Advertisement

ನಾನು ದೇಶಸೇವೆ ಮಾಡಿದೆ, ಈ ವ್ಯವಸ್ಥೆ ನನ್ನ ಮಗನನ್ನು ಉಳಿಸಿಲ್ಲ: ಕಣ್ಣೀರಿಟ್ಟ ಕಾರ್ಗಿಲ್ ಹೀರೋ

10:06 AM Apr 30, 2021 | Team Udayavani |

ಕಾನ್ಪುರ: ಕೋವಿಡ್ 19 ಸೋಂಕಿನ ಎರಡನೇ ಅಲೆ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಬಾರಿ ಸೋಂಕಿನಿಂದ ಸಾವನ್ನುಪ್ಪುವವರ ಸಂಖ್ಯೆಯೂ ಜಾಸ್ತಿಯಾಗಿದೆ. ಹಲವರು ಆಕ್ಸಿಜನ್, ಐಸಿಯು ಬೆಡ್ ಸಮಯಕ್ಕೆ ಸರಿಯಾಗಿ ಸಿಗದೆ ಹಲವರು ಸಾವನ್ನಪ್ಪಿದ ಘಟನೆಯು ವರದಿಯಾಗುತ್ತಿದೆ.

Advertisement

ಉತ್ತರ ಪ್ರದೇಶದ ಕಾನ್ಪುರದಲ್ಲೂ ಕೋವಿಡ್ ಅಟ್ಟಹಾಸ ಜೋರಾಗಿದೆ. ಆಕ್ಸಿಜನ್ ಸಿಲಿಂಡರ್ ಗಳ ಕೊರತೆಯಿದ್ದು, ಸಾವನ್ನಪ್ಪಿದ ಸೋಂಕಿತರ ಕುಟುಂಬಿಕರು ಮೃತದೇಹದ ಮುಖ ನೋಡಲೂ ಗಂಟೆಗಳ ಕಾಲ ಕಾದು ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ.

ಗಡಿಯಲ್ಲಿ ದೇಶಕ್ಕಾಗಿ ಹೋರಾಡಿದ ಇಲ್ಲಿನ ಮಾಜಿ ಸೈನಿಕರೊಬ್ಬರು ತಮಗೆ ಎದುರಾದ ಸಂಕಷ್ಟದ ಕುರಿತಾಗಿ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ಕೋವಿಡ್ ಜಾಗೃತಿ ಮೂಡಿಸಲು ಕೇರಳ ಪೊಲೀಸರ ವಿನೂತನ ಪ್ರಯತ್ನ : ಹಾಡಿಗೆ ಹೆಜ್ಜೆ ಹಾಕಿ ಆರಕ್ಷಕರು!

ಸುಬೇದಾರ್ ಮೇಜರ್ ( ನಿವೃತ್ತ) ಹರಿ ರಾಮ್ ದುಬೆ ಅವರು ಕಾರ್ಗಿಲ್ ಯುದ್ಧದಲ್ಲಿ ಭಾರತಕ್ಕಾಗಿ ಹೋರಾಡಿದವರು. ಆದರೆ ಕೋವಿಡ್ ನಿಂದ ಸಾವನ್ನಪ್ಪಿದ ತಮ್ಮ ಮಗನ ಮೃತದೇಹವನ್ನು ನೋಡಲು ಹಲವು ಗಂಟೆಗಳ ಕಾಲ ಅವರು ಕಾಯಬೇಕಾಯಿತು.

Advertisement

ಈ ಬಗ್ಗೆ ಮಾತನಾಡಿರುವ ಅವರು, “ನಾನು 1984ರಿಂದ 2011ರವರೆಗೆ ದೇಶಸೇವೆ ಮಾಡಿದ್ದೇನೆ. ಕಾರ್ಗಿಲ್ ನಿಂದ ಬಾರಾಮುಲ್ಲ, ಲಡಾಖ್ ನಲ್ಲಿ ಉಗ್ರರನ್ನು ಹೊಡೆದುರಳಿಸಿದ್ದೇನೆ. ಆದರೆ ಈ ವ್ಯವಸ್ಥೆ ನನ್ನ ಮಗನನ್ನು ನನಗೆ ಉಳಿಸಿಕೊಡಲಿಲ್ಲ” ಎಂದು ಅಳಲು ತೋಡಿಕೊಂಡಿದ್ದಾರೆ.

ಹರಿ ರಾಮ್ ದುಬೆ ಅವರ ಮಗ ಅಮಿತಾಭ್ ಗುರುವಾರ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರು. ಆದರೆ ಅಮಿತಾಭ್ ಮುಖವನ್ನು ಕೊನೆಯದಾಗಿ ನೋಡಲು ಹರಿರಾಮ್ ಕುಟುಂಬ ಕೆಲವು ಗಂಟೆಗಳ ಕಾಲ ಬಿಸಿಲಿನಲ್ಲಿ ಕಾದು ಕುಳಿತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next