Advertisement
ಪ್ರಯಾಣಿಕರ ಹಣವನ್ನು ಟೋಲ್ ಕಂಪನಿಗೆ ವರ್ಗಾಯಿಸುವ ಈ ಹೊಸ ಆಟ ಸಾರ್ವಜನಿಕರ ಪಾಲಿಗೆ ನುಂಗಲಾರದ ತುತ್ತಾಗಿದೆ. ಉತ್ತರ ಕನ್ನಡದಲ್ಲಿ ರಸ್ತೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಕೆಲ ಸೇತುವೆ ಕಾರ್ಯ ಮುಗಿದಿಲ್ಲ. ಕಾರವಾರದ ಮೇಲ್ಸೇತುವೆ ನಿರ್ಮಾಣ ನಡೆಯುತ್ತಿದೆ. ಆದಾಗ್ಯೂ ಜನರ ಕಿಸೆ ಕತ್ತರಿಸುವ ಆಟಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
Related Articles
Advertisement
ಸರಕಾರ ಹಾಗೂ ಗುತ್ತಿಗೆದಾರರ ನಡುವೆ ಶೇ.75 ರಷ್ಟು ಕೆಲಸ ಮುಗಿದ ಮೇಲೆ ಹಣ ವಸೂಲಿ ಮಾಡಬಹುದು ಎಂಬ ಒಪ್ಪಂದವಾಗಿದೆ ಎಂದು ಹೇಳಲಾಗುತ್ತಿದೆ. ಸರಕಾರ ಹಣವನ್ನು ಈ ಗುತ್ತಿಗೆದಾರರಿಗೆ ಒಪ್ಪಂದದ ಪ್ರಕಾರ ನೀಡಲಿ. ತಾವು ನಿರಾತಂಕವಾಗಿ ಉಪಯೋಗಿಸದೇ ಇರುವ, ಅರ್ಧ ನಿರ್ಮಾಣವಾದ ರಸ್ತೆಯಲ್ಲಿ ಓಡಾಡುವ ಜನರು, ವಾಹನಗಳು ಪೂರ್ತಿ ಟೋಲ್ ಏಕೆ ತುಂಬಬೇಕು ಎಂಬುದು ಹಲವರ ಪ್ರಶ್ನೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಈಗ ಪ್ರತಿ ಟೋಲ್‌ಗೇಟ್‌ನಲ್ಲಿಯೂ ಬಸ್‌ಗಳು ಟೋಲ್ ಹಣ ತುಂಬಲೇ ಬೇಕು. ಹೀಗಾಗಿ ಆ ಹಣದ ಭಾರವನ್ನು ಪ್ರಯಾಣಿಕರಿಗೆ ವರ್ಗಾಯಿಸಿದ್ದೇವೆ ಎಂದು ಹೇಳಿದ್ದಾರೆ. ಕೇವಲ 33 ಕಿಮೀ ಉದ್ದದ ರಸ್ತೆಗೆ ಭಾರಿ ಪ್ರಮಾಣದಲ್ಲಿ ಟೋಲ್ ವಿಧಿಸುವುದು ಕೂಡ ಆಕ್ಷೇಪಕ್ಕೆ ಕಾರಣವಾಗಿದೆ.
ಬಿಜೆಪಿಗೆ ತಿರುಗುಬಾಣಟೋಲ್ಗೇಟ್ಗಳಲ್ಲಿ ಕಾನೂನಿನ ಪ್ರಕಾರ ಕಾಮಗಾರಿ ಪೂರ್ತಿಯಾದ ನಂತರವೇ ಸಾರ್ವಜನಿಕರಿಂದ ಹಣ ವಸೂಲಿ ಮಾಡಬೇಕು ಎನ್ನುತ್ತಾರೆ ಕಾನೂನು ತಜ್ಞರು. ಅಲ್ಲದೇ ಈ ರಸ್ತೆ ಸುಸ್ಥಿತಿಯಲ್ಲಿ ಇಡಬೇಕಾದ ಜವಾಬ್ದಾರಿಯೂ ಟೋಲ್ ಸಂಗ್ರಹಿಸುವವರಾದಾಗಿರುತ್ತದೆ. ಟೋಲ್ ನೀಡಿದ ಸಾರ್ವಜನಿಕರಿಗೆ ತಮ್ಮ ಇಂಧನ ಉಳಿತಾಯ ಹಾಗೂ ವಾಹನದ ಸವಕಳಿ ತಪ್ಪುವುದರಿಂದ ಉತ್ತಮ ರಸ್ತೆಗಳಿಗೆ ಟೋಲ್ ನೀಡಿದರೆ ಅಪ್ರತ್ಯಕ್ಷವಾಗಿ ಆ ಹಣ ವಾಹನದ ಇಂಧನ ಹಾಗೂ ಸವಕಳಿಯಲ್ಲಿ ಉಳಿತಾಯವಾಗುತ್ತದೆ. ಆದರೆ ರಾ.ಹೆ. 66 ರಲ್ಲಿ ರಸ್ತೆಯನ್ನು ಎಲ್ಲ ಕಡೆ ಅಭಿವೃದ್ಧಿಪಡಿಸಿಲ್ಲ. ಅಲ್ಲದೇ ಹಣವನ್ನು ವಸೂಲಿ ಮಾಡಲಾಗುತ್ತಿದೆ. ಅಂದರೆ ಎರಡೂ ಕಡೆಗಳಿಂದ ಗ್ರಾಹಕರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ಕರಾವಳಿ ಭಾಗದ ಮೂವರು ಬಿಜೆಪಿ ಶಾಸಕರೂ ಮೌನವಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಗುತ್ತಿಗೆದಾರ ಕಂಪನಿ ಮಹಾರಾಷ್ಟ್ರ ಮೂಲದ ಕೇಂದ್ರ ಸಚಿವರೊಬ್ಬರಿಗೆ ಹತ್ತಿರದ್ದಾಗಿದೆ. ಹೀಗಾಗಿ ಮೇಲಿಂದ ಆದೇಶ ಬಂದ ಕಾರಣ ಜಿಲ್ಲೆಯ ಶಾಸಕರೂ ತಲೆ ಅಲ್ಲಾಡಿಸಿ ಸುಮ್ಮನಿದ್ದಾರೆ. ಈ ಹೆದ್ದಾರಿ ಕಾಮಗಾರಿ ಪೂರ್ತಿಯಾಗಲು ಮತ್ತೆ ಎಷ್ಟು ಕಾಲ ಬೇಕು? ಎಂಬ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಆದರೂ ಸರ್ಕಾರ ಕಂಪನಿಯ ಬೆನ್ನಿಗೆ ನಿಂತಿದೆ. ಇದು ಮುಂಬರುವ ದಿನಗಳಲ್ಲಿ ಬಿಜೆಪಿ ಶಾಸಕರಿಗೆ ಭಾರಿ ತಿರುಗುಬಾಣವಾಗಲಿದೆ ಎಂಬ ಅನಿಸಿಕೆ ಜನರಲ್ಲಿದೆ.