Advertisement

ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಂಜಿನ ಮೆರವಣಿಗೆ, ಪ್ರತಿಭಟನಾ ಸಭೆ

08:56 PM Oct 05, 2021 | Team Udayavani |

ಕಾಪು : ರಾಜ್ಯ ಸರಕಾರದ ಧರ್ಮ ವಿರೋಧಿ ಮತ್ತು ಕೇಂದ್ರ ಸರಕಾರದ ಕೃಷಿ ವಿರೋಧಿ ಹಾಗೂ ಬೆಲೆ ಏರಿಕೆ ಮತ್ತು ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಪುವಿನಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಯಿತು.

Advertisement

ಕಾಪು ಪೇಟೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ದಿಕ್ಸೂಚಿ ಭಾಷಣಗಾರರಾಗಿ ಭಾಗವಹಿಸಿದ್ದ ಸುಧೀರ್ ಕುಮಾರ್ ಮರೋಳಿ ಮಾತನಾಡಿ, ಮಂದಿರವನ್ನು ಕಟ್ಟುತ್ತೇವೆ, ಉಳಿಸುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದವರು ಮಂದಿರವನ್ನೇ ಒಡೆದು ಹಾಕಿರುವುದು ಖಂಡನೀಯವಾಗಿದೆ. ಹಿಂದೂ ಧರ್ಮದ ರಕ್ಷಕರಿಂದಲೇ ನಿರಂತರವಾಗಿ ಧರ್ಮ ವಿರೋಧಿ ಕೃತ್ಯಗಳು ನಡೆಯುತ್ತಿದ್ದು, ಬಿಜೆಪಿಯಿಂದಾಗಿ ದೇಶದ ಮರ್ಯಾದೆ ಬೀದಿ ಪಾಲಾಗುವಂತಾಗಿದೆ. ಭಾರತವನ್ನು ವಿಶ್ವಗುರು ಮಾಡುತ್ತೇವೆ ಎಂದವರು, ಭಾರತ ಮಾತೆಯ ಮಾನವನ್ನೇ ಬೀದಿಗೆ ತಂದಿದ್ದಾರೆ ಎಂದು ಆರೋಪಿಸಿದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಐತಿಹಾಸಿಕ ದೇವಸ್ಥಾನಗಳನ್ನು ಒಡೆಯುವುದರೊಂದಿಗೆ ಭ್ರಷ್ಟಾಚಾರ, ಅವ್ಯವಹಾರ, ಅತ್ಯಾಚಾರಗಳಲ್ಲಿ ಭಾಗಿಗಾಳಾಗುತ್ತಿರುವುದೇ ಬಿಜೆಪಿಗರ ದೊಡ್ಡ ಸಾಧನೆಯಾಗಿದೆ. ಹಿಂದಿನ ವರ್ಷಗಳಲ್ಲಿ ಬೆಲೆಯೇರಿಕೆಯಾದ ಕೂಡಲೇ ರಸ್ತೆಯಲ್ಲಿ ಹೊರಳಾಡುತ್ತಿದ್ದ ಬಿಜೆಪಿ ಮುಖಂಡರು ಇಂದು ಬೆಲೆಯೇರಿಕೆಯಿಂದಾಗಿ ಜನ ಬೀದಿಗೆ ಬೀಳುತ್ತಿದ್ದರೂ ಸುಮ್ಮನಾಗಿರುವುದು ನಾಚಕೆಗೇಡಿನ ವಿಚಾರವಾಗಿದೆ. ಬಿಜೆಪಿಗರು ನಡೆಸುತ್ತಿರುವ ಅನಾಚಾರ, ಅತ್ಯಾಚಾರದಿಂದಾಗಿ ದೇಶದ ಮಾನ ಹರಾಜಿಗೆ ಬೀಳುವಂತಾಗಿದ್ದು, ಅವರ ದರ್ಪ, ದೌರ್ಜನ್ಯ ಮತ್ತು ದಾಷ್ಟ್ಯವನ್ನು ಮೆಟ್ಟಿ ನಿಲ್ಲಲು ಕಾಂಗ್ರೆಸಿಗರೆಲ್ಲರೂ ಒಂದುಗೂಡಬೇಕಿದೆ. ಪಕ್ಷವನ್ನು ಸಂಘಟಿಸಲು ನಾವೆಲ್ಲ ಜೊತೆಗೂಡೋಣ ಎಂದರು.

ಇದನ್ನೂ ಓದಿ:ಮಟ್ಟುಗುಳ್ಳ ಬೆಳೆಗಾರರಿಗೆ ಪರಿಹಾರ ಧನ ವಿತರಿಸಿದ ಶಾಸಕ ಲಾಲಾಜಿ ಆರ್ ಮೆಂಡನ್

Advertisement

ಕೆಪಿಸಿಸಿ ಮುಖಂಡರಾದ ನವೀನ್ ಚಂದ್ರ ಜೆ. ಶೆಟ್ಟಿ, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ನಗರ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಸಾಧಿಕ್, ಪಕ್ಷದ ಮುಖಂಡರಾದ ದೀಪಕ್ ಕೋಟ್ಯಾನ್ ಇನ್ನ, ವಿನಯ ಬಲ್ಲಾಳ್, ಅಖಿಲೇಶ್ ಕೋಟ್ಯಾನ್, ಗೀತಾ ವಾಗ್ಲೆ, ದೀಪಕ್ ಕುಮಾರ್ ಎರ್ಮಾಳ್, ರಾಜೇಶ್ ರಾವ್ ಪಾಂಗಾಳ, ರಮೀಝ್ ಹುಸೇನ್, ರಮೇಶ್ ಕಾಂಚನ್, ಶಿವಾಜಿ ಸುವರ್ಣ ಬೆಳ್ಳೆ, ವಿಲ್ಸನ್‌ ರೋಡ್ರಿಗ್ರಸ್, ಜ್ಯೋತಿ ಮೆನನ್, ಯು.ಸಿ. ಶೇಖಬ್ಬ, ಮೈಕಲ್ ರಮೇಶ್ ಡಿ ಸೋಜ, ಮುರಳಿ ಶೆಟ್ಟಿ, ಸೌರಭ್ ಬಲ್ಲಾಳ್, ಶರ್ಫುದ್ದೀನ್ ಶೇಖ್, ದಿನೇಶ್ ಪಲಿಮಾರ್, ನವೀನ್ ಎನ್. ಶೆಟ್ಟಿ, ಪ್ರಭಾ ಬಿ. ಶೆಟ್ಟಿ, ಸರಸು ಡಿ.  ಹರೀಶ್ ನಾಯಕ್, ಐಡಾ ಗಿಬ್ಬಾ ಡಿ.ಸೋಜ, ಅಮೀರುದ್ದೀನ್ ಕಾಪು, ನಾಗೇಶ್ ಕುಮಾರ್ ಉದ್ಯಾವರ, ಪ್ರಭಾಕರ್ ಆಚಾರ್ಯ, ಕೇಶವ ಹೆಜಮಾಡಿ, ವಿಕ್ರಮ್ ಕಾಪು, ಪ್ರಭಾಕರ ಪೂಜಾರಿ, ಮೆಲ್ವಿನ್ ಡಿ ಸೋಜ, ಅಬ್ದುಲ್ ಅಜೀಜ್, ಯತೀಶ್ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next