Advertisement

ಪಾಕಿಸ್ತಾನದ ಕರಾಚಿ ಭಾರತ ವಿರೋಧಿ ಉಗ್ರರ ಕೇಂದ್ರ ಸ್ಥಾನ; ವರದಿ

03:09 PM Feb 17, 2017 | Team Udayavani |

ನವದೆಹಲಿ: ಪಾಕಿಸ್ತಾನದ ಬಂದರು ನಗರಿ ಕರಾಚಿ ಭಾರತ ವಿರೋಧಿ ಜಿಹಾದಿ ಚಟುವಟಿಕೆಯ ಕೇಂದ್ರ ಸ್ಥಾನವಾಗಿದೆ. ಅಷ್ಟೇ ಅಲ್ಲ ಕ್ರಿಮಿನಲ್ಸ್ ಗಳು ಕೂಡಾ ಪಾಕಿಸ್ತಾನ ಮಿಲಿಟರಿ ಬೆಂಬಲದೊಂದಿಗೆ ಅಟ್ಟಹಾಸಗೈಯುತ್ತಿರುವುದಾಗಿ ಬ್ರುಸೆಲ್ಸ್ ಮೂಲದ ಇಂಟರ್ ನ್ಯಾಷನಲ್ ಕ್ರೈಸಿಸ್ ಗ್ರೂಫ್ ನ ಚಿಂತಕರ ಚಾವಡಿ ಬಿಡುಗಡೆ ಮಾಡಿರುವ ನೂತನ ವರದಿಯಲ್ಲಿ ತಿಳಿಸಿದೆ.

Advertisement

ವರದಿ ಪ್ರಕಾರ, ಜಮಾತ್ ಉದ್ ದಾವಾದಂತಹ ಮಾತೃಸಂಸ್ಥೆಯ ಕೃಪಾಕಟಾಕ್ಷದ ಲಷ್ಕರ್ ಇ ತೊಯ್ಬಾ, ಮೌಲಾನಾ ಮಸೂದ್ ಅಝರ್ ನೇತೃತ್ವದ ಜೈಶ್ ಎ ಮೊಹ್ಮದ್ ಹಾಗೂ ಶಿಯಾ ವಿರೋಧಿ ಲಷ್ಕರ್ ಇ ಜಾಂಘ್ವಿಯಂತಹ ಉಗ್ರಗಾಮಿ ಸಂಘಟನೆಗಳು ಕರಾಚಿಯಲ್ಲಿರುವ ಪ್ರಭಾವಿ ಮದರಸಾಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವುದಾಗಿ ವಿವರಿಸಿದೆ.

ಪಾಕಿಸ್ತಾನದಲ್ಲಿನ ಈ ಅಪಾಯಕಾರಿ ಸಂಘಟನೆಗಳು ಕರಾಚಿಯಲ್ಲಿ ರಾಜಾರೋಷವಾಗಿ ಸಕ್ರಿಯವಾಗಿವೆ. ಈ ಸಂಘಟನೆಗಳು ಮದರಸಾಗಳನ್ನು ಕೂಡಾ ನಡೆಸುತ್ತಿವೆ ಎಂದು ವರದಿ ಹೇಳಿದೆ.

ಪಾಕಿಸ್ತಾನದಲ್ಲಿನ ಭಯೋತ್ಪಾದಕ ಚಟುವಟಿಕೆ ಕುರಿತು ಇಂಟರ್ ನ್ಯಾಶನಲ್ ಕ್ರೈಸಿಸ್ ಗ್ರೂಫ್, ಪಾಕಿಸ್ತಾನ: ಕರಾಚಿಯಲ್ಲಿ ಉರಿಯುತ್ತಿರುವ ಬೆಂಕಿ ಎಂಬ ಹೆಸರಿನಲ್ಲಿ ವರದಿ ತಯಾರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next