Advertisement

ಪುರಸಭೆ ಹಣಾಹಣಿಗೆ ಅಣಿಯಾಗುತ್ತಿದೆ ಕಣ

03:25 PM Dec 11, 2021 | Team Udayavani |

ಕಾರಟಗಿ: ಪುರಸಭೆ ಚುನಾವಣೆಗೆ ಕಣ ಸಿದ್ಧಗೊಳ್ಳುತ್ತಿದ್ದು, ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರು ತಮ್ಮ ಸ್ಥಾನ ಭದ್ರತೆಗೆ ಮುಖಂಡರ ಮನೆಗಳಿಗೆ ಎಡತಾಕುತ್ತ ಮೊದಲ ಹಂತದ ತಾಲೀಮು ಆರಂಭಿಸಿದ್ದಾರೆ.

Advertisement

ಪಟ್ಟಣವು ಗ್ರಾಪಂನಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದ್ದು 23 ಸದಸ್ಯರನ್ನು ಹೊಂದಿದೆ. ಪುರಸಭೆ ಸದಸ್ಯರ ಅಧಿಕಾರಾವಧಿಮುಗಿದು ಆಡಳಿತಾಧಿಕಾರಿ ನೇಮಕವಾಗಿದ್ದು ಕಾರಣಾಂತರಗಳಿಂದ ಚುನಾವಣೆ ಮುಂದೂಡಲಾಗಿತ್ತು. ಸರಕಾರ ಪುರಸಭೆ ಚುನಾವಣೆಗೆ ದಿನಾಂಕ ನಿಗದಿ ಪಡಿಸಿ ಆದೇಶ ಹೊರಡಿಸಿದ್ದರಿಂದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಡಿ. 8ರಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭಗೊಂಡಿದ್ದು, ಡಿ. 15 ನಾಮಪತ್ರ ಸಲ್ಲಿಕೆಗೆ ಕೊನೆಯದಿನವಾಗಿದೆ. ಡಿ. 27 ರಂದು ಮತದಾನ ನಡೆಯಲಿದೆ.

ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯ ನೇರ ಹಣಾಹಣಿ ನಡೆಯಲಿದ್ದು, ಎರಡೂ ಪಕ್ಷಗಳಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದಾರೆ. ತೆರೆಮರೆಯಲ್ಲಿ ತಮ್ಮ ಪಕ್ಷದ ಮುಖಂಡರಲ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದು, ಕೆಲವರಿಗೆ ಮುಖಂಡರು ಭರವಸೆ ನೀಡಿದ್ದಾರೆ. ಇನ್ನು ಕೆಲವರಿಗೆಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದರಿಂದ ನಿರಾಸೆಗೊಂಡ ಉಭಯ ಪಕ್ಷಗಳಲ್ಲಿನ ಕೆಲವು ಆಕಾಂಕ್ಷಿಗಳು ಪಕ್ಷಾಂತರ ಕೂಡ ನಡೆಸಿದ್ದಾರೆ. ಈ ನಡುವೆ ಕೆಲವರು ತಮಗೆ ಟಿಕೆಟ್‌ ಖಚಿತವೆಂದು ವಾರ್ಡ್‌ಗಳಲ್ಲಿ ಸಂಚರಿಸಿ ಮತದಾರರ ಓಲೈಕೆಗೆ ಮುಂದಾಗಿದ್ದಾರೆ.

ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ಪ್ರಬಲ ಆಕಾಂಕ್ಷಿಗಳು ವಾರ್ಡ್‌ಗಳಲ್ಲಿ ಪಾದಯಾತ್ರೆ ಆರಂಭಿಸಿ ಮತಯಾಚನೆ ಮಾಡುತ್ತಿದ್ದಾರೆ. ಇನ್ನು ಕೆಲವರು ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ದಿನಸಿ ಸಾಮಗ್ರಿಗಳನ್ನು ವಿತರಿಸಿ ಅಂದೇ ವಾರ್ಡ್  ನ ಜನತೆಯ ಬಳಿ ತಮ್ಮ ಮನದಾಳದ ಇಚ್ಛೆ ವ್ಯಕ್ತಪಡಿಸಿದ್ದಾರೆ. ಆಕಾಂಕ್ಷಿಗಳು ನಿತ್ಯವೂ ಒಂದಿಲ್ಲೊಂದು ಕಸರತ್ತು ಮಾಡುತ್ತಿದ್ದಾರೆ.

ಉಭಯ ಪಕ್ಷಗಳ ಮುಖಂಡರು ಪ್ರತಿ ಅಭ್ಯರ್ಥಿಯನ್ನು ಅಳೆದು ತೂಗಿ ಟಿಕೆಟ್‌ ಕೊಡಲು ನಿರ್ಧರಿಸಿದ್ದಾರೆ. ಅಲ್ಲದೆ ಎದುರಾಳಿ ಪಕ್ಷದಲ್ಲಿ ಟಿಕೆಟ್‌ ಕೈತಪ್ಪುವ ಕೆಲವರನ್ನುಸೆಳೆಯಲು ಕಾದುನೋಡುವ ತಂತ್ರಕ್ಕೂ ಎರಡು ಪಕ್ಷಗಳ ಮುಖಂಡರು ಮುಂದಾಗಿದ್ದಾರೆ.

Advertisement

ವಿಧಾನ ಪರಿಷತ್‌ ಚುನಾವಣೆ ಶುಕ್ರವಾರ ಮುಗಿಯಲಿದೆ. ನಂತರ ಕ್ಷೇತ್ರದ ಪಪಂ ಹಾಗೂ ಪುರಸಭೆ ಚುನಾವಣೆಯ ಕುರಿತು ಪಕ್ಷದ ಮುಖಂಡರ, ಕಾರ್ಯಕರ್ತರ, ಆಕಾಂಕ್ಷಿಗಳ ಸಭೆ ನಡೆಸಿ ಸೂಕ್ತ ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ. ವಾರ್ಡ್‌ ಜನತೆಯಅಭಿಪ್ರಾಯ ಪಡೆದುಕೊಂಡು ಅವರು ಸೂಚಿಸಿದ ಒಮ್ಮತ ಅಭ್ಯರ್ಥಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು. -ಶಿವರಾಜ ಎಸ್‌. ತಂಗಡಗಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ

ವಿಧಾನ ಪರಿಷತ್‌ ಚುನಾವಣೆಯ ನಿಮಿತ್ತಸ್ಥಳೀಯ ಸಂಸ್ಥೆಗಳ ಚುನಾವಣೆಯಕುರಿತು ಯಾವುದೇ ಸಭೆ ನಡೆಸಿಲ್ಲ.ಶನಿವಾರದಿಂದ ಪಪಂ, ಹಾಗೂ ಪುರಸಭೆಚುನಾವಣಾ ಕಣಕ್ಕೆ ಇಳಿಯುತ್ತೇನೆ. ಪಕ್ಷದ ಹಿರಿಯರ ಕೋರ್‌ ಕಮಿಟಿ ಇದ್ದು, ಅವರು ಆಕಾಂಕ್ಷಿಗಳ ಪೂರ್ವಾಪರ ತಿಳಿದುಕೊಂಡು ವಾರ್ಡ್‌ನ ಜನರ ಸಮ್ಮತಿ ನಂತರ ಕಾರಟಗಿ-ಕನಕಗಿರಿ ಸ್ಥಳೀಯ ಸಂಸ್ಥೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಘೋಷಣೆ ಮಾಡುತ್ತೇವೆ. -ಬಸವರಾಜ ಧಡೆಸೂಗೂರ,ಬಿಜೆಪಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next