Advertisement

‌Bollywood: ಮತ್ತೆ ನಿರ್ದೇಶನದತ್ತ ಕರಣ್‌ ಜೋಹರ್:‌ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

05:41 PM May 25, 2024 | Team Udayavani |

ಮುಂಬಯಿ: ಬಾಲಿವುಡ್‌ ನಿರ್ದೇಶಕ ಕರಣ್‌ ಜೋಹರ್‌ ತಮ್ಮ 52ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತನ್ನ ಸ್ನೇಹಿತರ ಜೊತೆ ಪಾರ್ಟಿ ಮಾಡಿಕೊಂಡು ಹುಟ್ಟುಹಬ್ಬವನ್ನು ಸೆಲೆಬ್ರೆಟ್‌ ಮಾಡಿಕೊಂಡಿದ್ದಾರೆ.

Advertisement

ಬಾಲಿವುಡ್‌ ನಲ್ಲಿ ಕರಣ್‌ ಜೋಹರ್‌ ನಿರ್ಮಾಪಕ – ನಿರ್ದೇಶಕರಾಗಿ ಯಶಸ್ಸನ್ನು ಕಂಡವರು. ಅವರು ನಿರ್ದೇಶನ ಮಾಡಿದ ಸಿನಿಮಾಗಳು ಕ್ಲಾಸ್‌ ಹಿಟ್‌ ಆಗಿವೆ. ಕೌಟುಂಬಿಕ ಹಾಗೂ ಲವ್‌ ಸ್ಟೋರಿ ಸಿನಿಮಾಗಳನ್ನು ಡಿಫ್ರೆಂಟ್‌ ಆಗಿ ಹೇಳುವ ಕರಣ್‌ ಜೋಹರ್‌ ಕಳೆದ ವರ್ಷ ಬಹು ಸಮಯದ ಬಳಿಕ ಡೈರೆಕ್ಷನ್‌ ಗೆ ಕಂಬ್ಯಾಕ್‌ ಮಾಡಿದ್ದರು.

ರಣ್ವೀರ್‌ ಸಿಂಗ್‌ , ಆಲಿಯಾ ಭಟ್‌ ಅವರ ʼ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾವನ್ನು ಕರಣ್‌ ಜೋಹರ್‌ ನಿರ್ದೇಶನ ಮಾಡಿದ್ದರು. ಈ ಸಿನಿಮಾ 355 ಕೋಟಿ ರೂ.ಗಳಿಕೆ ಕಂಡಿತ್ತು. ಇದೀಗ ತನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಕರಣ್‌ ಜೋಹರ್‌ ತನ್ನ ಮುಂದಿನ ಸಿನಿಮಾದ ಬಗ್ಗೆ ಅನೌನ್ಸ್‌ ಮಾಡಿದ್ದಾರೆ.

ಇದನ್ನೂ ಓದಿ: ಕಾರ್ತಿ ಸಿನಿ ಕೆರಿಯರ್‌ನಲ್ಲೇ ಅತ್ಯಂತ ದುಬಾರಿ ಸಿನಿಮಾವಾಗಿರಲಿದೆ ʼಸರ್ದಾರ್‌ -2ʼ

ಇನ್ನು ಟೈಟಲ್‌ ಅಧಿಕೃತವಾಗದ ಸಿನಿಮಾವನ್ನು ತಾನು ನಿರ್ದೇಶನ ಮಾಡಲಿದ್ದೇನೆ ಎಂದು ಕರಣ್‌ ಜೋಹರ್‌ ಸೋಶಿಯಲ್‌ ಮೀಡಿಯಾದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

Advertisement

ಸಿನಿಮಾದ ಸ್ಕ್ರಿಪ್ಟ್‌ ಪೂರ್ಣಗೊಂಡಿದ್ದು, ಪಾತ್ರವರ್ಗದ ಹುಡುಕಾಟದಲ್ಲಿ ಕರಣ್‌ ನಿರತರಾಗಿದ್ದಾರೆ.

ಈ ಹಿಂದೆ ಕರಣ್‌ ಜೋಹರ್‌ ಟೈಗರ್‌ ಶ್ರಾಫ್‌ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಅನೌನ್ಸ್‌ ಆಗಿರುವ ಸಿನಿಮಾದಲ್ಲಿ ಟೈಗರ್‌ ಶ್ರಾಫ್‌ ಅವರೇ ಇರಲಿದ್ದಾರಾ ಎನ್ನುವುದರ ಬಗ್ಗೆ ಸದ್ಯಕ್ಕೆ ಮಾಹಿತಿ ಹೊರಬಿದ್ದಿಲ್ಲ.

ಕರಣ್‌ ಜೋಹರ್‌ ನಿರ್ದೇಶನ ಮಾಡಿದ ಸಿನಿಮಾಗಳಿಗೆ ಪ್ರತ್ಯೇಕವಾದ ಪ್ರೇಕ್ಷಕರ ವರ್ಗವೇ ಇರುತ್ತದೆ. ಈಗಾಗಲೇ ಅವರು ಬಾಲಿವುಡ್‌ ನಲ್ಲಿ ʼಕುಚ್ ಕುಚ್ ಹೋತಾ ಹೈʼ, ʼಕಭಿ ಖುಷಿ ಕಭಿ ಗಮ್ʼ, ಸ್ಟೊಡೆಂಟ್‌ ಆಫ್‌ ದಿ ಇಯರ್‌ʼ ನಂತಹ ಸಿನಿಮಾಗಳನ್ನು ಮಾಡಿ ಯಶಸ್ಸು ಕಂಡಿದ್ದಾರೆ.

 

 

Advertisement

Udayavani is now on Telegram. Click here to join our channel and stay updated with the latest news.

Next