Advertisement
ಕಣ್ಣೂರಿನ ಮಂಜಪ್ಪ ಕೆ. (30) ಎಂಬ ವರಿಗೆ ಮಂಗನ ಕಾಯಿಲೆ ತಗಲಿರುವುದು ದೃಢಪಟ್ಟಿದೆ. ಶಿವಮೊಗ್ಗದ ಪರಿಮಾಣ ಕ್ರಿಮಿ ಪರಿಶೋಧನ ಪ್ರಯೋಗಾಲಯ ಶನಿವಾರದಂದು ಒಟ್ಟು 24 ಶಂಕಿತ ಜ್ವರಪೀಡಿತರ ಸ್ಯಾಂಪಲ್‌ಗಳ ಕುರಿತ ವರದಿ ನೀಡಿದೆ. ಸದ್ಯ ಸಾಗರ ಹಾಗೂ ತೀರ್ಥಹಳ್ಳಿಗೆ ಸಂಬಂಧಿ ಸಿದಂತೆ ಇನ್ನಾವುದೇ ಕೆಎಫ್‌ಡಿ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ.
ಹಾಗೂ ತಾಲೂಕಿನ ತುಮರಿಯ 8, ಬ್ಯಾಕೋಡಿನ 3 ಹಾಗೂ ಕಾರ್ಗಲ್‌ನ 2 ಪ್ರಕರಣಗಳ ಸ್ಯಾಂಪಲ್ ಪರೀಕ್ಷೆ ನಡೆಸ ಲಾಗಿತ್ತು. ಹಲವೆಡೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕ್ಯಾಸನೂರು ಅರಣ್ಯ ಕಾಯಿಲೆ ವೈರಸ್ ವಾಹಕ ಉಣುಗುಗಳ ಸಂಖ್ಯೆ ಕ್ಷೀಣಿಸಬಹುದು ಎಂದು ಅಂದಾಜಿಸಲಾಗಿದೆ. ಈ ನಡುವೆ ವಿವಿಧೆಡೆ ಮಂಗಗಳ ಸಾವು ಮುಂದುವರಿದಿದೆ. ಭೀಮನೇರಿಯಲ್ಲಿ ಮೃತಪಟ್ಟ ಕಪಿಯ ಮೃತದೇಹವನ್ನು ಸೂಕ್ತ ವಿಲೇವಾರಿ ಮಾಡಲಾಗಿದೆ. ಈಗಾಗಲೇ ಮಂಗನ ಕಾಯಿಲೆ ಇರುವುದು ದೃಢಪಟ್ಟ ಭಾಗಗಳಲ್ಲಿ ಮತ್ತೂಮ್ಮೆ ಮಂಗಗಳ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸುತ್ತಿಲ್ಲ.
Related Articles
ಶಿವಮೊಗ್ಗ: ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ಪಡೆಯಬಹುದಾದ ರೋಗಗಳಲ್ಲಿ ಇದೀಗ ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‌ಡಿ)ಯನ್ನೂ ಸೇರಿಸಲಾಗಿದೆ. ಆಯುಷ್ಮಾನ್ ಭಾರತ್ ಪಟ್ಟಿಯಲ್ಲಿ ಈಗಾಗಲೇ 1,628 ರೋಗಗಳಿದ್ದು, ಮಂಗನ ಕಾಯಿಲೆ(ಕೆಎಫ್‌ಡಿ)ಯನ್ನೂ ಸೇರಿಸಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕಾರ್ಯಕಾರಿ ನಿರ್ದೇಶಕರು ಶನಿವಾರ ಆದೇಶ ಹೊರಡಿಸಿದ್ದಾರೆ. ಬಡವರಿಗೆ ಚಿಕಿತ್ಸಾ ವೆಚ್ಚ ಭರಿಸುವುದು ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ಆಯುಷ್ಮಾನ್‌ಗೆ ಸೇರ್ಪಡೆ ಮಾಡಲಾಗಿದೆ. ಈ ಯೋಜನೆಯಲ್ಲಿ ಇರುವ ಇತರ ಪ್ಯಾಕೇಜ್‌ಗಳೊಂದಿಗೆ ಹೆಚ್ಚುವರಿ ಪರೀಕ್ಷೆಗಳಿದ್ದಲ್ಲಿ ಪೂರ್ವಾನು ಮತಿಯೊಂದಿಗೆ ಪಡೆಯಬಹುದಾಗಿದೆ. ಈ ಪ್ಯಾಕೇಜ್‌ಗಳನ್ನು ತುರ್ತು ಸಂದರ್ಭದ ಪ್ಯಾಕೇಜ್‌ಗಳೆಂದು ಗುರುತಿಸುವುದರಿಂದ ನೇರವಾಗಿ ಸಾರ್ವಜನಿಕ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.
Advertisement