Advertisement

ಎರಡು ತಿಂಗಳಿಂದ ಮುಚ್ಚಿದೆ ಮರ್ಲಾನಹಳ್ಳಿ ಗ್ರಂಥಾಲಯ

04:51 PM Oct 24, 2019 | Naveen |

ಕಾರಟಗಿ: ಸಮೀಪದ ಮರ್ಲಾನಹಳ್ಳಿ ಗ್ರಾಮದ ಗ್ರಂಥಾಲಯ ಕಳೆದ ಎರಡು ತಿಂಗಳಿಂದ ಇದ್ದೂ ಇಲ್ಲದಂತಾಗಿದೆ. ಕಟ್ಟಡ ಕೊರತೆಯಿಂದ ಕಳೆದ ಎರಡು ತಿಂಗಳಿನಿಂದ ಮುಚ್ಚಲ್ಪಟ್ಟಿದೆ.

Advertisement

ಗ್ರಾಪಂ ವತಿಯಿಂದ ನಿರ್ವಹಿಸುತ್ತಿರುವ ಗ್ರಾಮದ ಸರಕಾರಿ ಶಾಲಾ ಕಟ್ಟಡದಲ್ಲಿದ್ದ ಗ್ರಂಥಾಲಯಕ್ಕೆ ದಿನಪತ್ರಿಕೆಗಳು ಸೇರಿದಂತೆ ಕಥೆ, ಕಾದಂಬರಿ, ಕವನ ಸಂಕಲನಗಳು ಸೇರಿದಂತೆ 2 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಲಭ್ಯವಿದ್ದು, ಆದರೆ ಓದುಗರು ಸಂಖ್ಯೆ ಮಾತ್ರ ವಿರಳವಾಗಿದೆ. ಗ್ರಂಥಾಲಯ ಕಟ್ಟಡ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಪುಸ್ತಕಗಳು, ಪೀಠೊಪಕರಣಗಳು, ಗ್ರಂಥಾಲಯದ ನಾಮಫಲಕ ಮುಂತಾದವುಗಳನ್ನು ಶಾಲೆಯ ಒಂದು ಕೊಠಡಿಯಲ್ಲಿ ತೆಗೆದಿಡಲಾಗಿದೆ.

ಗ್ರಂಥಾಲಯಕ್ಕೆ ಶಾಲಾ ಕಾಲೇಜ್‌ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಕೆಲವರಿಗೆ ತಮಗೆ ಬೇಕಾದ ದಿನಪತ್ರಿಕೆಗಳು ಸಿಗದ ಕಾರಣ ಬರುತ್ತಿಲ್ಲ
ಎನ್ನುತ್ತಾರೆ ಓದುಗರು. ಗ್ರಾಮದ ಈಶ್ವರ ದೇವಸ್ಥಾನ ಆವರಣದಲ್ಲಿನ ದೇವಸ್ಥಾನಕ್ಕೆ ಸಂಬಂಧಿಸಿದ ಕಟ್ಟಡದಲ್ಲಿ ಮೊದಲು ಗ್ರಂಥಾಲಯ ಆರಂಭಿಸಲಾಗಿತ್ತು. ಕೆಲ ವರ್ಷಗಳ ನಂತರ ಖಾಸಗಿ ಕಟ್ಟಡದಲ್ಲಿ ಬಾಡಿಗೆ ಪಡೆದು ನಡೆಸಲಾಗುತ್ತಿತ್ತು. ಕೆಲ ದಿನಗಳ ಬಳಿಕ ಅದನ್ನು ಬಿಟ್ಟ ನಂತರ ಗ್ರಾಮದ ಸರಕಾರಿ ಶಾಲೆಯ ಒಂದು ಕೊಠಡಿಯಲ್ಲಿ ಕಳೆದ ಮೂರು ವರ್ಷದಿಂದ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತಿದೆ. ಆದರೆ ಮರ್ಲಾನಹಳ್ಳಿ ಗ್ರಾಮದ ಬಳಿಯ ಬಸವಣ್ಣಾ ಕ್ಯಾಂಪ್‌ನಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ರೈಲ್ವೆ ಮಾರ್ಗ ಶಾಲೆಯ ಮದ್ಯ ಬಂದಿರುವುದರಿಂದ ಶಾಲೆ ನೆಲಸಮಗೊಳಿಸಿ ಈ ಶಾಲೆಯನ್ನು ಮರ್ಲಾನಹಳ್ಳಿಯ ಯರಡೋಣಾ ರಸ್ತೆಯ ಶರಣ ಬಸವೇಶ್ವರ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ಸ್ಥಳಾಂತರಗೊಳಿಸಿದೆ.

ಹೀಗಾಗಿ ಶಾಲೆಯಲ್ಲಿ ಇಲ್ಲಿ ನಡೆಯುತ್ತಿದ್ದ ಗ್ರಂಥಾಲಯ ತೆರವುಗೊಳಿಸುವಂತೆ ಮುಖ್ಯ ಶಿಕ್ಷಕರು, ಶಿಕ್ಷಕರು ಗ್ರಾಪಂ ಹಾಗೂ ಗ್ರಂಥಾಲಯ ಮೇಲ್ವಿಚಾರಕರಿಗೆ ಮನವಿ ಸಲ್ಲಿಸಿದ್ದಾರೆ. ಗ್ರಂಥಾಲಯಕ್ಕೆ ಕಟ್ಟಡ ಕೊರತೆ ಎದುರಾದ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿಂದ ಗ್ರಂಥಾಲಯ ಮುಚ್ಚಲ್ಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next