Advertisement
ಕಾಪು ಪುರಸಭೆಯ ಎಲ್ಲ ಪೌರ ಕಾರ್ಮಿಕರು ಕೂಡಾ ಕೋವಿಡ್ 19 ಆತಂಕದ ನಡುವೆಯೂ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. 24 ಮಂದಿ ಪೌರ ಕಾರ್ಮಿಕರು, ಅವರೊಂದಿಗೆ 5 ಮಂದಿ ಚಾಲಕರು ಪುರಸಭೆಯ ಪ್ರತಿ ವಾರ್ಡ್‌ಗಳಿಗೂ ತೆರಳಿ, ಅಲ್ಲಿ ಸಂಗ್ರಹವಾಗಿರುವ ಹಸಿ ಕಸ – ಒಣ ಕಸಗಳನ್ನು ಪುರಸಭೆ ನಿಗದಿ ಪಡಿಸಿರುವ ಕಾನೂನಿನಂತೆಯೇ ಸಂಗ್ರಹಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಅವರೊಂದಿಗೆ ಪುರಸಭೆ ತ್ಯಾಜ್ಯ ಸಂಗ್ರಹಣ ಯಾರ್ಡ್‌ನಲ್ಲಿ 4 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ.
ಸರಕಾರದ ನಿರ್ದೇಶನದಂತೆ ಹಿಂದಿನಂತೆಯೇ ಪುರಸಭೆ ವ್ಯಾಪ್ತಿಯಲ್ಲಿ ಎಲ್ಲರೀತಿಯ ಕಸ-ತ್ಯಾಜ್ಯಗಳನ್ನೂ ಪೌರ ಕಾರ್ಮಿಕರು ಸಂಗ್ರಹಿಸುತ್ತಿದ್ದಾರೆ. ಆದರೆ ಮನೆಗಳಲ್ಲಿ ಬಳಸಿರುವ ಗ್ಲೌಸ್‌ಗಳನ್ನು ತ್ಯಾಜ್ಯ ಸಂಗ್ರಹಣೆಯ ವಾಹನಗಳಿಗೆ ನೀಡದಂತೆ ನಾಗರಿಕರಿಗೆ ಸೂಚನೆ ನೀಡಲಾಗಿದೆ. ಪೌರ ಕಾರ್ಮಿಕರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಜನರಲ್ಲಿ ವಿವಿಧ ರೀತಿಯ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಲಾಗಿದೆ. ಸಾರ್ವಜನಿಕರು ಕೂಡಾ ಪೌರ ಕಾರ್ಮಿಕರನ್ನು ಕೂಡಾ ನಮ್ಮಂತೆಯೇ ಎಂದು ತಿಳಿದು ಅವರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಬೇಕಿದೆ.
– ವೆಂಕಟೇಶ್ ನಾವುಡ, ಮುಖ್ಯಾಧಿಕಾರಿ, ಕಾಪು ಪುರಸಭೆ
Related Articles
ಕಾಪು ಪುರಸಭೆ ವ್ಯಾಪ್ತಿಯ ಜನರ ಆರೋಗ್ಯದ ಹಿತದೃಷ್ಟಿಯಿಂದ ನಮ್ಮ ಕೆಲಸವನ್ನು ಮುಂದುವರಿಸುತ್ತಿದ್ದೇವೆ. ನಮ್ಮ ಆರೋಗ್ಯದ ದೃಷ್ಟಿಯಿಂದ ಸ್ಯಾನಿಟೈಸರ್, ಹ್ಯಾಂಡ್ ವಾಶ್‌ಗೆ ಬೇಕಾದ ಲಿಕ್ವಿಡ್, ಸೋಪು, ಮಾಸ್ಕ್, ಕೈ ಗ್ಲೌಸ್ ಇತ್ಯಾದಿ ಅಗತ್ಯದ ವಸ್ತುಗಳನ್ನು ಪುರಸಭೆ ವತಿಯಿಂದಲೇ ನೀಡಿದ್ದಾರೆ. ಪ್ರತೀ ನಿತ್ಯದಂತೆ ಬೆಳಗ್ಗೆ 6 ಗಂಟೆಯಿಂದ ಕಸ ಗುಡಿಸುವಿಕೆ ಸಹಿತವಾಗಿ ನಾವು ಖುಷಿಯಿಂದ ದಿನ ನಿತ್ಯದಂತೆ ಕೆಲಸ ನಿರ್ವಹಿಸುತ್ತಿದ್ದೇವೆ. ಪುರಸಭೆ ಮುಖ್ಯಾಧಿಕಾರಿ ಸಹಿತವಾಗಿ ಅಧಿಕಾರಿಗಳು ನಿರಂತರ ಮಾರ್ಗದರ್ಶನ ನೀಡುತ್ತಿದ್ದಾರೆ. ಜನರ ಪೂರ್ಣ ಸಹಕಾರವೂ ಅಗತ್ಯವಾಗಿದೆ.
-ಪೌರ ಕಾರ್ಮಿಕರು, ಕಾಪು ಪುರಸಭೆ
Advertisement