Advertisement

ಕಾಪು ಪುರಸಭಾ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

02:47 PM Dec 15, 2021 | Team Udayavani |

ಕಾಪು: ಕಾಪು ಪುರಸಭಾ ಚುನಾವಣೆಯು ಡಿ.27 ರಂದು ನಡೆಯಲಿದ್ದು ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಮಾಜಿ ಸಚಿವ ವಿನಯಕುಮಾರ್ ಸೊರಕೆ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕು‌ಮಾರ್ ಕೊಡವೂರು ಅವರು ಬುಧವಾರ ಕಾಪು ರಾಜೀವ ಭವನದಲ್ಲಿ ನಡೆದ ಜಂಟಿ ಸುದ್ಧಿಗೋಷ್ಟಿಯಲ್ಲಿ ಬಿಡುಗಡೆಗೊಳಿಸಿದರು.

Advertisement

ಅಭ್ಯರ್ಥಿಗಳ ವಿವರ : ಕೈಪುಂಜಾಲು (ಹಿಂದುಳಿದ ವರ್ಗ ಅ ಮಹಿಳೆ) – ಶೋಭಾ ಎಸ್. ಬಂಗೇರ, ಕೋತಲಕಟ್ಟೆ (ಹಿಂದುಳಿದ ವರ್ಗ ಬಿ ಮಹಿಳೆ) – ಫರ್ಜಾನ , ಕರಾವಳಿ (ಹಿಂದುಳಿದ ವರ್ಗ ಬಿ) – ಅರುಣ್ ಕುಮಾರ್ ಶೆಟ್ಟಿ , ಪೊಲಿಪು ಗುಡ್ಡೆ (ಸಾಮಾನ್ಯ) – ಪ್ರಭಾಕರ ಪೂಜಾರಿ, ದಂಡತೀರ್ಥ (ಹಿಂದುಳಿದ ವರ್ಗ ಅ) – ಸುಮಿತ್ರಾ ಪೂಜಾರಿ, ಕಲ್ಯಾ (ಸಾಮಾನ್ಯ ಮಹಿಳೆ) – ಚರಿತಾ ದೇವಾಡಿಗ, ಭಾರತ್ ನಗರ (ಸಾಮಾನ್ಯ) – ಅಮೀರ್ ಮೊಹಮ್ಮದ್ / ಹರೀಶ್ ಕೆ. ನಾಯಕ್ , ಬೀಡು ಬದಿ (ಸಾಮಾನ್ಯ) – ಅಶ್ವಿನಿ, ಪೊಲಿಪು (ಹಿಂದುಳಿದ ವರ್ಗ ಅ ಮಹಿಳೆ) –  ರಾಧಿಕಾ ಎಸ್. ಸುವರ್ಣ, ಕಾಪು ಪೇಟೆ (ಸಾಮಾನ್ಯ ಮಹಿಳೆ) – ಆಶಾ ಶಂಕರ್, ಲೈಟ್ ಹೌಸ್ (ಹಿಂದುಳಿದ ವರ್ಗ ಅ) – ರಾಜೇಶ್ ಮೆಂಡನ್, ಕೊಪ್ಪಲಂಗಡಿ (ಪರಿಶಿಷ್ಟ ಪಂಗಡ) – ಲತೀಶ್ ಕೋಟ್ಯಾನ್ , ತೊಟ್ಟಂ (ಪರಿಶಿಷ್ಟ ಜಾತಿ) – ಸತೀಶ್ಚಂದ್ರ, ದುಗ್ಗನ್‌ತೋಟ (ಸಾಮಾನ್ಯ) – ಮಹಮ್ಮದ್ ಆಸೀಫ್, ಮಂಗಳಪೇಟೆ (ಸಾಮಾನ್ಯ ಮಹಿಳೆ) – ಝರೀನಾ ಮೂಳೂರು , ಜನಾರ್ದನ ದೇವಸ್ಥಾನ (ಹಿಂದುಳಿದ ವರ್ಗ ಅ ಮಹಿಳೆ) – ಶುಭಾ ಎಸ್. ದೇವಾಡಿಗ, ಬಡಗರಗುತ್ತು (ಸಾಮಾನ್ಯ ಮಹಿಳೆ) – ವಿದ್ಯಾ ಲತಾ, ಕೊಂಬಗುಡ್ಡೆ (ಹಿಂದುಳಿದ ವರ್ಗ ಅ) – ಮಹಮ್ಮದ್ ಇಮ್ರಾನ್, ಜನರಲ್ ಶಾಲೆ (ಸಾಮಾನ್ಯ ಮಹಿಳೆ) – ಸಾಯಿರಾ, ಗುಜ್ಜಿ (ಪರಿಶಿಷ್ಟ ಜಾತಿ ಮಹಿಳೆ) – ಪುಷ್ಪಾ ರಾಣ್ಯ, ಗರಡಿ (ಸಾಮಾನ್ಯ) – ಶಾಂತಲತಾ ಎಸ್. ಶೆಟ್ಟಿ, ಕುಡ್ತಿಮಾರ್ (ಸಾಮಾನ್ಯ ಮಹಿಳೆ) – ರಫೂಸ್ ಶಾಬು ಸಾಹೇಬ್ , ಅಹಮ್ಮದಿ ಮೊಹಲ್ಲಾ (ಸಾಮಾನ್ಯ) – ಅಬ್ದುಲ್ ಅಜೀಜ್ ಅವರನ್ನು ಅಭ್ಯರ್ಥಿಗಳೆಂದು ಘೋಷಿಸಲಾಯಿತು.

ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರದ ಜ‌ನ ವಿರೋಧಿ ನೀತಿ, ಪುರಸಭೆ ವ್ಯಾಪ್ತಿಯ ಅಭಿವೃದ್ಧಿಯಲ್ಲಿ ಶಾಸಕರ ನಿರ್ಲಕ್ಷ್ಯ ನೀತಿ ಹಾಗೂ ಕಾಂಗ್ರೆಸ್ ಸರಕಾರದ ಆಡಳಿತಾವಧಿಯಲ್ಲಿ ಕೈಗೆತ್ತಿಕೊಂಡ ಅಭಿವೃದ್ಧಿ ಯೋಜನೆಗಳನ್ನು ನಿರ್ಲಕ್ಷಿಸಿರುವ ವಿಚಾರಗಳನ್ನು ಮುಂದಿಟ್ಟುಕೊಂಡು ಈ ಬಾರಿಯ ಚುನಾವಣೆಯನ್ನು ಎದುರಿಸಲಿದ್ದೇವೆ ಎಂದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಮಾಜಿ ಸಚಿವ ವಿನಯಕುಮಾರ್ ಸೊರಕೆಯವರ ನೇತೃತ್ವದಲ್ಲಿ ಈ ಬಾರಿಯ ಪುರಸಭಾ ಚುನಾವಣೆಯನ್ನು ಎದುರಿಸಲಿದ್ದು, ಸ್ಪಷ್ಟ ಬಹುಮತದೊಂದಿಗೆ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ನಡೆಸಲಿದೆ. ವಿಧಾನ ಪರಿಷತ್ ಚುನಾವಣೆಯ ಮಾದರಿಯಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆಗೆ ಸಿದ್ದತೆ ನಡೆಸುತ್ತಿದೆ ಎಂದರು.

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಫೂರ್, ಕೆಪಿಸಿಸಿ ಸಂಯೋಜಕರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ನವೀನ್ ಚಂದ್ರ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಪಕ್ಷದ ಮುಖಂಡರಾದ ಮಹಮ್ಮದ್ ಸಾಧಿಕ್, ಸರಸು ಬಂಗೇರ, ಗೀತಾ ವಾಗ್ಲೆ, ಪ್ರಭಾ ಶೆಟ್ಟಿ, ರಮೀಜ್ ಹುಸೈನ್, ಶರ್ಫುದ್ದೀನ್ ಶೇಖ್ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next