ಕಾಪು : ತೌಕ್ತೆ ಚಂಡಮಾರುತದಿಂದ ಆಗಿರುವ ಅನಾಹುತಗಳ ಪರಿಶೀಲನೆಗೆ ಕೇಂದ್ರ ಸರಕಾರದ ಐಎಂಸಿ ಟಿ ತಂಡ ಉಡುಪಿ ಜಿಲ್ಲೆಯಾದ್ಯಂತ ಸರ್ವೇಕ್ಷಣೆ ಕಾರ್ಯವನ್ನು ಗುರುವಾರ ಆರಂಭಿಸಿದೆ.
ತಿಂಗಳ ಹಿಂದೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವುಂಟಾಗಿ ತೌಕ್ತೆ ಚಂಡಮಾರುತ ಎದ್ದಿತ್ತು. ಸುಮಾರು ನಾಲ್ಕು ದಿನಗಳ ಕಾಲ ಉಡುಪಿ ಜಿಲ್ಲೆಯ ಉದ್ದಕ್ಕೂ ಭಾರಿ ಗಾಳಿ-ಮಳೆ ಉಂಟಾಗಿತ್ತು. ಸಮುದ್ರ ಕೊರೆತದ ಜೊತೆ ಅಪಾರ ಪ್ರಮಾಣದ ಆಸ್ತಿಪಾಸ್ತಿ, ರಸ್ತೆ , ಕೃಷಿ ಬೆಳೆಗಳು ಹಾನಿಗೀಡಾಗಿದ್ದವು. ಮನೆ ಮೀನುಗಾರಿಕಾ ಶೆಡ್ ಗಳ ಮೇಲೆ ಮರ ಬಿದ್ದು ಹಾನಿ ಉಂಟಾಗಿತ್ತು. ಎಲ್ಲಾ ಅನಾಹುತಗಳ ಪರಿಶೀಲನೆಗಾಗಿ ಕೇಂದ್ರ ಸರಕಾರದ ಐಎಂಸಿ ಟಿ ತಂಡ ಉಡುಪಿ ಜಿಲ್ಲೆಯಾದ್ಯಂತ ಸರ್ವೇಕ್ಷಣೆ ನಡೆಸಿದೆ.
ಪಡುಬಿದ್ರಿ ನಡಿಪಟ್ಣ ಪ್ರದೇಶದಲ್ಲಿನ ಹಾನಿಯನ್ನು ವೀಕ್ಷಿಸಿದ ತಂಡವು ಬ್ಲೂ ಫ್ಲ್ಯಾಗ್ ಬೀಚ್ ಗೂ ಭೇಟಿಯಿತ್ತು ವಾಪಾಸಾಗಿದೆ.ಕರಾವಳಿಯ ಭಾಗಕ್ಜೆ ೨೦೯ ಕೋಟಿ ರೂ., ಸೊತ್ತು ಹಾನಿಯ ಕುರಿತಾಗಿ ೧೦.೬೯ಕೋಟಿ ರೂ. ಗಳ ವರದಿಯನ್ನು ಕೇಂದ್ರ ಸರಕಾರಕ್ಕೆ ರವಾನಿಸಲಾಗಿದೆ. ಅದನ್ನು ಅನುಸರಿಸಿ ಇಂದಿನ ಡವು ಆಗಮಿಸಿ ಪರಿಶೀಲಿಸಿದೆ ಎಂದು ರಾಜ್ಯ ಪ್ರಾಕೃತಿಕ ವಿಪತ್ತು ನಿರ್ವಹಣಾ ತಂಡದ ಮುಖ್ಯಸ್ಥ ಕಮಿಶನರ್ ಮನೋಜ್ ತಿಳಿಸಿದರು.
ಈ ಬಗ್ಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಕಾಪುವಿನಲ್ಲಿ ಮಾತನಾಡಿ,ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಲು ಕೇಂದ್ರದಿಂದ ತಂಡ ಆಗಮಿಸಿದೆ ಶಿರೂರಿನಿಂದ ಪಡುಬಿದ್ರಿವರೆಗೆ ಪರಿಶೀಲನೆ ನಡೆಯಲಿದೆ.ಕರಾವಳಿಯ ಮೂರು ತಾಲೂಕುಗಳಲ್ಲಿ ಈ ತಂಡ ಅಧ್ಯಯನ ನಡೆಸಿ ವರದಿಯನ್ನು ತಯಾರುಮಾಡಿ ದೆಹಲಿಯಲ್ಲಿ ಗೃಹ ಸಚಿವಾಲಯಕ್ಕೆ ನೀಡಲಿದೆ. ಆನಂತರ ಕೇಂದ್ರ ವಿಶೇಷ ಪರಿಹಾರ ಘೋಷಣೆ ಮಾಡಲಿದೆ ಎಂದರು.ಕಾಪುವಿನಲ್ಲಿ ತಹಶಿಲ್ದಾರ್ ಪ್ರತಿಭಾ ಆರ್,ಎಸಿ ಕೆ. ರಾಜು, ಕೆಎಸ್ಪಿ ಕುಮಾರ ಚಂದ್ರ ,ವ್ರತ್ತ ನಿರೀಕ್ಷಕ ಪ್ರಕಾಶ್, ಕಂದಾಯ ಅಧಿಕಾರಿಗಳು ಪರಿಶೀಲನೆ ಸಂದರ್ಭ ಇದ್ದರು.