Advertisement
ಏನಿದು ಏರ್‌ಸ್ಪೇಸ್?ಒಂದು ದೇಶ ಇನ್ನೊಂದು ವಾಯು ಪ್ರದೇಶದ ಮೂಲಕ ಹಾರಾಟ ನಡೆಸುವುದಕ್ಕಾಗಿ ಅಂತಾರಾಷ್ಟ್ರೀಯ ಒಪ್ಪಂದಗಳನ್ನು ನಡೆಸಲಾಗುತ್ತದೆ. ಇದರ ಅನ್ವಯ ಬೇರೆ ದೇಶದ ವಿಮಾನಗಳು ತನ್ನ ವಾಯು ನೆಲೆಯ ಮೂಲಕ ಸಂಚಾರಕ್ಕೆ ಅನುಮತಿ ಕಲ್ಪಿಸಲಾಗುತ್ತದೆ. ಇದಕ್ಕಾಗಿ ನಿರ್ದಿಷ್ಟ ಮೊತ್ತವನ್ನೂ ನೀಡಲಾಗುತ್ತದೆ.
ಸದ್ಯ ಪಾಕಿಸ್ಥಾನದ ಏರ್ ಸ್ಪೇಸ್ ಬಳಸಿ ಭಾರತದಿಂದ ಐರೋಪ್ಯ ರಾಷ್ಟ್ರಗಳು, ಅಮೆರಿಕ ಮತ್ತು ಅರಬ್ ರಾಷ್ಟ್ರಗಳಿಗೆ ಸಂಚರಿಸಲಾಗುತ್ತದೆ. 50 ವಿಮಾನಗಳು ಈ ಮಾರ್ಗ ಬಳಸಿ ಸಂಚರಿಸುತ್ತವೆ.ಪಾಕ್ ತನ್ನ ಏರ್ ಸ್ಪೇಸ್ ನಿಷೇಧಿಸಿದ ಪರಿಣಾಮ ಪರ್ಯಾಯ ದಾರಿಯನ್ನು ಭಾರತ ಬಳಸಲಿದೆ. ಇದು 2-4 ಗಂಟೆ ತಡವಾಗಲಿದೆ.
Related Articles
ಭಾರತದ ಏರ್ ಇಂಡಿಯಾ, ಸ್ಪೈಸ್ ಜೆಟ್ ಮತ್ತು ಇಂಡಿಗೋ ವಿಮಾನಗಳು ಪರ್ಯಾಯ ದಾರಿಯನ್ನು ಬಳಸಿ ಸಂಚರಿಸಲಿದೆ. ವಿದೇಶ ವಿಮಾನಯಾನ ಸಂಸ್ಥೆಯಾದ ಏರ್ ಕೆನಡ, ಯುನೈಟೆಡ್ ಏರ್ ಲೈನ್ಸ್ ಇದೇ ಮಾರ್ಗದಲ್ಲಿ ಸೇವೆ ನೀಡುತ್ತಿವೆ. ಏರ್ ಇಂಡಿಯಾಗೆ ಸುಮಾರು 500 ಕೋಟಿ ರೂ. ನಷ್ಟವಾಗಲಿದೆ. ಇತರ ವಿಮಾನಯಾನ ಸಂಸ್ಥೆಗಳಿಗೆ 60 ಕೋಟಿ ರೂ. ನಷ್ಟವಾಗಲಿದೆ.
Advertisement
ಕುತೂಹಲ ಮೂಡಿಸಿದ ಆ 4 ದಿನಪಾಕಿಸ್ಥಾನ ಭಾರತಕ್ಕೆ ಎಲ್ಲಾ ಏರ್‌ಸ್ಪೇಸ್ ನಿಷೇಧಿಸುವ ಮಾತುಗಳನ್ನಾಡಿದ ಬಳಿಕ ಆ. 31ರ ವರೆಗೆ ನಿಷೇಧ ಅನ್ವಯವಾಗುತ್ತದೆ ಎಂದು ಹೇಳಿದೆ. ಇದಕ್ಕೆ ಅಲ್ಲಿ ಕ್ಯಾಬಿನೆಟ್ ನ ಅನುಮೋದನೆಯೂ ದೊರಕಿದೆ. ಆದರೆ ಪಾಕಿಸ್ಥಾನ ಯಾಕೆ ಮುಂದಿನ 4 ದಿನಗಳನ್ನು ಮಾತ್ರ ಆಯ್ಕೆ ಮಾಡಿದೆ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಷಯವಾಗಿದೆ. ಭಾರತದೊಂದಿಗೆ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಿದ ಪಾಕ್ ನೀಡಿದ ಈ 4 ದಿನದ ಗಡುವು ಮಾತ್ರ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಏನಿರಬಹುದು ಪಾಕ್ ನ ಈ ತಂತ್ರದ ಹಿಂದಿನ ರಹಸ್ಯ?
ಸಾಧ್ಯಾಸಾಧ್ಯತೆ 1: ಈಗಾಗಲೇ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕ್ ತನ್ನ ಏರ್‌ಸ್ಪೇಸ್ ಅನ್ನು ಭಾರತದ ಬಳಸುವುದನ್ನು ನಿಲ್ಲಿಸಿದರೆ ತನಗೆ ಆಗುವ ನಷ್ಟವನ್ನು ಅಂದಾಜು ಮಾಡುತ್ತಿರಬಹುದು.
ಸಾಧ್ಯಾಸಾಧ್ಯತೆ 2: ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ವಿಧಿ 370ನ್ನು ಹಿಂದೆಗೆದ ಬಳಿಕ ವ್ಯಯಕ್ತಿಕವಾಗಿ ಪಾಕ್ ತಲ್ಲಣಕ್ಕೆ ಒಳಗಾಗಿದೆ. ಹೀಗಾಗಿ ಏರ್‌ಸ್ಪೇಸ್ ನಿಷೇಧಿಸಿದರೆ ಭಾರತದ ತನ್ನ ನಿರ್ಧಾರ ಬದಲಾಯಿಸಬಹುದೇ ಎಂದೂ ಪರೀಕ್ಷಿಸಬಹುದು.
ಸಾಧ್ಯಾಸಾಧ್ಯತೆ 3: ಭಾರತ ತನ್ನ ಮೂಲಕ ಮಧ್ಯಪ್ರಾಚ್ಯ ರಾಷ್ಟ್ರಗಳ ಮೂಲಕ ಸಂಪರ್ಕ ಇಟ್ಟುಕೊಳ್ಳುವುದನ್ನು ತಡೆಯುವ ಪ್ರಯತ್ನವಾಗಿರಬಹುದು.
ಸಾಧ್ಯಾಸಾಧ್ಯತೆ 4: ಭಾರತ ಪರ್ಯಾಯ ಏರ್‌ಸ್ಪೇಸ್ ಬಳಸಿವುದರಿಂದ ಆರ್ಥಿಕ ಹೊಡೆತಕ್ಕೆ ಸಿಲುಕಿಸುವುದು ಒಂದು ರಣ ತಂತ್ರ.
ಸಾಧ್ಯಾಸಾಧ್ಯತೆ 5: ಈಗಾಗಲೇ ಭಾರತದೊಂದಿಗೆ ಯುದ್ದ ಮಾಡುವ ಮಾತುಗಳನ್ನಾಡಿರುವ ಪಾಕ್, ತನ್ನಲ್ಲಿ ಶಸ್ತ್ರಾಸ್ತ್ರವನ್ನು ಶೇಖರಿಸಿಟ್ಟುಕೊಳ್ಳಲು ಈ ಕ್ರಮದ ಮೊರೆ ಹೋಗಿರುವ ಸಾಧ್ಯತೆ ಇದೆ. ತನ್ನ ವಿಮಾನ ನಿಲ್ದಾಣಗಳ ಮೂಲಕ ಯುಧ್ದೋಪಕರಣವನ್ನು ಸಾಗಿಸಲು ಈ ತಂತ್ರ ಬಳಸಿರಬಹುದು.
ಸಾಧ್ಯಾಸಾಧ್ಯತೆ 6: ಭಾರತದ ಮೇಲೆ ವೈಮಾನಿಕ ಯುದ್ದ ನಡೆಸಲು ತನ್ನ ವಿಮಾನ ನಿಲ್ದಾಣವನ್ನು ಬಳಸುವ ಸಾಧ್ಯತೆ ಇದೆ.
ಸಾಧ್ಯಾಸಾಧ್ಯತೆ 7: ಈಗಾಗಲೇ ಏರ್‌ಸ್ಪೇಸ್ ನಿಷೇಧಿಸುವ ಮಾತುಗಳನ್ನಾಡಿರುವ ಪಾಕ್ ತನ್ನ ಮಾತುಗಳನ್ನು ಉಳಿಸುವ ಸಲುವಾಗಿ ಈ ತಿಂಗಳು ಮಾತ್ರ ನಿಷೇಧ ಹೇರಿ ತನಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿರುವ ಮುಜುಗರವನ್ನು ತಪ್ಪಿಸಲು ಈ ಕ್ರಮಕೈಗೊಂಡಿರಬಹುದು.