Advertisement
ಕಾಪು: ಪ್ರವಾಸೋದ್ಯಮಕ್ಕೆ ಕಾಪುವಿನಲ್ಲಿ ವಿಫುಲ ಅವಕಾಶಗಳಿದ್ದು, ತಾಲೂಕಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬಲ್ಲದು.
ತಾಲೂಕಿನಲ್ಲಿ ಉದ್ಯಾವರದಿಂದ ಹೆಜಮಾಡಿಯವರೆಗಿನ 30 ಕಿ. ಮೀ. ಉದ್ದದವರೆಗೆ ಇರುವ ಕರಾವಳಿ ತೀರ ಪ್ರಮುಖ ಆಕರ್ಷಣೆ. ಕಾಪು ಬೀಚ್, ಪಡುಕೆರೆ, ಮಟ್ಟು, ಉಳಿಯಾರಗೋಳಿ ಕೆಂಪುಗುಡ್ಡೆ, ಯಾರ್ಡ್ ಬೀಚ್, ಮೂಳೂರು ತೊಟ್ಟಂ, ಉಚ್ಚಿಲ, ಎರ್ಮಾಳ್, ಪಡುಬಿದ್ರಿ, ಹೆಜಮಾಡಿ ಯಂತಹ ಆಕರ್ಷಕ ಸಮುದ್ರ ತೀರಗಳಿವೆ. ಸಹಿತ ಹಲವು ಬೀಚ್‌ಗಳಿವೆ. ಇಲ್ಲಿನ ದ್ವೀಪಸ್ತಂಭ ಪ್ರಸಿದ್ಧವಾಗಿದ್ದು, ಕಡಲ ತೀರದಲ್ಲಿ ಅನೇಕ ಸಾಹಸ ಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
Related Articles
ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೀಚ್ ಅಭಿವೃದ್ಧಿಯ ಬೇಡಿಕೆ ಇದೆ. ಆದರೆ ಇದಕ್ಕೆ ಸಿಆರ್‌ಝಡ್ ಕಾಯ್ದೆ ಅಡ್ಡಿಯಾಗಿದೆ.
ಕಾಪು ಕಡಲತೀರಸಿಆರ್‌ಝಡ್ -3ರ ವ್ಯಾಪ್ತಿಯಲ್ಲಿದ್ದು 500 ಮೀ. ವ್ಯಾಪ್ತಿಯೊಳಗೆ ಯಾವುದೇ ಕಟ್ಟಡ ನಿರ್ಮಾಣ ಸಾಧ್ಯವಿಲ್ಲ. ಸಿಆರ್‌ಝಡ್ -2 ಅನುಷ್ಠಾನವಾದರೆ, ಸ್ಪೆಷಲ್ ಟೂರಿಸಂ ಜೋನ್ ಆಗಿ ಪರಿವರ್ತಿಸಿ ಕೇರಳ-ಗೋವಾ ಮಾದರಿಯಲ್ಲಿ ಹೆಚ್ಚಿನ ಮೂಲಸೌಕರ್ಯ, ಕರಾವಳಿ ಪ್ರವಾಸೋದ್ಯಮಕ್ಕೆ ಅವಕಾಶವಿದೆ.
Advertisement
ಆಗಬೇಕಾದ್ದೇನು? ತಾಲೂಕನ್ನು ಸಮಗ್ರವಾಗಿ ಪರಿಗಣಿಸಿ ಪ್ರವಾಸೋದ್ಯಮ ಅಭಿ ವೃದ್ಧಿಗೆ ಯೋಜನೆಗಳನ್ನು ಹಾಕಬೇಕಿದೆ. ಧಾರ್ಮಿಕ ಕೇಂದ್ರಗಳು, ಪ್ರವಾಸಿ ತಾಣಗಳು, ವಿಶಿಷ್ಟ ಆಚರಣೆಗಳು ಇಲ್ಲಿದ್ದು ಇದನ್ನು ಹೊರಜಗತ್ತಿಗೆ ಪ್ರದರ್ಶಿಸುವ, ಪ್ರವಾಸಿಗರನ್ನು ಆಕರ್ಷಿಸುವ ಕೆಲಸ ಆಗಬೇಕಿದೆ. ಇದಕ್ಕಾಗಿ ಟೂರಿಸಂ ಆ್ಯಪ್, ಟೂರಿಸಂ ವೆಬ್ ಸೈಟ್ ರಚನೆಯಾಗಬೇಕು. ಪ್ರಸಿದ್ಧ ಸ್ಥಳಗಳಲ್ಲಿ ವಾಹನ ಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಗಳಾಗಬೇಕು. ಬೀಚ್‌ಗಳಲ್ಲಿ ಕಲ್ಲು ಬೆಂಚ್, ಇಂಟರ್‌ಲಾಕ್, ಅಳಿವೆಗಳಲ್ಲಿ ಹೌಸ್ ಬೋಟಿಂಗ್, ವಾಟರ್ ನ್ಪೋರ್ಟ್ಸ್, ಸರ್ಫಿಂಗ್, ಜಸ್ಕಿ, ರೆಸ್ ಕ್ಯೂ ಬೋಟ್, ಲೈಫ್ ಗಾರ್ಡ್ ವ್ಯವಸ್ಥೆ ಸಮುದ್ರ ತೀರದಲ್ಲಿ ಹೋಂ ಸ್ಟೇಗಳಿಗೆ ಅನುಮತಿ ನೀಡಬೇಕಿದೆ. ಹಲವು ಯೋಜನೆ
ಪ್ರವಾಸಿ ತಾಣಗಳಿಗೆ ಸುಲಭ ಸಂಪರ್ಕಕ್ಕೆ ರಿಂಗ್‌ರೋಡ್, ದ್ವಿಪಥ ರಸ್ತೆ, ಹೋಮ್ ಸ್ಟೇ, ಬೋಟಿಂಗ್ ವ್ಯವಸ್ಥೆ, ಟೂರಿಸ್ಟ್ ಹಡಗು, ಸೈಕ್ಲಿಂಗ್ ಟ್ರಾÂಕ್ ನಿರ್ಮಾಣದ ಯೋಜನೆಯಿದೆ. ಧಾರ್ಮಿಕ ಪ್ರವಾಸೋದ್ಯಮ ಅಭಿವೃದ್ಧಿ, ಕಾಪು ಇತಿಹಾಸ ಕೈಪಿಡಿ ರಚನೆ, ವಿವಿಧ ಸಂಸ್ಥೆಗಳೊಂದಿಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಒಪ್ಪಂದಕ್ಕೂ ವಿಶೇಷ ಪ್ರಯತ್ನ ನಡೆಸಲಾಗುತ್ತಿದೆ.
-ಮನೋಹರ್ ಶೆಟ್ಟಿ ಕಾಪು, ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಲಹೆ ನೀಡಿ
“ಪ್ರಗತಿ ಪಥ’ ನಮ್ಮ ಊರಿನ ಪ್ರಗತಿಯಗತಿ ಗುರುತಿಸುವ ಪ್ರಯತ್ನ. ಕಾಪು ತಾಲೂಕು ಪ್ರಗತಿ ಕುರಿತು ಸಲಹೆಗಳಿದ್ದರೆ
91485 94259ಗೆ ವಾಟ್ಸಾಪ್‌ಮಾಡಿ. ಸೂಕ್ತವಾದುದನ್ನು ಪ್ರಕಟಿಸುತ್ತೇವೆ. ನಿಮ್ಮ ಹೆಸರು, ಊರು ಹಾಗೂ ಭಾವಚಿತ್ರವಿರಲಿ. ಚಿತ್ರ: ಆಸ್ಟ್ರೋಮೋಹನ್ – ರಾಕೇಶ್ ಕುಂಜೂರು