Advertisement

ನಾಳೆ ಕಾರಟಗಿ ಬಂದ್‌

02:19 PM Nov 24, 2019 | Suhan S |

ಕಾರಟಗಿ: ತುಂಗಭದ್ರಾ ಎಡದಂಡೆ ಕಾಲುವೆಗೆ ಏ. 30ರವರೆಗೆ ನೀರು ಹರಿಸುವಂತೆ ಆಗ್ರಹಿಸಿ ನ. 25ರಂದು ಕಾರಟಗಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದರು.

Advertisement

ಪಟ್ಟಣದ ಕೆರೆಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ರೈತರ, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಲಾಶಯದಲ್ಲಿ ಸಾಕಷ್ಟುನೀರಿನ ಸಂಗ್ರಹವಿದೆ. ಈಗಲೂ ನೀರು ನಿತ್ಯ ಜಲಾಶಯಕ್ಕೆ ಹರಿದು ಬರುತ್ತಿದ್ದರೂ ಏ. 30ರವರೆಗೆ ನೀರು ಬಿಡಲು ಅಧಿಕಾರಿಗಳು ಒಪ್ಪುತ್ತಿಲ್ಲವೇಕೆ. ಅಧಿಕಾರಿಗಳು ನೀರು ಮಾರಿಕೊಳ್ಳಲು ಸಂಚು ನಡೆಸಿ ರೈತರಿಗೆ ದ್ರೋಹ ಮಾಡುತ್ತಿದ್ದಾರೆ. ಹಿಂದೆ ಡ್ಯಾಂನಲ್ಲಿ

67 ಟಿಎಂಸಿ ನೀರು ಸಂಗ್ರಹವಿದ್ದಾಗ ರೈತರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ನೀರು ಹರಿಸಲಾಗಿತ್ತು. ಈಗ 97 ಟಿಎಂಸಿ ನೀರು ಶೇಖರಣೆ ಇದ್ದರೂ ನೀರು ಹರಿಸಲು ಹಿಂದೇಟು ಹಾಕುತ್ತಿದ್ದಾರೆ. ಶಾಸಕರು ಸಭೆಯಲ್ಲಿ ಕುಳಿತು ತಲೆ ಅಲ್ಲಾಡಿಸಿ ಬರುತ್ತಾರೆ ಹೀಗಾಗಿ ಅಧಿ ಕಾರಿಗಳು ಶಾಸಕರ ಮಾತಿಗೆ ಬೆಲೆ ಕೊಡುತ್ತಿಲ್ಲ. ನೀರಾವರಿ ಸಲಹಾ ಸಮಿತಿ ಸಭೆ ನಡೆದ 3 ದಿನಗಳಲ್ಲಿ ಜಲಾಶಯಕ್ಕೆ 14 ಸಾವಿರ ಕ್ಯೂಸೆಕ್‌ ನೀರು ಹರಿದು ಬಂದಿದೆ. ಇನ್ನು ತಿಂಗಳ ಕಾಲ ನೀರು ಹರಿದು ಬರುತ್ತದೆ. ಅದನ್ನು ಗಮನದಲ್ಲಿಟ್ಟುಕೊಳ್ಳದೆ ರೈತರಿಗೆ ಅನಾವಶ್ಯವಾಗಿ ತೊಂದರೆ ಕೊಡುವುದು ಸರಿಯಲ್ಲ. ನೀರು ಹರಿಸುವ ವಿಚಾರದಲ್ಲಿ ಸಚಿವರು ನೀಡುವ ಉತ್ತರದಲ್ಲಿ ಸ್ಪಷ್ಟತೆ ಇಲ್ಲ. ಇನ್ನು ಅಧಿ ಕಾರಿಗಳು ನೀಡುವ ಉತ್ತರದ ಮೇಲೆ ಯಾವ ಸ್ಪಷ್ಟತೆ ಇರುತ್ತದೆ,

ಜಲಾಶಯದಲ್ಲಿ ನೀರು ಸಂಗ್ರವಿದ್ದ ಮೇಲೆ ರೈತರಿಗೆ ಅನುಕೂಲವಾಗುವಂತೆ ನೀರು ಬಿಡುವ ಸಮಯ ನಿಗದಿಪಡಿಸಬೇಕು. ಸುಮ್ಮನೆ ಸಲಹಾ ಸಮಿತಿ ಸಭೆ ಕರೆದು ಬಾಯಿಗೆ ಬಂದಂತೆ ಮಾತನಾಡಿ, ನಿಮ್ಮಿಷ್ಟದಂತೆ ಮಾರ್ಚ್‌ ವರೆಗೆ ನೀರು ಬಿಡುತ್ತೇನೆಂದರೆ ಒಪ್ಪುವುದಿಲ್ಲ. ಯಾವುದೇ ಸರಕಾರವಿರಲಿ ಮೊದಲು ರೈತರ ಹಿತ ಮುಖ್ಯ. ಈ ನಿಟ್ಟಿನಲ್ಲಿ 2020ರ ಏ. 30ರವರೆಗೆ ಕಾಲುವೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ನ. 25ರಂದು ಕಾರಟಗಿ ಸಂಪೂರ್ಣ ಬಂದ್‌ಗೆ ಕರೆ ನೀಡಲಾಗಿದೆ. ಪಟ್ಟಣದ ಎಲ್ಲ ವರ್ತಕರು, ಉದ್ದಿಮೆದಾದಾರರು, ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ.

ಅಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5:00 ಗಂಟೆಯವರೆಗೂ ಬಂದ್‌ ಆಚರಿಸಲಾಗುವುದು. ಬೆಳಗ್ಗೆ 11ಕ್ಕೆ ಎಪಿಎಂಸಿ ಯಾರ್ಡ್‌ನಿಂದ ಮುಖ್ಯ ರಸ್ತೆ ಮಾರ್ಗವಾಗಿ ಬೃಹತ್‌ ಪ್ರತಿಭಟನಾ ಮೆರವಣಿಗೆ ಮೂಲಕ ಕನಕದಾಸವೃತ್ತಕ್ಕೆ ತೆರಳಿ ಜಿಲ್ಲಾಧಿ ಕಾರಿಗೆ ಮನವಿ ಸಲ್ಲಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ರೈತರು ಸೇರಿದಂತೆವರ್ತಕರು, ಉದ್ದಿಮೆದಾರರು, ಸಂಘ ಸಂಸ್ಥೆಗಳ ಪದಾ ಧಿಕಾರಿಗಳು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next