Advertisement

Kapu ಇನ್ನಂಜೆ : ಚಿರತೆಯ ಕಳೇಬರ ಪತ್ತೆ

07:13 PM Oct 06, 2023 | Team Udayavani |

ಕಾಪು: ಮೂರುವರೆ ವರ್ಷ ಪ್ರಾಯದ ಗಂಡು ಚಿರತೆಯೊಂದರ ಮೃತದೇಹ ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲುಗುಡ್ಡೆ ಕುಂಜಾರ್ಗ ಬಳಿಯ ಕಾಡಿನಲ್ಲಿ ಶುಕ್ರವಾರ ಮಧ್ಯಾಹ್ನ ಪತ್ತೆಯಾಗಿದೆ.

Advertisement

ಇನ್ನಂಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಬೆಳೆ ಸಮೀಕ್ಷೆಗೆ ತೆರಳಿದ್ದ ಗ್ರಾಮ ಆಡಳಿತಾಧಿಕಾರಿ ಅವಿನಾಶ್ ಮತ್ತು ಗ್ರಾಮ ಸಹಾಯಕ ಜೇಸುದಾಸ್ ಸೋನ್ಸ್ ಅವರು ಕುಂಜಾರ್ಗದಲ್ಲಿ ಸತ್ತಿರುವ ಚಿರತೆಯನ್ನು ಗಮನಿಸಿದ್ದರು.

ಚಿರತೆ ಮೃತಪಟ್ಟಿರುವ ಮಾಹಿತಿಯನ್ನು ಇನ್ನಂಜೆ ಗ್ರಾ. ಪಂ. ಅಧ್ಯಕ್ಷೆ ಮಾಲಿನಿ ಶೆಟ್ಟಿ ಅರಣ್ಯ ಇಲಾಖೆ ಮತ್ತು ಪಶು ಇಲಾಖೆಗೆ ತಿಳಿಸಿದ್ದು ಕುಂದಾಪುರ ಉಪವಿಭಾಗದ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ, ಪಡುಬಿದ್ರಿ ಉಪ ವಲಯ ಅರಣ್ಯಾಧಿಕಾರಿಗಳಾದ ಜೀವನ್‌ದಾಸ್ ಶೆಟ್ಟಿ, ಗುರುರಾಜ್ ಕೆ. ಹಾಗೂ ಕಾಪು ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾಣ ಅರುಣ್ ಹೆಗ್ಡೆ ಸ್ಥಳಕ್ಕೆ ಆಗಮಿಸಿ ಚಿರತೆಯ ಮೃತದೇಹ ಪರಿಶೀಲನೆ ನಡೆಸಿದ್ದಾರೆ.

ಬಳಿಕ ಗಸ್ತು ಅರಣ್ಯ ಪಾಲಕರಾದ ಮಂಜುನಾಥ ಬಿ. ನಾಯಕ್, ಚರಣ್ ಜೋಗಿ, ಅಭಿಲಾಷ್, ವಾಹನ ಚಾಲಕ ಜಾಯ್, ನೇತೃತ್ವದಲ್ಲಿ ಸ್ಥಳೀಯರಾದ ರಾಜೇಂದ್ರ ಪ್ರಭು, ರಘುರಾಮ ಪ್ರಭು, ಕೃಷ್ಣ ಮೂಲ್ಯ ಮೊದಲಾದವರ ಸಹಕಾರದೊಂದಿಗೆ ಸಮೀಪದ ಗದ್ದೆಯೊಂದರಲ್ಲಿ ಅರಣ್ಯ ಇಲಾಖೆಯ ಸಂಪ್ರದಾಯದಂತೆ ದಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next