Advertisement

ಎ.1 ರಿಂದ ಕರಾವಳಿಯಲ್ಲಿ ಟೋಲ್‌ ದರ ಏರಿಕೆ : ಯಾವ ಟೋಲ್‌ನಲ್ಲಿ ಎಷ್ಟು?

01:09 AM Mar 31, 2021 | Team Udayavani |

ಮಂಗಳೂರು: ಕರಾವಳಿಯಲ್ಲಿ ಹಾದುಹೋಗುವ ಹೆದ್ದಾರಿಗಳ ವಿವಿಧ ಟೋಲ್‌ಗ‌ಳಲ್ಲಿ ದರ ಪರಿಷ್ಕರಣೆ ಆದೇಶ ಹೊರಡಿಸಲಾಗಿದ್ದು, ಎ. 1ರಿಂದ ಜಾರಿಗೆ ಬರಲಿದೆ.

Advertisement

ನವಯುಗ ಸಂಸ್ಥೆ ನಿರ್ವಹಿಸುವ ತಲಪಾಡಿ, ಹೆಜಮಾಡಿ, ಸಾಸ್ತಾನ ಟೋಲ್‌ಗೇಟ್‌ಗಳಿಗೆ ಈ ಆದೇಶ ಅನ್ವಯವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನೇರ ನಿರ್ವಹಣೆ ಮಾಡುವ ಬ್ರಹ್ಮರಕೂಟ್ಲು ಮತ್ತು ಎನ್‌ಐಟಿಕೆ ಟೋಲ್‌ಗೇಟ್‌ಗಳಿಗೆ ಪರಿಷ್ಕೃತ ದರಗಳನ್ನು ಎ. 1ರಂದು ಪ್ರಕಟಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಟೋಲ್‌ ದರ ಪರಿಷ್ಕರಣೆಯು ಪ್ರತೀ ವರ್ಷ ನಡೆಯುವ ವಾರ್ಷಿಕ ಪ್ರಕ್ರಿಯೆಯಾಗಿದೆ.

ಹೆಜಮಾಡಿ
– ಲಘು ವಾಹನಗಳಿಗೆ ಇದ್ದ ಏಕಮುಖ 35 ರೂ. 40 ರೂ.ಗೆ ಮತ್ತು ದ್ವಿಮುಖ ದರ 50ರಿಂದ 60 ರೂ.; ಮಾಸಿಕ ಪಾಸ್‌ ದರ 1,145ರಿಂದ 1,280 ರೂ.
– ಲಘು ವಾಣಿಜ್ಯ ವಾಹನ, ಸರಕು ವಾಹನ, ಮಿನಿ ಬಸ್‌ಗಳಿಗೆ ಏಕಮುಖ ದರ 55 ರೂ.ನಿಂದ 60 ರೂ.; ದ್ವಿಮುಖ ದರ 85 ರೂ.ನಿಂದ 95 ರೂ.; ಮಾಸಿಕ ಪಾಸ್‌ 1,850 ರೂ.ನಿಂದ 2,065 ರೂ.ಗೆ.
– ಟ್ರಕ್‌, ಬಸ್‌ಗಳಿಗೆ ಏಕಮುಖ 115 ರೂ.ಗಳಿಂದ 130 ರೂ.; ದ್ವಿಮುಖ 175 ರೂ.ಗಳಿಂದ 195 ರೂ.; ಮಾಸಿಕ ಪಾಸ್‌ 3,880 ರೂ.ಗಳಿಂದ 4,325 ರೂ.; ಸ್ಥಳೀಯರ ಮಾಸಿಕ ಪಾಸ್‌ 255 ರೂ.ಗಳಿಂದ 285 ರೂ.

ತಲಪಾಡಿ
ಲಘು ವಾಹನ: ಏಕಮುಖ ಸಂಚಾರ 40 ರೂ. ಯಥಾವತ್‌; ದ್ವಿಮುಖ ಸಂಚಾರ 60 ರೂ.ಗಳಿಂದ 65 ರೂ.; ಮಾಸಿಕ ಪಾಸ್‌ 1,400 ರೂ.
– ಲಘು ವಾಣಿಜ್ಯ ವಾಹನ, ಮಿನಿ ಬಸ್‌: ಏಕಮುಖ ಸಂಚಾರ 65 ರೂ.; ದ್ವಿಮುಖ ಸಂಚಾರ 95 ರೂ.; ಮಾಸಿಕ ಪಾಸ್‌ 2,155 ರೂ.

ಸಾಸ್ತಾನ
– ಲಘು ವಾಹನ: ಏಕಮುಖ ಸಂಚಾರ 45 ರೂ.; ದ್ವಿಮುಖ ದರ 70 ರೂ.; ಮಾಸಿಕ ಪಾಸ್‌ 1,505 ರೂ.ಗಳಿಂದ 1,555 ರೂ.
– ಲಘು ವಾಣಿಜ್ಯ ವಾಹನ, ಮಿನಿ ಬಸ್‌: ಏಕಮುಖ ಸಂಚಾರ 75 ರೂ.; ದ್ವಿಮುಖ ಸಂಚಾರ 110 ರೂ.ಗಳಿಂದ 115 ರೂ.; ಮಾಸಿಕ ಪಾಸ್‌ 2,430 ರೂ.ಗಳಿಂದ 2,510 ರೂ.
– ಟ್ರಕ್‌, ಬಸ್‌: ಏಕಮುಖ ಸಂಚಾರ 155 ರೂ.ಗಳಿಂದ 160 ರೂ.; ದ್ವಿಮುಖ ಸಂಚಾರ 230 ರೂ.ಗಳಿಂದ 235 ರೂ.; ಮಾಸಿಕ ಪಾಸ್‌ 5,095ಗಳಿಂದ 5,260 ರೂ.; ಸ್ಥಳೀಯರ ಮಾಸಿಕ ಪಾಸ್‌ 275 ರೂ.ಗಳಿಂದ 285 ರೂ.

Advertisement
Advertisement

Udayavani is now on Telegram. Click here to join our channel and stay updated with the latest news.

Next