Advertisement
ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಸಮಾಜದ ಸಾಮರಸ್ಯ ಕದಡುವ ಯತ್ನ ಮಾಡಿರುವ ಪ್ರಕಾಶ್ ರೈ ಅವರು ಶಿವರಾಮ ಕಾರಂತ ಹೆಸರಿನ ಪ್ರಶಸ್ತಿಗೆ ಅರ್ಹರಲ್ಲ ಎಂದು ಹೇಳಿ ಬಿಜೆಪಿ, ಹಿಂದೂ ಜಾಗರಣ ವೇದಿಕೆ ಸಹಿತ ಹಿಂದೂಪರ ಸಂಘಟನೆಗಳು ಹಾಗೂ ಹಲವು ಸಂಘ- ಸಂಸ್ಥೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ಪ್ರಶಸ್ತಿ ಸ್ವೀಕರಿಸಲು ಆಗಮಿಸುವುದಕ್ಕಿಂತ ಮುಂಚಿತ ವಾಗಿ ಪ್ರತಿಭಟನಕಾರರು ಕೋಟದ ಬೇರೆ- ಬೇರೆ ಕಡೆಗಳಲ್ಲಿ ಗುಂಪು ಸೇರಿ ದ್ದರು. ಅನಂತರ ಕೆಲವರು ಕೋಟತಟ್ಟು ಗ್ರಾ.ಪಂ. ಎದುರಿನ ಪ್ರವೇಶ ದ್ವಾರದಲ್ಲಿ ಜಮಾ ಯಿಸಿ ದರು. ಈ ಸಂದರ್ಭ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಜೈ ಭಾರ್ಗವ ಸಂಘಟನೆಯವರು ಮತ್ತು ಹಿಂದೂ ಜಾಗರಣ ವೇದಿಕೆಯವರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಅಖೀಲ ಕರ್ನಾಟಕ ಜೋಗಿ ಸಮಾಜ ಸೇವಾ ಸಮಿತಿ ಸದಸ್ಯರು ಕೋಟ ಅಮೃತೇಶ್ವರೀ ದೇವಸ್ಥಾನದಿಂದ ಕೋಟತಟ್ಟು ಗ್ರಾ.ಪಂ. ಮುಖ್ಯ ದ್ವಾರದ ತನಕ ಮೌನ ಪ್ರತಿಭಟನೆ ನಡೆಸಿದರು. ಅವಕಾಶ ನಿರಾಕರಣೆ
ಬಿಜೆಪಿ ಮುಖಂಡರು ಕೂಡ ಪ್ರತ್ಯೇಕ ಪ್ರತಿ ಭಟನೆ ನಡೆಸಿದರು. ಪ್ರಕಾಶ್ ರೈ ಆಗಮಿಸುವ ಸಂದರ್ಭ ಶಾಂತಿಯುತ ಪ್ರತಿಭಟನೆ ನಡೆಸಲು ಅವಕಾಶ ನೀಡುವಂತೆ ಪೊಲೀಸರಲ್ಲಿ ಸಂಘಟನೆಗಳ ಪ್ರಮುಖರು ವಿನಂತಿಸಿದರು. ಆದರೆ ಪೊಲೀಸರು ಅವಕಾಶ ನಿರಾಕರಿಸಿದಾಗ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ಪಡೆದು ಬಸ್ ಮೂಲಕ ಕರೆದೊಯ್ದರು.
Related Articles
Advertisement
ಕಣ್ತಪ್ಪಿಸಿ ಬಂದ ಪ್ರತಿಭಟನಕಾರರು !ರೈ ಅವರು ಪ್ರಶಸ್ತಿ ಪಡೆಯಲು ಕಾರಂತ ಭವನ ಒಳಪ್ರವೇಶಿಸುತ್ತಿದ್ದಂತೆ ಬಿಗು ಪೊಲೀಸ್ ಬಂದೋಬಸ್ತಿನ ನಡುವೆಯೂ ಕೆಲವು ಮಂದಿ ಪ್ರತಿಭಟನಕಾರರು ಕಾರಂತ ಭವನದ ಪಕ್ಕದ ಹಿಂದಿನ ರಸ್ತೆಯಲ್ಲಿ ಜಮಾಯಿಸಿ ಕಪ್ಪು ಬಾವುಟ ಪ್ರದರ್ಶಿಸಿ, ರೈ ಅವರಿಗೆ ಈ ಪ್ರಶಸ್ತಿ ಪಡೆಯುವ ಯಾವುದೇ ಅರ್ಹತೆ ಇಲ್ಲ ಎಂದು ಧಿಕ್ಕಾರ ಕೂಗಿದರು. ಅನಂತರ ಪೊಲೀಸರು ಗುಂಪನ್ನು ಚದುರಿಸಿದರು. ರೈಗೆ ಹಲವು ಸಂಘಟನೆಗಳ ಬೆಂಬಲ
ಈ ಸಂದರ್ಭ ಜಿಲ್ಲೆಯ ಹಲವು ಸಂಘಟನೆ ಗಳು ಪ್ರಕಾಶ್ ರೈ ಅವರಿಗೆ ಬೆಂಬಲ ವ್ಯಕ್ತಪಡಿಸಿ ಪುಷ್ಪಗುತ್ಛ ನೀಡಿ ಬರಮಾಡಿಕೊಂಡರು. ಕಪ್ಪು ಬಟ್ಟೆ ಧರಿಸಿ ಬಂದ ರೈ !
ಕಪ್ಪು ಬಟ್ಟೆ, ಕಪ್ಪು ವಸ್ತುಗಳನ್ನು ಹಿಡಿದವರಿಗೆ ಪೊಲೀಸರು ಪ್ರವೇಶ ನಿರಾಕರಿಸಿದ್ದರು. ಪ್ರಶಸ್ತಿ ಸ್ವೀಕರಿಸಲು ಬಂದ ಪ್ರಕಾಶ್ ರೈ ಅವರು ಕೂಡ ಕಪ್ಪು ಬಟ್ಟೆ ಧರಿಸಿರುವುದನ್ನು ಕಂಡ ಪ್ರತಿಭಟನ ಕಾರರು “ರೈ ಅವರೇ ಕಪ್ಪು ಬಟ್ಟೆ ಧರಿಸಿದ್ದಾರೆ; ಅವರ ಜತೆ ನಮ್ಮನ್ನೂ ಒಳಬಿಡಿ’ ಎಂದು ಪೊಲೀಸರಲ್ಲಿ ತಮಾಷೆಯಾಗಿ ಕೇಳಿಕೊಂಡರು.