Advertisement

Kapu Hosa Marigudi Temple: ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪ್ರಕಾಶ್‌ ಶೆಟ್ಟಿ ಚಾಲನೆ

01:01 AM Apr 11, 2024 | Team Udayavani |

ಕಾಪು: ಕಾಪು ಹೊಸ ಮಾರಿಗುಡಿ ಸುಂದರ ವಾಗಿ ಮೂಡಿ ಬರುತ್ತಿದ್ದು ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಲಾಗಿದೆ. ಈ ಬ್ರಹ್ಮಕಲಶೋತ್ಸವವು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವ ಕಾರ್ಯಕ್ರಮವಾಗಿ ಮೂಡಿ ಬರಬೇಕಿದೆ. ಅದಕ್ಕಾಗಿ ನಾವೆಲ್ಲರೂ ಪ್ರಯತ್ನಶೀಲರಾಗೋಣ ಎಂದು ಬೆಂಗಳೂರು ಎಂಆರ್‌ಜಿ ಗ್ರೂಪ್‌ನ ಆಡಳಿತ ನಿರ್ದೇಶಕ ಪ್ರಕಾಶ್‌ ಶೆಟ್ಟಿ ಬಂಜಾರ ಹೇಳಿದರು.

Advertisement

30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಮಂಗಳವಾರ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೆಳದಿ ಸಾಮ್ರಾಜ್ಯದ ವೀರಶೈವ ಸಮುದಾಯದ ಗುರುಪುರ ಜಂಗಮ ಸಂಸ್ಥಾನ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ, ನಾವೆಲ್ಲರೂ ಜತೆಗೂಡಿ ಅಮ್ಮನನ್ನು ವೈಭವದೊಂದಿಗೆ ಗದ್ದುಗೆಯಲ್ಲಿ ಪ್ರತಿಷ್ಠಾಪಿಸೋಣ ಎಂದರು. ವಾಸ್ತುತಜ್ಞ ವಿದ್ವಾನ್‌ ಸುಬ್ರಹ್ಮಣ್ಯ ಭಟ್‌ ಗುಂಡಿಬೈಲು ಮಾತನಾಡಿದರು.

ಕೊರಂಗ್ರಪಾಡಿ ಕೆ.ಜಿ. ರಾಘವೇಂದ್ರ ತಂತ್ರಿಗಳ ಮಾರ್ಗದರ್ಶನದಲ್ಲಿ, ಕ್ಷೇತ್ರದ ಪ್ರಧಾನ ತಂತ್ರಿ ವಿದ್ವಾನ್‌ ಕೆ.ಪಿ. ಕುಮಾರಗುರು ತಂತ್ರಿಗಳ ನೇತೃತ್ವದಲ್ಲಿ ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯ ಸನ್ನಿಧಿಯಲ್ಲಿ ಪ್ರಾರ್ಥಿಸಿ, ಭೂಕರ್ಷಣ ಖನನ, ಹರಣ, ದಾಹ, ಪೂರಣ, ಬೀಜ ವಪನ ಮೊದಲಾದ ಪ್ರಾಚೀನ ಶೈಲಿಯ ಧಾರ್ಮಿಕ ಕಾರ್ಯಕ್ರಮ ನೆರವೇರಿತು.

ಶಿಲಾನ್ಯಾಸ, ಸಮಿತಿ ಉದ್ಘಾಟನೆ
ನೂತನ ರಾಜಗೋಪುರ, ಭೋಜನ ಶಾಲೆ ಹಾಗೂ ಸುಸಜ್ಜಿತ ಶೌಚಾಲಯಕ್ಕೆ ಭೂಮಿ ಪೂಜೆ ಸಹಿತ ಶಂಕು ಸ್ಥಾಪನೆಗೈಯಲಾಯಿತು. ಪ್ರಕಾಶ್‌ ಶೆಟ್ಟಿ ಬಂಜಾರ ನೇತೃತ್ವದ ಬ್ರಹ್ಮಕಲಶೋತ್ಸವ ಸಮಿತಿ ಮತ್ತು ಮುಂಬಯಿ ಸಾಯಿ ಪ್ಯಾಲೇಸ್‌ ಗ್ರೂಪ್‌ ಆಫ್‌ ಹೊಟೇಲ್ಸ್‌ನ ಆಡಳಿತ ನಿರ್ದೇಶಕ ರವಿ ಸುಂದರ್‌ ಶೆಟ್ಟಿ ನೇತೃತ್ವದ ಸ್ವರ್ಣ ಗದ್ದುಗೆ ಸಮರ್ಪಣ ಸಮಿತಿಯನ್ನು ಉದ್ಘಾಟಿಸಲಾಯಿತು. ಕ್ಷೇತ್ರದ ಕುರಿತಾದ ಆಲ್ಬಂ ಸಾಂಗ್‌ ಅನ್ನು ಬಿಡುಗಡೆಗೊಳಿಸಲಾಯಿತು.

Advertisement

ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌, ಗಣ್ಯರಾದ ಆನಂದ್‌ ಎಂ. ಶೆಟ್ಟಿ ಮುಂಬಯಿ, ರವಿ ಸುಂದರ ಶೆಟ್ಟಿ ಮುಂಬಯಿ, ರಂಜನಿ ಸುಧಾಕರ್‌ ಹೆಗ್ಡೆ ಮುಂಬಯಿ, ಸುಜಾತ್‌ ಶೆಟ್ಟಿ ದುಬಾೖ, ಅದಾನಿ ಗ್ರೂಪ್‌ನ ಕಿಶೋರ್‌ ಆಳ್ವ, ಜಯ ಸಿ. ಕೋಟ್ಯಾನ್‌, ನ್ಯಾಯವಾದಿ ಮಹೇಶ್‌ ಕೋಟ್ಯಾನ್‌, ಸುಗ್ಗಿ ಸುಧಾಕರ್‌ ಶೆಟ್ಟಿ, ಕೃಷ್ಣ ವೈ. ಶೆಟ್ಟಿ, ಮಹೇಶ್‌ ಕುಮಾರ್‌ ಆಫ್ರಿಕಾ, ಸಂತೋಷ್‌ ಶೆಟ್ಟಿ ಇನ್ನಾ ಕುರ್ಕಿಲ್‌ಬೆಟ್ಟು, ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್‌ ಹೆಗ್ಡೆ, ಕೋಶಾಧಿಕಾರಿ ರವಿಕಿರಣ್‌ ಕೆ., ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಮಾಧವ ಪಾಲನ್‌, ದೇವಿಪ್ರಸಾದ್‌ ಶೆಟ್ಟಿ ಬೆಳಪು, ಮನೋಹರ್‌ ಶೆಟ್ಟಿ, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ್‌ ಸುಂದರ್‌ ಶೆಟ್ಟಿ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್‌ ಶೆಟ್ಟಿ ಬಾಲಾಜಿ, ಮಾಜಿ ಆಡಳಿತ ಮೊಕ್ತೇಸರ ನಡಿಕೆರೆ ರತ್ನಾಕರ ಶೆಟ್ಟಿ ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಸ್ವಾಗತಿಸಿದರು. ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ ವಂದಿಸಿದರು. ಸತೀಶ್‌ ಶೆಟ್ಟಿ ಗುಡ್ಡೆಚ್ಚಿ ನಿರೂಪಿಸಿದರು.

2025ರ ಮಾ. 2ಕ್ಕೆ ಪುನಃಪ್ರತಿಷ್ಠೆ
2025ರ ಮಾರ್ಚ್‌ 2ರಂದು ಸ್ವರ್ಣ ಗದ್ದುಗೆಯಲ್ಲಿ ಮಾರಿಯಮ್ಮ ದೇವಿಯ ಪುನಃಪ್ರತಿಷ್ಠೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next