Advertisement

Karataka Damanaka ಟೀಸರ್‌ಗೆ ಮೆಚ್ಚುಗೆ; ಪ್ರಭುದೇವ, ಶಿವಣ್ಣ ನಟನೆಯ ಸಿನಿಮಾ

03:06 PM Mar 01, 2024 | Team Udayavani |

ರಾಕ್‌ ಲೈನ್‌ ವೆಂಕಟೇಶ್‌ ನಿರ್ಮಾಣದ, ಯೋಗರಾಜ್‌ ಭಟ್‌ ನಿರ್ದೇಶನದ ಹಾಗೂ ಶಿವರಾಜಕುಮಾರ್‌, ಪ್ರಭುದೇವ ನಾಯಕರಾಗಿ ನಟಿಸಿರುವ ಕರಟಕ ದಮನಕ ಚಿತ್ರದ ಕ್ಯಾರೆಕ್ಟರ್‌ ಟೀಸರ್‌ ಆನಂದ್‌ ಆಡಿಯೋ ಮೂಲಕ ಬಿಡುಗಡೆಯಾಗಿದೆ. ನಟ ಸುದೀಪ್‌ ಈ ಚಿತ್ರದ ಕ್ಯಾರೆಕ್ಟರ್‌ ಟೀಸರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಟೀಸರ್‌ ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯದಲ್ಲೇ ಟ್ರೇಲರ್‌ ಬರಲಿದ್ದು, ಮಾರ್ಚ್‌ 8 ಚಿತ್ರ ಬಿಡುಗಡೆಯಾಗಲಿದೆ.

Advertisement

ನಿರ್ದೇಶಕ ಯೋಗರಾಜ್‌ ಭಟ್ಟರಿಗೆ ಈ ಕಥೆ ಲಾಕ್‌ಡೌನ್‌ನಲ್ಲಿ ಹುಟ್ಟಿತಂತೆ. “ಕರಟಕ ದಮನಕ’ ಎನ್ನುವುದು “ಪಂಚತಂತ್ರ’ ಕಥೆಗಳಲ್ಲಿ ಬರುವ ಎರಡು ಕುತಂತ್ರಿ ನರಿಗಳ ಹೆಸರು. ಸಾಮಾನ್ಯವಾಗಿ ಯಾವಾಗಲೂ ಇಬ್ಬರು ಒಟ್ಟಿಗೆ ಇರುವುದನ್ನು ನೋಡಿದಾಗ ಅವರನ್ನು “ಕರಟಕ ದಮನಕ’ ಎನ್ನುವುದು ಉಂಟು. ಈ ಸಿನಿಮಾದಲ್ಲಿ ಶಿವಣ್ಣ “ಕರಟಕ’ ಹಾಗೂ ಪ್ರಭುದೇವ “ದಮನಕ’ ಪಾತ್ರಗಳನ್ನು ಮಾಡಿದ್ದಾರೆ.

ಲಾಕ್‌ಡೌನ್‌ ಗೂ ಮುಂಚೆ ಹೊಳೆದ ಕಥೆ. ಹ್ಯೂಮರ್‌, ವಿಚಿತ್ರ ಆ್ಯಕ್ಷನ್‌, ಕೊನೆಗೆ ಎಮೋಶನ್‌ ಎಲ್ಲವೂ ಇದರಲ್ಲಿದೆ. ಮೊದಲ ಬಾರಿಗೆ ಇವರಿಬ್ಬರನ್ನು ತೆರೆಮೇಲೆ ನೋಡುವುದೇ ಒಂದು ಖುಷಿ. ಇಬ್ಬರೂ ನಟರ ಎನರ್ಜಿ ಸಿನಿಮಾವನ್ನು ಮತ್ತೂಂದು ಹಂತಕ್ಕೆ ತೆಗೆದುಕೊಂಡು ಹೋಗಿದೆ. ಇಲ್ಲಿ ನಾನಾ, ನೀನಾ ಎನ್ನುವುದಕ್ಕಿಂತ ನಾವು ಎನ್ನುವ ಥರ ಪಾತ್ರವಿರುತ್ತದೆ’ ಎಂದು ಕಥಾಹಂದರದ ಪರಿಚಯ ಮಾಡಿಕೊಟ್ಟರು.

ಚಿತ್ರದಲ್ಲಿ ನಿಶ್ವಿ‌ಕಾ ಹಾಗೂ ಪ್ರಿಯಾ ಆನಂದ್‌ ನಾಯಕಿಯರು “ಕರಟಕ ದಮನಕ’ ಸಿನಿಮಾದಲ್ಲಿ ಏಳು ಹಾಡುಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next