Advertisement

ಕರಣ್‌ ಜೋಹರ್‌ ಈಗ ಅವಳಿ ಮಗುವಿನ ತಂದೆ

03:45 AM Mar 06, 2017 | Team Udayavani |

ಮುಂಬೈ: ಬಾಲಿವುಡ್‌ ಸ್ಟಾರ್‌ ನಿರ್ಮಾಪಕ, ನಿರ್ದೇಶಕ ಕರಣ್‌ ಜೋಹರ್‌ ಅವಳಿ ಮಕ್ಕಳ ತಂದೆಯಾಗಿದ್ದಾರೆ. ಕಳೆದ ತಿಂಗಳು ಬಾಡಿಗೆ ತಾಯಿ, ಹೆಣ್ಣು ಮತ್ತು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಕರಣ್‌ ಜೋಹರ್‌ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.  ಸಾರ್ವಜನಿಕ ಆರೋಗ್ಯ ಇಲಾಖೆಯಲ್ಲಿ ಶುಕ್ರವಾರ ನೋಂದಣಿ ಆಗಿರುವುದಾಗಿ ಬೃಹನ್ಮುಂಬೈ ಮಹಾನಗರ ಪಾಲಿಕೆ  (ಬಿಎಂಸಿ) ಕಾರ್ಯನಿರ್ವಾಹಕ ಆರೋಗ್ಯಾಧಿಕಾರಿ ಡಾ.ಪದ್ಮಜಾ ಕೇಸ್ಕರ್‌ ತಿಳಿಸಿದ್ದಾರೆ. ಗಂಡು, ಹೆಣ್ಣು ಮಗುವಿನ ಜನನವಾಗಿದೆ ಎಂದಷ್ಟೇ ನೋಂದಣಿ ಮಾಡಿಸಿದ್ದಾರೆ. ಕಳೆದ ವರ್ಷದ ಜೂನ್‌ನಲ್ಲಿ ನಟ ತುಷಾರ್‌ ಕಪೂರ್‌ ಐವಿಎಫ್ ಮೂಲಕ ಲಕ್ಷ್ಯ ಎಂಬ ಮಗುವಿನ ತಂದೆಯಾಗಿರುವ ಬಗ್ಗೆ ಘೋಷಿಸಿಕೊಂಡಿದ್ದರು. ಇದಾದ ಬಳಿಕ ಕೇಂದ್ರ ಸರ್ಕಾರ ಬಾಡಿಗೆ ತಾಯಿ ಬಗ್ಗೆ ಕೆಲವೊಂದು ನಿಯಮಗಳನ್ನು ಘೋಷಣೆ ಮಾಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next