Advertisement

Kapu ಪಾಂಗಾಳ: ಮಹಿಳೆ ಬಾವಿಗೆ ಬಿದ್ದು ಸಾವು

09:48 PM Oct 21, 2023 | Team Udayavani |

ಕಾಪು: ಅಪಸ್ಮಾರ ಹಾಗೂ ತಲೆ ನರದ ಸಮಸ್ಯೆಯಿಂದ ಬಳಲುತ್ತಿದ್ದ ಪ್ರಜ್ವಲ್‌ ಮರಿಯಾ (34) ಎಂಬಾಕೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಪಾಂಗಾಳದಲ್ಲಿ ಶನಿವಾರ ನಡೆದಿದೆ.

Advertisement

ಪಾಂಗಾಳ ಗ್ರಾಮದ ಮರಿಯಪುರ ನಿವಾಸಿ ನವೀನ್‌ ಮಾಬೆನ್‌ ಅವರನ್ನು ವಿವಾಹವಾಗಿದ್ದ ಪ್ರಜ್ವಲ್‌ ಮರಿಯಾ ಅವರಿಗೆ 2 ವರ್ಷದ ಹೆಣ್ಣು ಮಗುವಿದೆ.

ಶನಿವಾರ ಬೆಳಗ್ಗೆ ಎದ್ದು ನೋಡಿದಾಗ ಪ್ರಜ್ವಲ್‌ ಕಾಣದೇ ಇದ್ದು, ಹುಡುಕಾಡಿದಾಗ ಮನೆಯ ಹಿಂಬದಿಯ ಬಾವಿ ಕಟ್ಟೆಯ ಹತ್ತಿರ ಅವರ ಚಪ್ಪಲಿ ಕಂಡುಬಂದಿತ್ತು. ಅನುಮಾನದಿಂದ ಮುಳುಗುಗಾರರನ್ನು ಕರೆಸಿ ಬಾವಿಯಲ್ಲಿ ಹುಡುಕಾಡಿದಾಗ ನೀರಿನ ಅಡಿಯಲ್ಲಿ ಪ್ರಜ್ವಲ್‌ ಮರಿಯಾಳ ಮೃತದೇಹ ಸಿಕ್ಕಿದೆ.

ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next