Advertisement

Kapu: ಬಾಲಕಿ ಅತ್ಯಾಚಾರ ಪ್ರಕರಣ; ಆರೋಪಿ ಬಳ್ಳಾರಿಯಲ್ಲಿ ಸೆರೆ

11:13 PM Jun 10, 2024 | Team Udayavani |

ಕಾಪು: ಅಪ್ರಾಪ್ತ ವಯಸ್ಸಿನ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ನಡೆಸಿ 2 ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣದ ಆರೋಪಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

Advertisement

ವಿಜಯನಗರ ಜಿಲ್ಲೆಯ ಹಟ್ಟಿ ಚಿರಾತಗುಂದ ನಿವಾಸಿ ಚೇತನ್‌ ಯಾನೆ ತಿಪ್ಪೇಶ್‌ ಬಂಧಿತ ಆರೋಪಿ. ಈತ ಕಳೆದ ವರ್ಷ ಅ.15ರಿಂದ 25ರ ನಡುವಿನ ಅವಧಿಯಲ್ಲಿ ಶಂಕರಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಬಾಲಕಿಯನ್ನು ಪರಿಚಯ ಮಾಡಿಕೊಂಡು ಅತ್ಯಾಚಾರ ಎಸಗಿ ಗರ್ಭಿಣಿಯನ್ನಾಗಿಸಿದ್ದ. ಎರಡು ತಿಂಗಳ ಬಳಿಕ ಈ ವಿಚಾರ ಮನೆಯವರಿಗೆ ಗೊತ್ತಾಗಿ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ಬಾಲಕಿಯನ್ನು ಶಿವಮೊಗ್ಗ ಸುರಭಿ ಉಜ್ವಲ ಕೆಂದ್ರಕ್ಕೆ ದಾಖಲಿಸಲಾಗಿತ್ತು.

ಶಿರಾಳಕೊಪ್ಪ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ಕಾಪು ಠಾಣೆಗೆ ವರ್ಗಾಯಿಸಿದ್ದು, ನೊಂದ ಬಾಲಕಿಯ ಹೇಳಿಕೆಯಂತೆ 2024ರ ಮಾ. 19ರಂದು ಚೇತನ್‌ ಯಾನೆ ತಿಪ್ಪೇಶ್‌ನ ವಿರುದ್ಧ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆದರೆ ಆರೋಪಿ ತಲೆಮರೆಸಿಕೊಂಡಿದ್ದ. ಆರೋಪಿಯ ಜಾಡು ಹಿಡಿದ ಕಾಪು ಠಾಣೆಗೆ ಸಿಬಂದಿ ನಾರಾಯಣ ಮತ್ತು ರುಕ್ಮಯ ಅವರು ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ಮತ್ತು ಎಸ್‌ಐ ಅಬ್ದುಲ್‌ ಖಾದರ್‌ ಅವರ ಸೂಚನೆಯಂತೆ ವಿಜಯನಗರಕ್ಕೆ ಬಳಿಕ ಬಳ್ಳಾರಿಗೆ ತೆರಳಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ನ್ಯಾಯಾಂಗ ಬಂಧನ: ಆರೋಪಿಗೆ ನ್ಯಾಯಾಲಯವು ಜೂ. 20ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಾಪು ಪೊಲೀಸರ ಕಾರ್ಯಾಚರಣೆಗೆ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next