Advertisement

ಕಾರಟಗಿ ಆಸ್ಪತ್ರೆ ಕ್ಯಾನ್ಸರ್‌ ಡಿಟೆಕ್ಷನ್‌ಗೆ ಆಯ್ಕೆ

04:10 PM Jul 10, 2019 | Team Udayavani |

ಕಾರಟಗಿ: ಕ್ಯಾನ್ಸರಿಂಗ್‌ ಡಿಟೆಕ್ಷನ್‌ಗೆ ಕಾರಟಗಿ ಸಮುದಾಯ ಆರೋಗ್ಯ ಕೇಂದ್ರ ಆಯ್ಕೆಗೊಂಡಿದೆ. ಕಾರಟಗಿ ಸಮುದಾಯ ಆರೋಗ್ಯ ಕೇಂದ್ರ ಅದೃಷ್ಟವಂತ ಆರೋಗ್ಯ ಕೆಂದ್ರವಾಗಿದೆ ಎಂದು ಪ್ರಭಾರಿ ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿ ಲಿಂಗರಾಜ್‌ ಹೇಳಿದರು.

Advertisement

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ನಡೆದ ಆಶಾ ಕಾರ್ಯಕರ್ತೆಯರ ಎನ್‌ಸಿಡಿ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳು ಕ್ಯಾನ್ಸರಿಂಗ್‌ ಡಿಟೆಕ್ಷನ್‌ಗೆ ಸಂಬಂಧಿಸಿದ ಮಹತ್ವದ ವೈದ್ಯಕೀಯ ಉಪಕರಣಗಳ ಪೂರೈಕೆಗೆ ಮನವಿ ಸಲ್ಲಿಸಿದ್ದಾರೆ. ಶೀಘ್ರದಲ್ಲೇ ಉಪಕರಣಗಳ ಪೂರೈಕೆಗೆ ಅಗತ್ಯಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಆಶಾ ಕಾರ್ಯಕರ್ತೆಯರಿಗೆ ಹಮ್ಮಿಕೊಳ್ಳಲಾದ ಈ ತರಬೇತಿ ಕಾರ್ಯಕ್ರಮ ಮಹತ್ವ ಪೂರ್ಣವಾಗಿದೆ. ಇದರಲ್ಲಿ ಹಲವಾರು ವಿಷಯಗಳ ಬಗ್ಗೆ ಅತ್ಯವಶ್ಯವಾಗಿ ತಿಳಿದುಕೊಳ್ಳಬೇಕು. ನಿಮಗೆ ಯಾವುದೇ ಸಂದೇಹವಿದ್ದರೂ ನೇರವಾಗಿ ನನ್ನನ್ನು ಕೇಳಿ ತಿಳಿದುಕೊಳ್ಳಿ. ಐದು ದಿನದ ತರಬೇತಿಯಲ್ಲಿ ಎಲ್ಲವನ್ನು ಸಮರ್ಪಕವಾಗಿ ತಿಳಿಹೇಳಲಾಗುವುದು. ಸಾರ್ವಜನಿಕರ ಆರೋಗ್ಯವನ್ನು ನಾವು ಎಷ್ಟರ ಮಟ್ಟಿಗೆ ಕಾಪಾಡಲು ನಿರತರಾಗಿದ್ದೇವೆ ಎಂಬುದು ಮುಖ್ಯ. ಈ ತರಬೇತಿಯಲ್ಲಿ ಆರ್‌ಸಿಡಿ, ಎನ್‌ಸಿಡಿ ವಿಷಯಗಳ ಬಗ್ಗೆ ತರಬೇತುದಾರರು ಸಂಪೂರ್ಣ ಮಾಹಿತಿ ನೀಡುತ್ತಾರೆ. ಇಲ್ಲಿ ಹೇಳುವ ವಿಷಯಗಳ ಬಗ್ಗೆ ನೀವು ಗಮನವಿಟ್ಟು ಅರ್ಥೈಸಿಕೊಳ್ಳಬೇಕು ಎಂದರು.

ಆಡಳಿತ ವೈದ್ಯಾಧಿಕಾರಿ ಶಕುಂತಲಾ ಪಾಟೀಲ ಮಾತನಾಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ, ಸಾರ್ವತ್ರಿಕ ಆರೋಗ್ಯ ರಕ್ಷಣಾ ಕಾರ್ಯಕ್ರಮ, ಸಮಗ್ರ ಪ್ರಾಥಮಿಕ ಆರೋಗ್ಯ ಆರೈಕೆಯ ಅಡಿಯಲ್ಲಿ ಕಾರಟಗಿ, ಬೂದಗುಂಪ, ನವಲಿ ಗ್ರಾಮಗಳ ಆಶಾ ಕಾರ್ಯಕರ್ತೆಯರ ಸಭೆ ಪ್ರಮುಖವಾಗಿದೆ. ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ಮತ್ತು ಅದರ ಲಕ್ಷಣಗಳ ಕುರಿತು ತರಬೇತಿ ನೀಡುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶ. ಎಲ್ಲರ ಸಹಬಾಗಿತ್ವದಲ್ಲಿ ನಡೆಯುವ ಈ ಕಾರ್ಯಕ್ರಮ ಆಶಾಕಾರ್ಯಕರ್ತೆ ಯರಿಗೆ ಅತಿಪ್ರಮುಖವಾಗಿದ್ದು, ಎಲ್ಲರೂ ಸಹಕಾರ ನೀಡಿ ತಪ್ಪದೇ ಶಿಬಿರದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಕುಟುಂಬ ಕಲ್ಯಾಣಾಧಿಕಾರಿ ಡಾ| ಜಂಬಯ್ಯ, ಡಾ| ಸಫೀ ಹುಲಗಿ, ಶಿಲ್ಪಾ ಆಶಾ ಮೇಲ್ವಿಚಾರಕಿ ಕೊಪ್ಪಳ, ಹನುಮಂತಪ್ಪ, ಹಿರಿಯ ಆರೋಗ್ಯ ಸಹಾಯಕಿ ಶಂಕ್ರಮ, ಆಯುಷ್ಯ ವೈದ್ಯ ನಾಗರಾಜ, ಆರೋಗ್ಯ ಇಲಾಖೆಯ ವೈದ್ಯರು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next