Advertisement

ದೇಶಾದ್ಯಂತ ಕಾರ್ಗಿಲ್ ವಿಜಯ್ ದಿವಸ್ ಸಂಭ್ರಮ;ಹುತಾತ್ಮ ಯೋಧರಿಗೆ ಗೌರವ

10:43 AM Jul 26, 2017 | Sharanya Alva |

ನವದೆಹಲಿ:ಪಾಕಿಸ್ತಾನದ ವಿರುದ್ಧ ಕಾರ್ಗಿಲ್ ಯುದ್ಧದಲ್ಲಿ ಭರ್ಜರಿ ಜಯಭೇರಿ ಸಾಧಿಸಿರುವ ಸ್ಮರಣಾರ್ಥವಾಗಿ ಬುಧವಾರ ದೇಶಾದ್ಯಂತ ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಹುತಾತ್ಮ ವೀರ ಯೋಧರನ್ನು ನೆನೆದು ಗೌರವ ಸಮರ್ಪಿಸಲಾಯಿತು.

Advertisement

ರಾಷ್ಟ್ರರಾಜಧಾನಿಯ ಇಂಡಿಯಾ ಗೇಟ್ ನಲ್ಲಿರುವ (ಅಮರ್ ಜವಾನ್ ಜ್ಯೋತಿ) ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ರಕ್ಷಣಾ ಸಚಿವ ಅರುಣ್ ಜೇಟ್ಲಿ, ಇಂಡಿಯನ್ ಆರ್ಮಿ ಮುಖ್ಯಸ್ಥ ಬಿಪಿನ್ ರಾವತ್, ಭಾರತೀಯ ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಬಿರೇಂದರ್ ಸಿಂಗ್ ಮತ್ತು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾನ್ಬಾ ಗೌರವ ಅರ್ಪಿಸಿದರು.

1999ರ ಜುಲೈ 26ರಂದು ಭಾರತೀಯ ಸೇನಾಪಡೆ ಜಮ್ಮು ಕಾಶ್ಮೀರದ ಲಡಾಕ್ ಪ್ರಾಂತ್ಯ ಸೇರಿದಂತೆ ಹಿಮಾಲಯ ಪ್ರದೇಶದಲ್ಲಿ ಸುಮಾರು 60 ದಿನಗಳ ಕಾಲ ಪಾಕ್ ಸೇನೆಯ ವಿರುದ್ಧ ಹೋರಾಡಿ ಜಯಶಾಲಿಯಾಗಿತ್ತು. ಆ ನಿಟ್ಟಿನಲ್ಲಿ ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ ಅನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next