Advertisement
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದಲ್ಲಿ ಅತಿಥಿಗಳಾಗಿ ಮಾತನಾಡಿದರು. ಜಯರಾಮ ಪಾಟೀಲ್, ಬೆಂಗಳೂರು ಮಾತನಾಡಿ ಕಲೆ ಎಂದರೆ ಬೆಳಕಿದ್ದಂತೆ. ಅದು ಎಲ್ಲರನ್ನು ಬೆಳಗುತ್ತದೆ. ರಂಗಭೂಮಿಯ ಸೇವೆ ಹೀಗೆ ಮುಂದುವರೆಯಬೇಕಿದೆ ಎಂದರು.
Related Articles
Advertisement
ಪುಷ್ಪಾರ್ಚನೆ ಮತ್ತು ಗಣಪತಿ ಪೂಜೆಯೊಂದಿಗೆ ಕಾರ್ಯಕ್ರಮ ಶುಭಾರಂಭಗೊಂಡಿತು. ಸಭಾಧ್ಯಕ್ಷರು ಮತ್ತು ಮುಖ್ಯ ಅತಿಥಿಗಳು ಕಾರ್ಯಕ್ರಮ ಉದ್ಘಾಟಿಸಿದರು.
ನಾರಾಯಣ ಯಾಜಿ ಸಾಲೇಬೈಲು ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪುರಸ್ಕೃತ ತಿಮ್ಮಣ್ಣ ಯಾಜಿಯವರಿಗೆ ಅಭಿನಂದನಾ ನುಡಿ ಸಲ್ಲಿಸಿದರು. ಹಿರಿಯ ಯಕ್ಷಗಾನ ಕಲಾವಿದ ತಿಮ್ಮಣ್ಣ ಯಾಜಿ, ಮಣ್ಣಿಗೆಯವರಿಗೆ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ-2018 ನೀಡಿ ಗೌರವಿಸಿದರು.
ಪ್ರಶಸ್ತಿ ಸ್ವೀಕರಿಸಿದ ತಿಮ್ಮಣ್ಣ ಯಾಜಿ, ಯಕ್ಷಗಾನ ಕನ್ನಡದ ಕಲೆ. ಇದು ಕಲಾವಿದನೂ ಸಂತಸಪಟ್ಟು, ನೋಡುವವರಿಗೂ ಸಂತಸ ಕೊಡುವ ಕಲೆಯಾಗಿದೆ ಎಂದರು.
ನಾರಾಯಣ ಭಟ್ ಮೇಲಿನಗಂಟಿಗೆ ಮತ್ತು ಕೆ.ಜಿ. ಹೆಗಡೆ ಅಣ್ಣುಹಿತ್ತಲು ಅವರಿಗೆ ಶ್ರೀಮಯ ಕಲಾಪೋಷಕ ಪ್ರಶಸ್ತಿ ನೀಡಲಾಯಿತು.
ನಾರಾಯಣ ಭಟ್ಟರು ಮಾತನಾಡಿ ಕಲೆಗೆ ಬೆಲೆ ತಂದುಕೊಟ್ಟವರು ಕೆರೆಮನೆ ಮನೆತನದ ಹಿರಿಯರು. ಕೆರೆಮನೆ ಕುಟುಂಬ ಯಕ್ಷಗಾನ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದರು. ಶಂಭು ಹೆಗಡೆಯವರು ಸೋತುಗೆದ್ದವರು. ಸತ್ತು ಬದುಕಿದವರು ಎಂದು ಸ್ಮರಿಸಿದರು.
ಕೆ.ಜಿ. ಹೆಗಡೆ ಅಣ್ಣುಹಿತ್ತಲು ಮಾತನಾಡಿ ಯಕ್ಷಗಾನದಿಂದ ನಾನು ತೃಪ್ತಿ ಪಡೆದಿದ್ದೇನೆ. ಯಕ್ಷಗಾನ ನನಗೆ ಸಂತಸ ತಂದಿದೆ. ಅದಕ್ಕಾಗಿ ಯಕ್ಷಗಾನಕ್ಕೆ ನಾನು ನನ್ನ ಕೈಲಾದಷ್ಟು ನಾನು ಕೊಡುಗೆ ನೀಡಲು ಪ್ರಯತ್ನಿಸಿದ್ದೇನೆ ಎಂದರು. ಲಕ್ಷ್ಮೀನಾರಾಯಣ ಕಾಶಿ ಸ್ವಾಗತಿಸಿದರು. ಶಿವಾನಂದ ಹೆಗಡೆ ವಂದಿಸಿದರು.