ಕುಷ್ಟಗಿ: ಗದಗ-ವಾಡಿ ರೈಲು ಮಾರ್ಗದ ಯೋಜನೆಯಲ್ಲಿ ಇನ್ನೂ 6 ತಿಂಗಳಿನಲ್ಲಿ ಕುಷ್ಟಗಿಯಿಂದ ಹುಬ್ಬಳ್ಳಿಗೆ ರೈಲು ಸಂಚಾರ ಆರಂಭವಾಗಲಿದೆ ಎಂದು ಕೊಪ್ಪಳ ಸಂಸದ ಕರಡಿ ಹೇಳಿದರು.
ಕುಷ್ಟಗಿ ತಾಲೂಕಿನ ತಾವರಗೇರಾ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ತಾವರಗೇರಾ ಪಟ್ಟಣದ ಮಹಾತ್ವಾಕಾಂಕ್ಷೆಯ ಪಟ್ಟಣದ 88.16 ಕೋಟಿ ರೂ. ಯೋಜನಾ ವೆಚ್ಚದಲ್ಲಿ ತುರುವಿಹಾಳ ಬಳಿ ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರು ಸರಬರಾಜು ಕಲ್ಪಿಸುವ ಯೋಜನೆಗೆ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕಾಂಗ್ರೆಸ್ ನವರು ಘೋಷಣೆ ಮಾಡುತ್ತಾರೆಯೇ ಹೊರತು ಅನುಷ್ಠಾನಕ್ಕೆ ತರುವುದಿಲ್ಲ ಕಾರಟಗಿಯಿಂದ ರೈಲು ಬೆಂಗಳೂರು, ಹುಬ್ಬಳ್ಳಿಗೆ ಹೋಗುತ್ತಿದೆ.ಜೂನ್ ನಿಂದ ಸಿಂದನೂರಿನಿಂದ ರೈಲು ಆರಂಭಗೊಳ್ಳಲಿದ್ದು ಇನ್ನೂ 6 ತಿಂಗಳಿನಲ್ಲಿ ಗದಗ-ವಾಡಿ ರೈಲು ಮಾರ್ಗದ ಕುಷ್ಟಗಿಯಿಂದ ರೈಲು ಸೇವೆ ಆರಂಭಗೊಳ್ಳಲಿದೆ. ಈ ಮಾರ್ಗದ ರೈಲು ತಳಕಲ್ ನಿಂದ ಸಂಗನಾಳವರೆಗೆ ಪ್ರಾಯೋಗೀಕವಾಗಿ ಸುರಕ್ಷಿತ ಚಲನೆ ಹಿನ್ನೆಲೆಯಲ್ಲಿ ಸಂಚರಿಸಿದೆ ಎಂದರು.
ಸಿಂಧನೂರು-ನರಗುಂದ ಹೈವೇ
ಸಿಂಧನೂರು-ತಾವರಗೇರಾ-ಕುಷ್ಟಗಿ- ನರಗುಂದ ರಾಷ್ಟ್ರೀಯ ಹೆದ್ದಾರಿ ಕೇಂದ್ರ ಭೂಸಾರಿಗೆ ಸಚಿವ ನಿತೀನ್ ಗಡ್ಕರಿ ಅವರಿಂದ ಅನುಮೋಧನೆ ಸಿಕ್ಕಿದೆ. ಕೈಗಾ- ಇಲಕಲ್ ರಾಷ್ಟ್ರೀಯ ಹೆದ್ದಾರಿ ಅನುಮೋದನೆ ಸಿಕ್ಕಿದೆ ಎಂದರು.
ಇದನ್ನೂ ಓದಿ : ಪಿಂಕ್ ಬಾಲ್ ಟೆಸ್ಟ್ : ಲಂಕಾ ಬಿಗು ದಾಳಿ; 252 ಕ್ಕೆ ಟೀಮ್ ಇಂಡಿಯಾ ಆಲೌಟ್