Advertisement

Kapu ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಜೀರ್ಣೋದ್ಧಾರ: ಶಾಸಕರು,ಉದ್ಯಮಿಗಳು, ಗಣ್ಯರಿಂದ ವಾಗ್ಧಾನ

12:16 AM Oct 04, 2023 | Team Udayavani |

ಕಾಪು: ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಶಾಸಕರು, ಉದ್ಯಮಿಗಳು, ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರು ಹಾಗೂ ಭಕ್ತರನ್ನೊಳಗೊಂಡ ಸಮಾಲೋಚನ ಸಭೆ ಮಂಗಳವಾರ ನಡೆಯಿತು.

Advertisement

ಪ್ರಧಾನ ಅರ್ಚಕ ವೇ| ಮೂ| ಶ್ರೀನಿವಾಸ ತಂತ್ರಿ ಕಲ್ಯ, ವೇ| ಮೂ| ಶ್ರೀಶ ತಂತ್ರಿ ಕೊರಂಗ್ರಪಾಡಿ ನೇತೃತ್ವದಲ್ಲಿ ಮಾರಿಯಮ್ಮ ದೇವಿಯ ಸನ್ನಿಧಾನದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿ, ಗಣ್ಯರಿಂದ ಮಾರಿಗುಡಿ ಜೀರ್ಣೋದ್ಧಾರಕ್ಕೆ ಪೂರಕವಾಗಿ ಜಿಲ್ಲೆಯಾದ್ಯಂತ ಗ್ರಾಮ ಸಮಿತಿ ರಚನೆ, ಶಿಲಾ ಸೇವೆ ಕೊಡುಗೆ, ಅಮ್ಮನ ಮಕ್ಕಳು ತಂಡಕ್ಕೆ ಭಕ್ತರ ಸೇರ್ಪಡೆ ವಾಗ್ಧಾನ ಸ್ವೀಕಾರ ಸಹಿತ ದರ್ಶನ ಸೇವೆಯಲ್ಲಿ ಅಭಯ ಪ್ರಸಾದ ನೀಡಲಾಯಿತು.

ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಗಣ್ಯರನ್ನೊಳಗೊಂಡ ತಂಡವು ಸಂಪೂರ್ಣ ಇಳಕಲ್‌ ಶಿಲೆಯಿಂದ ನಿರ್ಮಾಣಗೊಳ್ಳುತ್ತಿರುವ ಹೊಸ ಮಾರಿಗುಡಿ, ಉಚ್ಚಂಗಿ ಗುಡಿ ಸಹಿತವಾಗಿ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಗಣ್ಯ ಮಹಿಳೆಯರಾದ ನಿರುಪಮಾ ಪ್ರಸಾದ್‌, ಸ್ವಪ್ನ ಸುರೇಶ್‌, ವಿಜಯ ಗೋಪಾಲ ಬಂಗೇರ, ಕವಿತಾ ಸುರೇಶ್‌, ಬೇಬಿ ಕುಂದರ್‌, ಅಮೃತಾ ಕೃಷ್ಣಮೂರ್ತಿ, ಸ್ವರೂಪ ಶೆಟ್ಟಿ, ಮೀನಾ ಅಡ್ಯಂತಾಯ, ರೂಪಾ ಶೋಧನ್‌ ಶೆಟ್ಟಿ ಸಭೆಯನ್ನು ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಮಿತಿ ಕಾರ್ಯಾಧ್ಯಕ್ಷ ಮತ್ತು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಮಾತನಾಡಿ, ಮುಂದಿನ 1,200 ವರ್ಷಗಳವರೆಗೆ ಬಾಳಿಕೆ ಬರುವಂತಹ ಇಳಕಲ್‌ ಶಿಲೆಯನ್ನು ಬಳಸಿಕೊಂಡು ಹೊಸ ಮಾರಿಗುಡಿ ಜೀರ್ಣೋದ್ಧಾರಗೊಳ್ಳುತ್ತಿದೆ. 18 ದೇಶಗಳಲ್ಲಿ ಸಮಿತಿ ರಚಿಸಲಾಗಿದ್ದು ಕರಾವಳಿ ಜಿಲ್ಲೆಗಳಲ್ಲೂ ಸಮಿತಿ ರಚಿಸಲು ಒತ್ತು ನೀಡಲಾಗುತ್ತಿದೆ ಎಂದರು.

ಶಾಸಕರಾದ ಗುರುರಾಜ್‌ ಗಂಟಿಹೊಳೆ, ಕಿರಣ್‌ ಕುಮಾರ್‌ ಕೊಡ್ಗಿ, ಯಶ್‌ಪಾಲ್‌ ಸುವರ್ಣ, ಕೆಎಂಎಫ್‌ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಗಣ್ಯರಾದ ಜೆರ್ರಿ ವಿನ್ಸೆಂಟ್‌ ಡಯಾಸ್‌, ಬಿ.ಎನ್‌. ಶಂಕರ ಪೂಜಾರಿ, ಜಯ ಸಿ. ಕೋಟ್ಯಾನ್‌, ಗೋಪಾಲ ಬಂಗೇರ, ರಮೇಶ ಕಾಂಚನ್‌, ಜನಾರ್ದನ ತೋನ್ಸೆ, ಅಶೋಕ್‌ ಶೆಟ್ಟಿ, ಪಿ. ಕಿಶನ್‌ ಹೆಗ್ಡೆ, ಅಜಯ್‌ ಪಿ. ಶೆಟ್ಟಿ, ವಿ.ಜಿ. ಶೆಟ್ಟಿ, ಮೋಹನಚಂದ್ರ ನಂಬಿಯಾರ್‌, ನವೀನ್‌ ಅಡ್ಯಂತಾಯ, ದಿವಾಕರ್‌ ಸನಿಲ್‌, ಶೋಧನ್‌ ಕುಮಾರ್‌ ಶೆಟ್ಟಿ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿ ಸಿಕೊಳ್ಳುವ ವಾಗ್ಧಾನ ನೀಡಿದರು.

Advertisement

ಪ್ರಮುಖರಾದ ಕೆ. ಉದಯ ಕುಮಾರ್‌ ಶೆಟ್ಟಿ, ನಾಗೇಶ್‌ ಹೆಗ್ಡೆ, ಸಾಧು ಸಾಲ್ಯಾನ್‌, ಆನಂದ್‌ ಕುಂದರ್‌, ಮಟ್ಟಾರು ರತ್ನಾಕರ ಹೆಗ್ಡೆ, ಜಯಕರ ಶೆಟ್ಟಿ ಇಂದ್ರಾಳಿ, ಕುಯಿಲಾಡಿ ಸುರೇಶ್‌ ನಾಯಕ್‌, ಕಿರಣ್‌ ಕುಮಾರ್‌, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಸುಪ್ರಸಾದ್‌ ಶೆಟ್ಟಿ, ದಿನಕರ್‌ ಶೆಟ್ಟಿ, ಸುರೇಶ್‌ ಶೆಟ್ಟಿ, ಉದಯ ಶೆಟ್ಟಿ ಇನ್ನ, ಶ್ರೀಪತಿ ಭಟ್‌, ಸುಧೀರ್‌ ಶೆಟ್ಟಿ, ಸುರೇಂದ್ರ ಪಣಿಯೂರು, ಶಿಲ್ಪಾ ಜಿ. ಸುವರ್ಣ, ಗೀತಾಂಜಲಿ ಎಂ. ಸುವರ್ಣ, ರೇಷ್ಮಾ ಯು. ಶೆಟ್ಟಿ, ವಿವಿಧ ಸಮುದಾಯ ಮತ್ತು ರಾಜಕೀಯ ಪಕ್ಷಗಳ ಮುಖಂಡರು, ಹೊಸ ಮಾರಿಗುಡಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಮೇಶ್‌ ಹೆಗ್ಡೆ ಕಲ್ಯ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ದೇವಿಪ್ರಸಾದ್‌ ಶೆಟ್ಟಿ, ಗಂಗಾಧರ ಸುವರ್ಣ, ಮನೋಹರ ಶೆಟ್ಟಿ, ಮಾಧವ ಆರ್‌. ಪಾಲನ್‌, ಗೌರವ ಸಲಹೆಗಾರ ನಡಿಕೆರೆ ರತ್ನಾಕರ ಶೆಟ್ಟಿ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು, ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಪ್ರಸ್ತಾವನೆಗೈದರು. ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್‌ ಶೆಟ್ಟಿ ಬಾಲಾಜಿ ವಂದಿಸಿದರು. ನಿರ್ಮಲ್‌ ಕುಮಾರ್‌ ಹೆಗ್ಡೆ ನಿರ್ವಹಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next