿಕರ ವೇದಿಕೆಯ ಅಧ್ಯಕ್ಷ ಕರ್ನಲ್‌ ರೊಡ್ರಿಗಸ್‌, ಮಾಜಿ ಸೈನಿಕ ಗಿಲ್ಬರ್ಟ್‌ ಬಿ., ವಾದಿರಾಜ್‌ ಹೆಗ್ಡೆ, ಗಣೇಶ್‌ ರಾವ್‌, ಮಾಜಿ ಸೈನಿಕರ ಸಹಕಾರಿ ಸಂಘದ ಕಾರ್ಯದರ್ಶಿ ಪರಮಶಿವ ಕೆ, ರಘುಪತಿ ರಾವ್‌, ತುಳಸಿ ದೇವಾಡಿಗ, ಜೆಸಿಐ ಉಡುಪಿ ಸಿಟಿ ಅಧ್ಯಕ್ಷ ಜಗದೀಶ್‌ ಶೆಟ್ಟಿ, ರಾಘವೇಂದ್ರ ಪ್ರಭು ಕರ್ವಾಲು, ಉದಯ ನಾಯ್ಕ, ಕಿರಣ್‌ ಭಟ್‌, ಬಂಧನ್‌ ಬ್ಯಾಂಕ್‌ ಗುರುದತ್ತ, ಅಭಿಷೇಕ್‌, ಚಿತ್ತರಂಜನ್‌, ಪ್ರೇಮ ಪ್ರಸಾದ್‌ ಶೆಟ್ಟಿ ಉಪಸ್ಥಿತರಿದ್ದರು.

ಶಾಶ್ವತವಾಗಿ ಉಳಿಯಲಿ
ಯೋಧರು ಬಹುತೇಕ ಸಂದರ್ಭದಲ್ಲಿ ಸಮಾಜಕ್ಕೆ ಸಹಕಾರ ನೀಡುವುದರಿಂದ ಅವರನ್ನು ಕಲ್ಪವೃಕ್ಷಕ್ಕೆ ಹೋಲಿಸಬಹುದು. ಯೋಧರ ಹೆಸರನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಸೈನಿಕರ ಮನೆ ಸಂಪರ್ಕಿಸುವ ರಸ್ತೆಗೆ ಅವರ ಹೆಸರನ್ನು ಇಡಬೇಕು.
-ಗಣೇಶ್‌ ಪ್ರಸಾದ್‌,ಉಪನ್ಯಾಸಕ

Advertisement

Udayavani is now on Telegram. Click here to join our channel and stay updated with the latest news.

Next