Advertisement

ಕಾಪು ಸುಗ್ಗಿ ಮಾರಿಪೂಜೆ: 2 ದಿನದಲ್ಲಿ 15 ಕೋ.ರೂ.ಗೂ ಹೆಚ್ಚು ವಹಿವಾಟು

11:49 PM Mar 27, 2019 | Sriram |

ಕಾಪು: ಮಂಗಳವಾರ ಸಂಜೆ ಪ್ರಾರಂಭಗೊಂಡ ಕಾಪು ವಿನ
ಕಾಲಾವಧಿ ಸುಗ್ಗಿ ಮಾರಿಪೂಜೆ ಬುಧವಾರ ಸಂಜೆ ಸಮಾಪನಗೊಂಡಿತು.

Advertisement

ಕಾಪು ಶ್ರೀ ಹಳೇ ಮಾರಿಗುಡಿ, ಶ್ರೀ ಹೊಸ ಮಾರಿಗುಡಿ ಮತ್ತು ಶ್ರೀ ಮೂರನೇ ಮಾರಿಗುಡಿ ದೇವಸ್ಥಾನ ಗಳಲ್ಲಿ ಏಕಕಾಲದಲ್ಲಿ ಜರಗಿದ ಸುಗ್ಗಿ ಮಾರಿಪೂಜೆಯಲ್ಲಿ ಎರಡೂವರೆ ಲಕ್ಷಕ್ಕೂ ಮಿಕ್ಕಿದ ಭಕ್ತರು ಭಾಗವಹಿಸಿ, ದೇವಿಯ ದರ್ಶನ ಪಡೆದರು.
ಮಾರಿಪೂಜೆಯ ಸಂದರ್ಭ 3 ಲಕ್ಷಕ್ಕೂ ಅಧಿಕ ಕೋಳಿ ಹಾಗೂ 800ಕ್ಕೂ ಅಧಿಕ ಕುರಿ ಮತ್ತು ಆಡುಗಳು ಮಾರಾಟವಾಗಿದ್ದು, ಹಿಂದಿನ ದಾಖಲೆಗಳನ್ನು ಮುರಿದಿದೆ. ವಿವಿಧ ವ್ಯಾಪಾರ ಮಳಿಗೆಗಳಲ್ಲಿ 15 ಕೋ.ರೂ. ಗೂ ಮಿಕ್ಕಿ ವ್ಯಾಪಾರ ವಹಿವಾಟು ನಡೆದಿರಬಹುದೆಂದು ಅಂದಾಜಿಸಲಾಗಿದೆ.

60 ಸಾವಿರಕ್ಕೂ ಅಧಿಕ ಗದ್ದಿಗೆ ಪೂಜೆ ಸೇವೆ
ಗದ್ದುಗೆಯೇ ಪ್ರಧಾನವಾಗಿರುವ ಮೂರೂ ಮಾರಿಗುಡಿಗಳಲ್ಲಿ 60 ಸಾವಿರಕ್ಕೂ ಅಧಿಕ ಗದ್ದಿಗೆ (ಗದ್ದುಗೆ) ಪೂಜೆ ಸೇವೆ, 40 ಸಾವಿರಕ್ಕೂ ಅಧಿಕ ಕುಂಕುಮಾರ್ಚನೆ ಮತ್ತು 10 ಸಾವಿರಕ್ಕೂ ಅಧಿಕ ಹೂವಿನ ಪೂಜೆ ಸೇವೆಗಳು ಸಮರ್ಪಣೆಗೊಂಡವು.

ಸುಗ್ಗಿ ಮಾರಿಪೂಜೆಗಾಗಿ ಕಾಪು ಪುರಸಭೆಯ ಮುಖ್ಯಾಧಿಕಾರಿ ರಾಯಪ್ಪ ಅವರ ನೇತೃತ್ವದಲ್ಲಿ ಸ್ವತ್ಛತೆಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಈ ಕ್ರಮಕ್ಕೆ ಸಾರ್ವಜನಿಕರಿಂದ ಮತ್ತು ವ್ಯಾಪಾರಸ್ಥರಿಂದ ಶ್ಲಾಘನೆ ವ್ಯಕ್ತವಾಗಿದೆ.

ನೀತಿ ಸಂಹಿತೆ ನಡುವೆಯೂ ಮಾರಿಗುಡಿಗಳಿಗೆ ಶೋಭಾ ಕರಂದ್ಲಾಜೆ, ಪ್ರಮೋದ್‌ ಮಧ್ವರಾಜ್‌, ಶಾಸಕ ಲಾಲಾಜಿ ಆರ್‌. ಮೆಂಡನ್‌, ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಸಹಿತ ಅನೇಕ ಅಧಿಕಾರಿಗಳು ಭೇಟಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next