Advertisement
ಪಣಂಬೂರು ಬೀಚ್‌ನಲ್ಲಿ ರವಿವಾರ ನಡೆದ ಕರಾವಳಿ ಉತ್ಸವ ಸಮಾರೋಪ ಸಮಾರಂಭದಲ್ಲಿ ಸಚಿವ ಯು.ಟಿ. ಖಾದರ್ ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವಾಸಿ ಕೇಂದ್ರವಾಗಿ ಮಾಡಲು ಜಿಲ್ಲಾಡಳಿತ ಹಲವು ಕ್ರಮ ಕೈಗೊಂಡಿದೆ. ಜನವರಿಯಲ್ಲಿ ನದಿ ತೀರದ ಉತ್ಸವ ಆಯೋಜಿಸಲಾಗಿದೆ. ಉಳ್ಳಾಲದಲ್ಲಿ ರಾಣಿ ಅಬ್ಬಕ್ಕ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ ಎಂದರು.
Related Articles
ಬ್ರ್ಯಾಂಡ್ ಮಂಗಳೂರು ಪರಿಕಲ್ಪನೆ ಯಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ನಿರ್ಮಿಸಿದ್ದ ಮರಳಿನ ಕಲಾಕೃತಿ ಗಮನ ಸೆಳೆಯಿತು. ಕಲಾವಿದ ದಿನೇಶ್ ಹೊಳ್ಳ ಅವರ ನಿರ್ದೇಶನದಲ್ಲಿ ಕಲಾವಿದರಾದ ಮಡಪಾಡಿ ರವಿ ಹಿರೇಬೆಟ್ಟು, ಪುರಂದರ ತೊಟ್ಟಂ ಹಾಗೂ ಇತರ 3 ಮಂದಿ ಸತತ ಆರು ಗಂಟೆ ಶ್ರಮಿಸಿ ಕಲಾಕೃತಿ ನಿರ್ಮಿಸಿದರು. ಇದಕ್ಕೆ ಬೀಚ್ ಉತ್ಸವ ಸಮಿತಿ, ಪೊಲೀಸ್ ಇಲಾಖೆ ಸಹಕಾರ ನೀಡಿತು.
Advertisement
ಬೀಚ್‌ನಲ್ಲಿ ಜನಸ್ತೋಮ10 ದಿನಗಳಿಂದ ಮಂಗಳೂರು, 3 ದಿನಗಳಿಂದ ಪಣಂಬೂರು ಬೀಚ್‌ನಲ್ಲಿ ನಡೆಯುತ್ತಿದ್ದ ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವಕ್ಕೆ ರವಿವಾರ ತೆರೆಬಿತ್ತು. ಪಣಂಬೂರು ಬೀಚ್‌ನಲ್ಲಿ ರವಿವಾರ ಮಧ್ಯಾಹ್ನದ ಬಳಿಕ ಭಾರೀ ಜನಸ್ತೋಮ ಕಂಡುಬಂತು. ಗಾಳಿಪಟ ಹಾರಾಟ ನಡೆಸಿ ಚಿಣ್ಣರು ಸಂಭ್ರಮಪಟ್ಟರೆ, ಕಲಾವಿದರು ಮರಳು ಆಕೃತಿ ಬಿಡಿಸಿ ಜನತೆಯ ಮನಗೆದ್ದರು. ಹಿರಿಯರು, ಕಿರಿಯರು ಕರಾವಳಿಯ ಮೀನು ಖಾದ್ಯ ಸಹಿತ ವಿಶೇಷ ತಿಂಡಿ ತಿನಿಸುಗಳ ರುಚಿ ಸವಿದರು. ಕಡಲ ಕಿನಾರೆಯಲ್ಲಿ ಕುದುರೆ ಸವಾರಿ, ದೋಣಿ ವಿಹಾರ, ಸ್ಪೀಡ್ ಬೋಟ್‌ನಲ್ಲಿ ಕುಳಿತು ಮೋಜು ಅನುಭವಿಸಿದರು. ಕುಟುಂಬ ಸಹಿತರಾಗಿ ಆಗಮಿಸಿದ್ದ ಸ್ಥಳೀಯರು, ಪ್ರವಾಸಿಗರು ಬೀಚ್ ಉತ್ಸವದಲ್ಲಿ ಪಾಲ್ಗೊಂಡರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹಾಗೂ ಬೀಚ್ ರಕ್ಷಣಾ ಸಿಬಂದಿ ವಿಶೇಷ ನಿಗಾ ವಹಿಸಿದ್ದರು.