ಕಾಪು: ಲಾಕ್ ಡೌನ್ ಸಿಲುಕಿಗೊಂಡಿದ್ದ ವಲಸೆ ಕಾರ್ಮಿಕರಿಗೆ ಊರಿಗೆ ತೆರಳಲು ಸರ್ಕಾರದ ಆದೇಶದ ಪ್ರಕಾರ ಕಾಪು ತಾಲೂಕಿನ ವಲಸೆ ಕಾರ್ಮಿಕರನ್ನು ಆದಿತ್ಯವಾರ ಪುರಸೌಧ ಬಳಿ ಆರೋಗ್ಯ ತಪಾಸಣೆ ಮಾಡಿ ಸರ್ಕಾರಿ ಬಸ್ಸುಗಳ ಮೂಲಕ ಸ್ವಂತ ಊರಿಗೆ ತೆರಳಲು ಅವಕಾಶ ಮಾಡಿದರು.
ಸುಮಾರು 300 ಕ್ಕೂ ಅಧಿಕ ವಲಸೆ ಕಾರ್ಮಿಕರು ಸಾಮಾನು ಸರಂಜಾಮುಗಳೊಂದಿಗೆ ಊರಿಗೆ ತೆರಳಲು ಸಿದ್ದತೆ ನಡೆಸಿದ್ದಾರೆ.
ಈ ಸಂಧರ್ಭದಲ್ಲಿ ಕಾಪು ತಹಶಿಲ್ದಾರ್ ಮಹಮ್ಮದ್ ಇಸಾಕ್ ಮಾತಾಡಿ” ಕಾಪು ತಾಲೂಕು ವ್ಯಾಪ್ತಿಯ ವಲಸೆ ಕಾರ್ಮಿಕರಿಗೆ ಅವರವರ ಗ್ರಾಮಕ್ಕೆ ತೆರಳಲು ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ವ್ಯವಸ್ಥೆ ಮಾಡಲಾಗಿದ್ದು ಮೊದಲ ಹಂತದಲ್ಲಿ ಸುಮಾರು ಮುನ್ನೂರಕ್ಕೂ ಅಧಿಕ ಕಾರ್ಮಿಕರು ತೆರಳಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಂದಾಯ ಪರಿವೀಕ್ಷಕ ರವಿಶಂಕರ್, ಕಾಪು ಪಿಎಸ್ಐ ರಾಜಶೇಖರ ಸಾಗನೂರು,ಗ್ರಾಮಕರಣಿಕರು ಉಪಸ್ಥಿತರಿದ್ದರು.